ಆಪಲ್ ಶೀಘ್ರದಲ್ಲೇ ತನ್ನದೇಯಾದ ಡಿಸ್ಪ್ಲೇಗಳನ್ನು ತಯಾರಿಸಲಿದೆ! ಮೊದಲಿಗೆ ಸ್ಮಾರ್ಟ್‌ವಾಚ್‌ಗಳಿಗೆ ನಿರೀಕ್ಷೆ!

ಆಪಲ್ ಶೀಘ್ರದಲ್ಲೇ ತನ್ನದೇಯಾದ ಡಿಸ್ಪ್ಲೇಗಳನ್ನು ತಯಾರಿಸಲಿದೆ! ಮೊದಲಿಗೆ ಸ್ಮಾರ್ಟ್‌ವಾಚ್‌ಗಳಿಗೆ ನಿರೀಕ್ಷೆ!
HIGHLIGHTS

ಆಪಲ್ ಕಂಪನಿ ಈಗ ತನ್ನದೇಯಾದ ಕಸ್ಟಮ್ ಡಿಸ್ಪ್ಲೇಗಳನ್ನು ತಯಾರಿಸಲು ಸಜ್ಜಾಗಿದೆ.

ಮುಂದಿನ 2024ರ ವೇಳೆಯೊಳಗೆ ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ.

ಇವತ್ತಿನ ವರೆಗೂ ಆಪಲ್ ಕಂಪನಿ ಪ್ರಾಡಕ್ಟ್ಗಳಲ್ಲಿ ಹೆಚ್ಚಾಗಿ LG ಮತ್ತು Samsung ಕಂಪನಿಗಳ ಹೈ ಗ್ರೇಡ್ ಡಿಸ್ಪ್ಲೇಗಳನ್ನು ಬಳಸಾಗುತ್ತಿದೆ.

 

 

ಆಪಲ್ ಕಂಪನಿ ಈಗ ತನ್ನದೇಯಾದ ಕಸ್ಟಮ್ ಡಿಸ್ಪ್ಲೇಗಳನ್ನು ತಯಾರಿಸಲು ಸಜ್ಜಾಗಿದೆ. ಮುಂದಿನ 2024ರ ವೇಳೆಯೊಳಗೆ ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ. ಅಂದ್ರೆ ಇವತ್ತಿನ ವರೆಗೂ ಆಪಲ್ ಕಂಪನಿ ಪ್ರಾಡಕ್ಟ್ಗಳಲ್ಲಿ ಹೆಚ್ಚಾಗಿ LG ಮತ್ತು Samsung ಕಂಪನಿಗಳ ಹೈ ಗ್ರೇಡ್ ಡಿಸ್ಪ್ಲೇಗಳನ್ನು ಬಳಸಾಗುತ್ತಿದೆ. ಆದರೆ Apple Inc ಇನ್ಮುಂದೆ ತಮ್ಮದೇಯಾದ ಕಸ್ಟಮ್ ಡಿಸ್ಪ್ಲೇಗಳನ್ನ ಮೊಬೈಲ್ ಮತ್ತು ಸ್ಮಾರ್ಟ್ ವಾಚ್ಗಳಲ್ಲಿ 2024 ರ ವೇಳೆಯೊಳಗೆ ಬಳಸಬೇಕೆಂದು ಪ್ರಾರಂಭಿಸಲು ಯೋಜಿಸುತ್ತಿದೆ. ಈ ಪ್ರಯತ್ನದಿಂದ ತನ್ನೊಂದಿಗಿನ ತಂತ್ರಜ್ಞಾನ ಪಾಲುದಾರರ ಮೇಲೆ ಅವಲಂಬನೆಯನ್ನ ಕಡಿಮೆ ಮಾಡಿ Samsung, LG ಮತ್ತು ಹೆಚ್ಚಿನ ಕಾಂಪೊನೆಂಟ್ಸ್ ಅನ್ನು ತನ್ನಲ್ಲಿಯೇ ತರಬೇಕೆಂಬುದಾಗಿದೆ ಯೋಚಿಸಿದೆ.

ಮೊದಲಿಗೆ ಆಪಲ್ ಸ್ಮಾರ್ಟ್‌ವಾಚ್‌ಗಳಿಗೆ ತಮ್ಮದೇಯಾದ ಡಿಸ್ಪ್ಲೇಯ ನಿರೀಕ್ಷೆ!

