ಆಪಲ್ ತನ್ನ ಐಫೋನ್‌ಗಳಿಗೆ USB-C ಪೋರ್ಟ್ ಅನ್ನು ಸೇರಿಸುವ ಯಾವುದೇ ಆಯ್ಕೆಗಳನ್ನು ಹೊಂದಿಲ್ಲ. ಆದರೆ ಈ ಕಥೆಯಲೊಂದು ಪ್ರಮುಖ ಟ್ವಿಸ್ಟ್ ಇದೆ. ತೀರಾ ಇತ್ತೀಚಿನ ಊಹಾಪೋಹಗಳ ಪ್ರಕಾರ ನಿಮ್ಮ ಆಂಡ್ರಾಯ್ಡ್ ಚಾರ್ಜರ್‌ನೊಂದಿಗೆ ನಿಮ್ಮ ಐಫೋನ್ ಅನ್ನು ಚಾರ್ಜ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಆಪಲ್ ಕಸ್ಟಮೈಸ್ ಮಾಡಿದ USB-C ಪೋರ್ಟ್ ಅನ್ನು ತಯಾರಿಸಲು ಯೋಜಿಸಿದೆ. ಇದನ್ನು ವಿಶೇಷವಾಗಿ ಐಫೋನ್‌ಗಳಿಗೆಂದೆ ಮಾಡಲಾಗುತ್ತಿದೆ. ಕಳೆದ ವರ್ಷ ಆಪಲ್ ತನ್ನ ಚಾರ್ಜಿಂಗ್ ಪೋರ್ಟ್‌ಗಳನ್ನು USB-C ಕನೆಕ್ಟರ್‌ನೊಂದಿಗೆ ಸಜ್ಜುಗೊಳಿಸಲು ಯುರೋಪಿಯನ್ ಯೂನಿಯನ್ ಆದೇಶಿಸಿದೆ. ಆಪಲ್‌ನ ಮ್ಯಾಕ್‌ಬುಕ್ ಮತ್ತು ಐಪ್ಯಾಡ್ ಈಗಾಗಲೇ USB-C ಪೋರ್ಟ್‌ಗಳನ್ನು ಹೊಂದಿದ್ದು ಕಂಪನಿಯು ಐಫೋನ್‌ಗಳಿಗೂ ಅದೇ ರೀತಿ USB-C ಪೋರ್ಟ್ ಅನ್ನು ಸೇರಿಸಬೇಕು ಎಂದು ಕೊಂಡಿದೆ.
EU ನ ಆದೇಶವನ್ನು ಅನುಸರಿಸಲು ಒಪ್ಪಿಕೊಂಡಿದ್ದರೂ ಸಹ ಆಪಲ್ ಚೀನಾದ ಟ್ವಿಟರ್ ರೀತಿಯಾದಂತಹ Weibo ನಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ವರದಿಯ ಪ್ರಕಾರ ಕಂಪನಿಯು ಅದನ್ನು ತುಂಬಾ ಸರಳಗೊಳಿಸದಿರಬಹುದು ಎಂದು ತಿಳಿಸುತ್ತದೆ. USB-C ಪೋರ್ಟ್ ಅನ್ನು ಐಫೋನ್‌ಗಳಲ್ಲಿ ಸೇರಿಸಲಾಗುವುದು. ಆದರೆ ಆಪಲ್ ಪೋರ್ಟ್‌ಗಾಗಿ ಕಸ್ಟಮ್ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ) ಇಂಟರ್ಫೇಸ್ ಅನ್ನು ಬಳಸಲು ಯೋಜಿಸುತ್ತಿದೆ. ಕ್ಯುಪರ್ಟಿನೋ ಮೂಲದ ಕಂಪನಿಯೊಂದು ತನ್ನ ಐಫೋನ್‌ಗಳಿಗೆ ದೃಢೀಕರಣ ಕಾರ್ಯವಿಧಾನವನ್ನು ಒಳಗೊಂಡಿರುವ ಲೈಟನಿಂಗ್ ಪೋರ್ಟ್ ಅನ್ನು ನೀಡಿದೆ. ಸರಳವಾಗಿ ಹೇಳುವುದಾದರೆ ನಿಮ್ಮ ಐಫೋನ್ ಅನ್ನು ಚಾರ್ಜ್ ಮಾಡಲು ನಿಮ್ಮ ಐಫೋನ್ ಗಾಗಿ ನಿರ್ದಿಷ್ಟವಾಗಿ ಮಾಡಿದ ಚಾರ್ಜರ್ ಅನ್ನು ಮಾತ್ರ ನೀವು ಬಳಸಬಹುದು.
ಇತ್ತೀಚಿನ ವದಂತಿಗಳ ಪ್ರಕಾರ Apple ತನ್ನ USB-C ಕನೆಕ್ಟರ್‌ಗೆ ವಿಶೇಷ IC ಚಿಪ್ ಅನ್ನು ಸಂಯೋಜಿಸಬಹುದು. ಅದು ಲೈಟ್ನಿಂಗ್ ಪೋರ್ಟ್‌ನ ದೃಢೀಕರಣ ವ್ಯವಸ್ಥೆಯಂತೆಯೇ ಕಾರ್ಯನಿರ್ವಹಿಸುತ್ತದೆ. "ಮೇಡ್ ಫಾರ್ ಐಫೋನ್" ಪ್ರೋಗ್ರಾಂನ ಭಾಗವಾಗಿರದ ಆಪಲ್ ಅಲ್ಲದ ಪರಿಕರಗಳಿಗಿಂತ ಅಧಿಕೃತ ಆಪಲ್ ಪರಿಕರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಇದು ಸೂಚಿಸುತ್ತದೆ. ಉದಾಹರಣೆಗೆ ಹೈ-ಸ್ಪೀಡ್ ಡೇಟಾ ಟ್ರಾನ್ಸ್ಫರ್ ಮತ್ತು ಫಾಸ್ಟ್ ಚಾರ್ಜಿಂಗ್ ಸೀಮಿತವಾಗಿರಬಹುದು. ನಿಖರವಾದ ಪರಿಣಾಮಗಳು ಏನೆಂದು ಸ್ಪಷ್ಟವಾಗಿಲ್ಲ. ಈ ರೀತಿ ಮಾಡುವುದರಿಂದ EU ಮಧ್ಯಪ್ರವೇಶಿಸುವ ಸಾಧ್ಯತೆಯಿದ್ದು USB-C ಸಾರ್ವತ್ರಿಕ ಇಂಟರ್‌ಫೇಸ್‌ನ ಉದ್ದೇಶವನ್ನು ಮುರಿದಂತಾಗುತ್ತದೆ.
ಮಾರ್ಚ್ 2025 ರ ವೇಳೆಗೆ ಭಾರತೀಯ ಸರ್ಕಾರವು ಸ್ಮಾರ್ಟ್‌ಫೋನ್ ತಯಾರಕರು USB ಟೈಪ್-C ಅನ್ನು ಎಲ್ಲಾ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಪ್ರಮಾಣಿತ ಚಾರ್ಜಿಂಗ್ ಪೋರ್ಟ್ ಮಾಡಲು ಕಡ್ಡಾಯವಾಗಿ ಯೋಜಿಸುತ್ತಿದೆ. USB ಟೈಪ್-C ಚಾರ್ಜರ್‌ಗಳಿಗೆ ಮಾನದಂಡಗಳನ್ನು ಘೋಷಿಸಿದೆ. ಮತ್ತು ಸರ್ಕಾರವು ಮೊಬೈಲ್ ಫೋನ್‌ಗಳು ಮತ್ತು ಧರಿಸಬಹುದಾದ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗಾಗಿ ಎರಡು ಗುಣಮಟ್ಟದ ಚಾರ್ಜಿಂಗ್ ಪೋರ್ಟ್‌ಗಳನ್ನು ಅಭಿವೃದ್ಧಿಪಡಿಸುತ್ತದೆ" ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.