ಸ್ಮಾರ್ಟ್ಫೋನ್ ತಯಾರಿಕರಾದ ಆಸುಸ್ ಶೀಘ್ರದಲ್ಲೇ ಅದರ ಮುಂದಿನ ಪ್ರಮುಖ ಹ್ಯಾಂಡ್ಸೆಟ್ Asus ZenFone 6 ಅನ್ನು ಪ್ರಾರಂಭಿಸುತ್ತದೆ. ಕಂಪನಿಯು ಈ ಫೋನ್ನಲ್ಲಿ ಧೀರ್ಘಕಾಲದವರೆಗೆ ಕಾರ್ಯನಿರ್ವಹಿಸುತ್ತಿದೆ. ಈ ಫೋನ್ ಬಗ್ಗೆ ಹಲವಾರು ಸೋರಿಕೆಯೊಂದಿಗೆ ಟೀಸರ್ ಬಿಡುಗಡೆ ಮಾಡಲಾಗಿದೆ. ಇದು ಮೇ 16 ರಂದು Asus ZenFone 6 ಸ್ಮಾರ್ಟ್ಫೋನ್ ಸ್ಪೇನ್ನಲ್ಲಿ ಬಿಡುಗಡೆ ಮಾಡಲಿದೆ. ಬಿಡುಗಡೆಗೆ ಮೊದಲು ಅದರ ಬೆಲೆ ಸೋರಿಕೆಯಾಗಿದೆ. ಸುದ್ದಿಯ ಪ್ರಕಾರ ಈ ಫೋನ್ನ ಆರಂಭಿಕ ಬೆಲೆ 19,990 ಥೈವಾನೀ ಡಾಲರ್ ಅಂದ್ರೆ ಭಾರತದಲ್ಲಿ ಸುಮಾರು 44,880 ರೂಗಳಿಗೆ ಬರುವ ನಿರೀಕ್ಷೆಯಿದೆ.
ಈಗಾಗಲೇ ithome ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಈ ಫೋನ್ ಮೂರು ರೂಪಾಂತರಗಳಲ್ಲಿ ಬರುವುದಾಗಿ ನಿರೀಕ್ಷಿಸಲಾಗಿದೆ. ಇದರ ಮೊದಲ ರೂಪಾಂತರ 6GB ಯ RAM ಮತ್ತು 128GB ಯ ಸ್ಟೋರೇಜ್ ಸೌಲಭ್ಯವನ್ನು ಹೊಂದಿರುತ್ತದೆ. ಈಗಾಗಲೇ ಮೇಲೆ ಹೇಳಿರುವಂತೆ ಇದು ಸುಮಾರು 19,990 ಥೈವಾನೀ ಡಾಲರ್ಗಳನ್ನು ವೆಚ್ಚವಾಗಲಿದೆ ಇದು ಸುಮಾರು 44,880 ರೂಪಾಯಿಗಳು. ಅದೇ ಸಮಯದಲ್ಲಿ ಇದರ 8GB ಯ RAM ಮತ್ತು 256GB ಸ್ಟೋರೇಜ್ ರೂಪಾಂತರಗಳು 23,990 ಥೈವಾನೀ ಡಾಲರ್ಗಳಿಗೆ ವೆಚ್ಚವಾಗಲಿದ್ದು ಇದು ರೂ 53,862 ಆಗಿದೆ. ಇದಲ್ಲದೆ ಇದರಲ್ಲಿ 12GB ಯ RAM ಮತ್ತು 512GB ಯ ಸ್ಟೋರೇಜ್ ಸ್ಮಾರ್ಟ್ಫೋನ್ ರೂಪಾಂತರಗಳ ಬೆಲೆ 29,990 ತೈವಾನ್ ಡಾಲರ್ಗಳಾಗಿದ್ದು ಇದು ಸುಮಾರು 67,333 ರೂಗಳಲ್ಲಿ ಬರುವ ಸಾಧ್ಯತೆಗಳಿವೆ.
https://twitter.com/ASUS/status/1123920067605876737?ref_src=twsrc%5Etfw
ಕಂಪೆನಿಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟೀಸರ್ ಬಿಡುಗಡೆಯಾಯಿತು. ಅದರ ಅಡಿಬರಹ 'Defy Ordinary' ಆಗಿದೆ. ಇದು ಫೋನ್ ವಿನ್ಯಾಸವನ್ನು ಸೂಚಿಸುತ್ತದೆ. ಫೋನನ್ನು ವಿಭಿನ್ನ ವಿನ್ಯಾಸದೊಂದಿಗೆ ನೀಡಬಹುದೆಂದು ನಂಬಲಾಗಿದೆ. ಇದರ ಟೀಸರ್ನ ಪ್ರಕಾರ ಫೋನ್ನಲ್ಲಿ ಸಣ್ಣ ಆಡಿಯೋ ಸ್ಪೀಕರ್ ಮತ್ತು ಸ್ಮಾರ್ಟ್ಫೋನ್ ಚೌಕಟ್ಟಿನ ನಡುವೆ ಸ್ಥಳಾವಕಾಶ ನೀಡಲಾಗಿದೆ. ಅದೇ ರೀತಿಯಾಗಿ ರೆಂಡರ್ ಇಮೇಜ್ ಕೂಡಾ ಮೊದಲು ಸೋರಿಕೆಯಾಯಿತು. ಇದರ ಪ್ರಕಾರ ಡ್ಯುಯಲ್ ಸ್ಲೇಡರ್ಗಳ ವಿನ್ಯಾಸದೊಂದಿಗೆ ಫೋನ್ ಡ್ಯುಯಲ್ ಫ್ರಂಟ್ ಕ್ಯಾಮೆರಾ ಆಗಿರಬಹುದು. ಅದೇ ಸಮಯದಲ್ಲಿ ಈ ವಿನ್ಯಾಸವು ಫೋನ್ನ 5G ರೂಪಾಂತರಗಳೆಂದು ಹೇಳಲಾಗುತ್ತಿದೆ.