ವರ್ಷದ ಕೊನೆಯ ವೇಳೆಗೆ ಉತ್ತಮ ಆಪಲ್ ಸ್ಮಾರ್ಟ್‌ವಾಚ್‌ಗಳಲ್ಲಿ ಡಿಸ್ಪ್ಲೇಗಳನ್ನ ಬದಲಾಯಿಸುವ ಮೂಲಕ ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಸ್ಕ್ರೀನ್ OLED-organic ಲೈಟ್-ಎಮಿಟಿಂಗ್ ಡಯೋಡ್ ಗುಣಮಟ್ಟವನ್ನು microLED ಎಂದು ಕರೆಯಲಾಗುವ ತಂತ್ರಜ್ಞಾನಕ್ಕೆ ಅಪ್ಗ್ರೇಡ್ ಮಾಡುತ್ತದೆ ಮತ್ತು ಆಪಲ್ ಐಫೋನ್ ಸೇರಿದಂತೆ ಇತರೆ ಡಿವೈಸ್ಸ್ ಗಳಿಗೂ ಡಿಸ್ಪ್ಲೇಗಳನ್ನ ತಯಾರಿಸಲು ಯೋಜಿಸಿದೆ. ಸ್ಯಾಮ್ಸಂಗ್ ಪ್ರಪಂಚದ ಅತ್ಯಂತ ಮುಂದುವರಿದ ಡಿಸ್ಪ್ಲೇಗಳ ತಯಾರಕವಾಗಿದೆ ಮತ್ತು ಟಿವಿಗಳಿಗಾಗಿ ತನ್ನದೇ ಆದ ಮೈಕ್ರೋಎಲ್ಇಡಿ ವರ್ಷನ್ ಅನ್ನು ಉತ್ಪಾದಿಸುತ್ತಿದೆ. ಆದರೆ ಡಿಸ್ಪ್ಲೇಗಳನ್ನು ತರುವ ಮೂಲಕ ಆಪಲ್ ದೀರ್ಘಾವಧಿಯಲ್ಲಿ ಅದರ ಡಿವೈಸ್ಸ್ ಗಳನ್ನು ಉತ್ತಮವಾಗಿ ಕಸ್ಟಮೈಸ್ ಮಾಡಬಹುದು ಮತ್ತು ಅದರ ಪೂರೈಕೆ ಸರಪಳಿಯಲ್ಲಿ ಬಲವಾದ ಹಿಡಿತವನ್ನು ನಿರ್ವಹಿಸಬಹುದು.

ಆಪಲ್ ಸ್ಕ್ರೀನ್ ಸ್ವಿಚ್ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಬ್ಲೂಮ್ಬರ್ಗ್ ಕಂಪನಿಯು ತನ್ನ ಸ್ವಂತ  ಡಿಸ್ಪ್ಲೇಗಳನ್ನು ಡಿಸೈನ್ ಗೊಳಿಸಲು 2018 ರಲ್ಲಿ ಆಪಲ್ನಿಂದ ಮೊದಲ ಬಾರಿಗೆ ವರದಿ ಮಾಡಿತ್ತು. ಆಪಲ್ ಯೋಜನೆಯು ಜಾನಿ ಸ್ರೂಜಿಯ ಹಾರ್ಡ್ವೇರ್ ಟೆಕ್ನಾಲಜೀಸ್ ವಿಭಾಗದಲ್ಲಿ ಆಪಲ್ನ ಡಿಸ್ಪ್ಲೇ ಟೆಕ್ನಾಲಜೀಸ್ ಗ್ರೂಪ್ ನಡೆಸುತ್ತಿರುವ ವೀ ಚೆನ್ ಅವರ ನೇತೃತ್ವದಲ್ಲಿದೆ. ಕಂಪನಿಯು ತನ್ನ ಹೊಸ ಉನ್ನತ-ಮಟ್ಟದ ಸ್ಪೋರ್ಟ್ಸ್ ವಾಚ್, Apple Watch Ultra ಅಪ್ಡೇಟ್ ಗಾಗಿ ಮೈಕ್ರೋಎಲ್ಇಡಿ ಡಿಸ್ಪ್ಲೇಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ.

ಆಪಲ್ ಮೈಕ್ರೊಎಲ್ಇಡಿ ಡಿಸ್ಪ್ಲೇಗಳು:

ಮೈಕ್ರೊಎಲ್ಇಡಿ ಡಿಸ್ಪ್ಲೇಗಳು ಆಪಲ್ ನ ಮೊದಲ ಸ್ಕ್ರೀನ್ ವಿನ್ಯಾಸ ಮತ್ತು ಸಂಪೂರ್ಣವಾಗಿ ತನ್ನದೇ ಆದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಂಪನಿಯು ಪ್ರಸ್ತುತ Japan Display Inc, Sharp Corp ಮತ್ತು BOE ಟೆಕ್ನಾಲಜಿ ಗ್ರೂಪ್ ಕಂ ಸೇರಿದಂತೆ ಸ್ಯಾಮ್ಸಂಗ್ ಮತ್ತು LG ಸ್ಕ್ರೀನ್ ಗಳನ್ನು ಪಡೆಯುತ್ತದೆ. Samsung ಮತ್ತು LG ಕಾಮೆಂಟ್ ಮಾಡಲು ನಿರಾಕರಿಸಿವೆ. ಬ್ಲೂಮ್ಬರ್ಗ್ ಡೇಟಾ ಪ್ರಕಾರ ಆಪಲ್ ಅಕೌಂಟ್ ನ LG ಡಿಸ್ಪ್ಲೇಯ ಆದಾಯದ 36% ರಷ್ಟಿದೆ. ಪೂರೈಕೆದಾರರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ Apple ನೊಂದಿಗೆ ಸ್ಪರ್ಧಿಸುವ Samsung ಅದರ ಮಾರಾಟದ ಸುಮಾರು 6.6% ಅನ್ನು ಐಫೋನ್ ತಯಾರಕರಿಂದ ಪಡೆಯುತ್ತದೆ. ಆಪಲ್ 2024 ರ ಗುರಿಯು 2025 ರವರೆಗೆ ಸ್ಲಿಪ್ ಆಗಬಹುದು ಎಂದು ಯೋಜನೆಯಲ್ಲಿ ತೊಡಗಿರುವ ಕೆಲವರು ಹೇಳಿದ್ದಾರೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo