ಮುಂಬರಲಿರುವ iPhone 16 Series ಬಿಡುಗಡೆಗೆ ಡೇಟ್ ಫಿಕ್ಸ್! ಏನೇನು ನಿರೀಕ್ಷಿಸಬಹುದು?
iPhone 16 Series ಫೋನ್ ಮತ್ತು ಡಿವೈಸ್‌ಗಳ ಬಿಡುಗಡೆಯನ್ನು 9ನೇ ಸೆಪ್ಟೆಂಬರ್ 2024 ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ Apple Watch Series 10, Apple Watch Ultra 3, Apple Watch SE, AirPad 4 ಮತ್ತು Apple iPad Mini ನಿರೀಕ್ಷಿಸಬಹುದು.
ಹಲವಾರು ವದಂತಿ ಮತ್ತು ಊಹಾಪೋಹಗಳ ನಂತರ ಕೊನೆಗೂ ಆಪಲ್ ಕಂಪನಿಯ ಈ ಮುಂಬರಲಿರುವ iPhone 16 Series ಫೋನ್‌ಗಳು ಮತ್ತು ಹಲವಾರು ಹೊಸ ಡಿವೈಸ್‌ಗಳನ್ನು ಬಿಡುಗಡೆಗೊಳಿಸಲು ಕಾರ್ಯಕ್ರಮವನ್ನು 9ನೇ ಸೆಪ್ಟೆಂಬರ್ 2024 ರಂದು ಬೆಳಿಗ್ಗೆ 10:00am PT ಗಂಟೆಗೆ ಅಮೇರಿಕದ ಕ್ಯಾಲಿಪೋರ್ನಿಯಾದಲ್ಲಿರುವ ಆಪಲ್ ಪಾರ್ಕ್ ಕ್ಯಾಪರ್ಟಿನೋದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹೊಸ ಐಫೋನ್‌ಗಳ ಹೊರತಾಗಿ ಟೆಕ್ ದೈತ್ಯ ಹೊಸ ಸ್ಮಾರ್ಟ್ ವಾಚ್‌ಗಳು ಮತ್ತು ಏರ್‌ಪಾಡ್‌ಗಳನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆಗಳಿವೆ. ಆದಾಗ್ಯೂ ಎಂದಿನಂತೆ ಆಪಲ್ ಈ ಹೊಸ ಡಿವೈಸ್‌ಗಳ ಕುರಿತು ಪ್ರಸ್ತುತ ಯಾವುದೇ ವಿವರಗಳನ್ನು ದೃಢೀಕರಿಸಿಲ್ಲ.
Also Read: Telegram Ban: ಒಂದು ವೇಳೆ ಈ ಆರೋಪಗಳು ನಿಜವಾದರೆ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಬ್ಯಾನ್ ಆಗಲಿದೆ
iPhone 16 Series ಬಗ್ಗೆ ಪ್ರಸ್ತುತ ಬಹಿರಂಡಗೊಂಡಿರುವ ಮಾಹಿತಿಗಳು
ಈ ಮುಂಬರಲಿರುವ ಆಪಲ್ ಸರಣಿಯಲ್ಲಿ ಪ್ರಸ್ತುತ ಒಟ್ಟಾರೆಯಾಗಿ ಎರಡು ಫೋನ್‌ಗಳನ್ನು iPhone 16 ಮತ್ತು iPhone 16 Plus ಬಿಡುಗಡೆಯಾಗುವುದನ್ನು ಮಾಹಿತಿ ನೀಡಿದ್ದು. ಇದರೊಂದಿಗೆ ಐಪ್ಯಾಡ್ ಮಿನಿ, ಸ್ಮಾರ್ಟ್‌ವಾಚ್ ಮತ್ತು ಏರ್‌ಪಾಡ್‌ಗಳನಂತಹ ಡಿವೈಸ್‌ಗಳನ್ನು ಸಹ ಬಿಡುಗಡೆಗೊಳಿಸುವುದಾಗಿ ನಿರೀಕ್ಷಿಸಲಾಗಿದೆ. ಈ ಮುಮಬರಲಿರುವ ಆಪಲ್ ತನ್ನ ಎಲ್ಲಾ iPhone 16 ಮಾದರಿಗಳಲ್ಲಿ ಅದೇ A18 ಚಿಪ್‌ಸೆಟ್ ಅನ್ನು ಬಳಸುತ್ತದೆ ಎಂದು ಹಲವಾರು ವರದಿಗಳು ಸೂಚಿಸಿವೆ. ಏಕೆಂದರೆ ಈ ಎಲ್ಲಾ ಸಾಧನಗಳು ಸಾಧನದಲ್ಲಿ AI ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಈ ಮುಂದೆ ತಿಳಿಸಲಿರುವ ಕೆಲವೊಂದು ಮಾಹಿತಿಗಳು ಅಧಿಕೃತವಾಗಿ ದೃಢಪಡಿಸದ ಫೀಚರ್ ಅಥವಾ ವಿಶೇಷಣಗಳಾಗಿವೆ. ಇವುಗಳ ಬಿಡುಗಡೆಯ ಮೊದಲು ಬರುವ ಎಲ್ಲ ಮಾಹಿತಿಯನ್ನು ಸಮಯಕ್ಕೆ ತಕ್ಕಂತೆ ನೀಡಲಿದ್ದೇವೆ. ಯಾಕೆಂದರೆ ಇಲ್ಲಿನ ವಿವರಗಳಲ್ಲಿ ಭಾರಿ ಮಾತ್ರದಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂಬುದನ್ನು ದಯವಿಟ್ಟು ಗಮನಿಸಿಬೇಕಿರುವ ಅಂಶವಾಗಿದೆ. ಅಮೇರಿಕದಲ್ಲಿ ಬೆಳಿಗ್ಗೆ ಅಂದ್ರೆ ಭಾರತದಲ್ಲಿ ಮರುದಿನ 9ನೇ ಸೆಪ್ಟೆಂಬರ್ 2024 ರಂದು ರಾತ್ರಿ 10:30PM ಸಮಯಕ್ಕೆ ನೀವು Apple TV App ಅಥವಾ Apple.com ಮೂಲಕ ಈ ಇವೆಂಟ್ ಅನ್ನು ಲೈವ್ ವೀಕ್ಷಿಸಬಹುದು.
ಮುಂಬರಲಿರುವ Apple Event 2024 ಏನೇನು ನಿರೀಕ್ಷಿಸಬಹುದು?
ಹೆಚ್ಚು ನಿರೀಕ್ಷೆಯಲ್ಲಿರುವ ಈ ಆಪಲ್ ಇವೆಂಟ್ನಲ್ಲಿ ಏನೇನು ಬಿಡುಗಡೆಯಾಗಲಿದೆ ಏನಂದುವುದನ್ನು ನೋಡುವುದಾದರೆ ವಿಶೇಷ ಆಪಲ್ ಈವೆಂಟ್ 9ನೇ ಸೆಪ್ಟೆಂಬರ್ 2024 ರಂದು ನಡೆಯಲಿದೆ. ಈ ಸಮಯದಲ್ಲಿ ಕಂಪನಿಯು ಐಫೋನ್ 16 ಸರಣಿಯಲ್ಲಿ ಮೇಲಿನ ಎಲ್ಲಾ ನಾಲ್ಕು ಮಾದರಿಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಇಲ್ಲಿ ನಿಮಗೆ Apple Watch Series 10, Apple Watch Ultra 3, Apple Watch SE, AirPad 4 ಮತ್ತು Apple iPad Mini ಕೈಗೆಟುಕುವ ಶ್ರೇಣಿಯಲ್ಲಿ ಏರ್‌ಪಾಡ್ಸ್ 4 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಮುಂಬರಲಿರುವ ಈವೆಂಟ್‌ನಲ್ಲಿ ಆಪಲ್ ತನ್ನ ಡಿವೈಸ್‌ಗಳಿಗೆ ಹೊಸ ಮಾದರಿಯ ಸಾಫ್ಟ್‌ವೇರ್ ನವೀಕರಣಗಳೊಂದಿಗೆ iOS 18 ಹೊಸ ಪ್ರೊಸೆಸರ್ ಅನ್ನು ಸಹ ರೋಲ್‌ಔಟ್ ದಿನಾಂಕವನ್ನು ದೃಢೀಕರಿಸಲು ನಿರ್ಧರಿಸಿದೆ ಎಂದು ವರದಿಗಳು ಹೇಳುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile