ನಮ್ಮ ನಿಮ್ಮೇಲ್ಲರ ನಿರೀಕ್ಷೆಯಂತೆ ಇಂದು ಭಾರತದಲ್ಲಿ ಆಸುಸ್ ಹೊಸ ಸ್ಮಾರ್ಟ್ಫೋನಿನ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ಮೂಲಭೂತವಾಗಿ Asus 6Z ಆಗಿರಬೇಗಿತ್ತು ಆದರೆ ಈ ಸ್ಮಾರ್ಟ್ಫೋನನ್ನು Asus 6 ಎಂದು ಮರುನಾಮಕರಣ ಮಾಡಲ್ಪಟ್ಟಿದೆ. ಈ ಸ್ಮಾರ್ಟ್ಫೋನ್ ಅನ್ನು ಮೂಲತಃ ಯುರೋಪಿಯನ್ ಮಾರುಕಟ್ಟೆಯಲ್ಲಿ ಕಳೆದ ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು. ಇದರ ಮೂಲಕ ಈ ಸ್ಮಾರ್ಟ್ಫೋನಿನ ವಿಶಿಷ್ಟತೆ ಮೋಟಾರೈಸ್ಡ್ ರೊಟೇಟಿಂಗ್ (ಫ್ಲಿಪ್ ತಿರುಗಿಸಬವುದಾದ) ಕ್ಯಾಮೆರಾವನ್ನು ಒಳಗೊಂಡಿದೆ. ಆಸುಸ್ 6Z ಭಾರತ ಬಿಡುಗಡೆಗೆ ಕೆಲವೇ ಗಂಟೆಗಳಿವೆ. ಈ Asus 6 ಸ್ಮಾರ್ಟ್ಫೋನಿನ ಬಗ್ಗೆ ನೀವು ಕೆಲ ಅಂಶಗಳನ್ನು ತಿಳಿಯಬಯಸಿದರೆ ಮುಂದೆ ಓದಿ.
ಈ Asus 6Z ಬಿಡುಗಡೆಯ ಈವೆಂಟ್ ಇಂದು ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಆನ್‌ಲೈನ್‌ನಲ್ಲಿ ಲೈವ್‌ಸ್ಟ್ರೀಮ್ ಆಗುತ್ತದೆ. ನೀವು ಈ ಕಾರ್ಯಕ್ರಮವನ್ನು Facebook, Twitter, YouTube, Flipkart ಮತ್ತು Asus ಅಧಿಕೃತ ವೆಬ್ಸೈಟ್ಗಳ ಮೂಲಕ ಇದರ ಲೈವ್ ವಿಚಾರಣೆಯನ್ನು ಅನುಸರಿಸಬಹುದು. ಇದರ ಪರ್ಯಾಯವಾಗಿ ಕೆಳಗೆ ನೀಡಿರುವ ವೀಡಿಯೊದಲ್ಲಿ ನೀವು ಲೈವ್ ನವೀಕರಣ ಮತ್ತು ಈ ಸ್ಮಾರ್ಟ್ಫೋನಿನ ಫಸ್ಟ್ ಲುಕ್ ಜೊತೆಗೆ ಸಂಪೂರ್ಣ ಮಾಹಿತಿಯನ್ನು ವೀಕ್ಷಿಸಬಹುದು.
ಅದ್ರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಮೋಟಾರೈಸ್ಡ್ ರೊಟೇಟಿಂಗ್ (ಫ್ಲಿಪ್ ತಿರುಗಿಸಬವುದಾದ) ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಅದು ಹಿಂಭಾಗ ಮತ್ತು ಮುಂಭಾಗದ ಕ್ಯಾಮೆರಾದಂತೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದರಲ್ಲಿ 48MP ಮೆಗಾಪಿಕ್ಸೆಲ್ f/ 1.79 ಪ್ರೈಮರಿ ಸೆನ್ಸರ್ ಮತ್ತೊಂದು 13MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ 6.5 ಇಂಚಿನ FHD+ (1080 × 2340 ಪಿಕ್ಸೆಲ್ಗಳು) ಡಿಸ್ಪ್ಲೇಯನ್ನು 19.5: 9 ಅಸ್ಪೆಟ್ ರೇಷುವಿನೊಂದಿಗೆ ಬರಲಿದೆ.
ಇದರಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ನೀಡಲಾಗಿದ್ದು ಡ್ಯುಯಲ್ ಸಿಮ್ ಸಪೋರ್ಟ್ ಮಾಡುತ್ತದೆ. Asus 6Z ಸ್ಮಾರ್ಟ್ಫೋನ್ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಮತ್ತು ಇದು ಕ್ವಿಕ್ ಚಾರ್ಜ್ 4.0 ಗೆ ಬೆಂಬಲವನ್ನು ಹೊಂದಿದೆ. ಫೋನಿನ ಪ್ರೊಟೆಕ್ಷನ್ಗಾಗಿ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ. ವೈ-ಫೈ, ಬ್ಲೂಟೂತ್ 5.0, ಎನ್‌ಎಫ್‌ಸಿ, ಜಿಪಿಎಸ್ ಮತ್ತು USB ಟೈಪ್-ಸಿ ಮತ್ತು 3.5ಎಂಎಂ ಆಡಿಯೋ ಜಾಕ್ ಪೋರ್ಟ್ನಂತಹ ಸಂಪರ್ಕ ಆಯ್ಕೆಗಳಿವೆ. ಸಾಫ್ಟ್‌ವೇರ್ ಮುಂಭಾಗದಲ್ಲಿ ಇದು ಆಂಡ್ರಾಯ್ಡ್ ಪೈ ಅನ್ನು ಚಾಲನೆ ಮಾಡುತ್ತದೆ.
ಈವೆಂಟ್ ಸಮಯದಲ್ಲಿ Asus 6Z ಇಂಡಿಯಾ ಬೆಲೆಗಳ ಬಗ್ಗೆ ತಿಳಿದುಕೊಳ್ಳಬವುದು. ಆದರೆ ದೃಷ್ಟಿಕೋನಕ್ಕಾಗಿ ಈ ಸ್ಮಾರ್ಟ್‌ಫೋನ್‌ನ ಯುರೋಪಿಯನ್ ಬೆಲೆಗಳನ್ನು ಇಲ್ಲಿ ನೋಡೋಣ. ಇದನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಯಿತು. ಮೊದಲನೇಯದು 64GB + 6GB ಯುರೋ 499 ಭಾರತದಲ್ಲಿ ಅಂದಾಜು 39,000 ರೂಗಳು ವೆಚ್ಚವಾಗುತ್ತದೆ. ಮಿಡ್ ವೆರಿಯಂಟ್ 128GB + 6GB ಯುರೋ 559 ಭಾರತದಲ್ಲಿ ಅಂದಾಜು 43,600 ರೂಗಳ ವೆಚ್ಚವಾಗುತ್ತದೆ. ಕೊನೆಯದಾಗಿ ಟಾಪ್ ರೂಪಾಂತರಕ್ಕೆ 256GB + 8GB ಯುರೋ 599 ಭಾರತದಲ್ಲಿ ಅಂದಾಜು 46,700 ರೂಗಳ ವೆಚ್ಚವಾಗುತ್ತದೆ. ಈಗ ಈ ಸ್ಮಾರ್ಟ್ಫೋನ್ ಭಾರತದಲ್ಲಿ ಯಾವ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನುವುದನ್ನು ಇಂದು ಮಧ್ಯಾಹ್ನ 12:30pm ನಂತರವಷ್ಟೇ ಖಚಿತವಾಗಲಿದೆ.