Apple ಅಂತಿಮವಾಗಿ iOS 15.4 Beta ಮತ್ತು iPad OS 15.4 Beta ನವೀಕರಣಗಳಿಗೆ ಬಹುನಿರೀಕ್ಷಿತ ವೈಶಿಷ್ಟ್ಯವನ್ನು ಸೇರಿಸಿದೆ. ಅದು ಡೆವಲಪರ್‌ಗಳಿಗಾಗಿ ಹೊರಹೊಮ್ಮಲು ಪ್ರಾರಂಭಿಸಿದೆ. ಐಫೋನ್ ಬಳಕೆದಾರರು ಮಾಸ್ಕ್ ಹಾಕಿಕೊಂಡರೂ ಫೇಸ್ ಐಡಿ ಬಳಸಿ ಅನ್‌ಲಾಕ್ ಮಾಡಲು ಸಾಧ್ಯವಾಗುತ್ತದೆ. ಮತ್ತೊಂದೆಡೆ iPadOS ಮತ್ತು MacOS ಯುನಿವರ್ಸಲ್ ನಿಯಂತ್ರಣವನ್ನು ಪಡೆಯುತ್ತದೆ. ಇದು ಬಳಕೆದಾರರು ತಮ್ಮ Mac PC ಗಳ ಪಕ್ಕದಲ್ಲಿ iPad ಅನ್ನು ಇರಿಸುವ ಮೂಲಕ iPad ನಲ್ಲಿ Mac ಕೀಬೋರ್ಡ್‌ಗಳೊಂದಿಗೆ ಟೈಪ್ ಮಾಡಲು ಅನುಮತಿಸುತ್ತದೆ.
ಮಾಸ್ಕ್ ಧರಿಸಿದಾಗಲೂ ಫೇಸ್‌ಐಡಿಯನ್ನು ಬಳಸಿಕೊಂಡು ಐಫೋನ್ ಅನ್ನು ಅನ್ಲಾಕ್ ಮಾಡುವ ಸಾಮರ್ಥ್ಯದೊಂದಿಗೆ ಆಪಲ್ ತನ್ನ ಸ್ವಾಮ್ಯದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ನವೀಕರಿಸಿದೆ. ಆಪಲ್ ತನ್ನ ನೂತನ iOS 15.4, iPadOS 15.4, ಮತ್ತು macOS Monterey 12.3 ರ ಮೊದಲ ಡೆವಲಪರ್ ಬೀಟಾ ಅಪ್‌ಡೇಟ್ ಅನ್ನು ಇಂದು ಬಿಡುಗಡೆ ಮಾಡಿದ್ದು ಐಒಎಸ್ 15.4 ರ ಇತ್ತೀಚಿನ ಬೀಟಾ ಅಪ್‌ಡೇಟ್ ತರುವ ದೊಡ್ಡ ಬದಲಾವಣೆಗಳಲ್ಲಿ ಐಫೋನ್ ಬಳಕೆದಾರರು ಮಾಸ್ಕ್ ಧರಿಸಿದಾಗಲೂ ಫೇಸ್ ಐಡಿಯನ್ನು ಬಳಸಿಕೊಂಡು ತಮ್ಮ ಐಫೋನ್ ಅನ್ನು ಅನ್ಲಾಕ್ ಮಾಡುವ ಸಾಮರ್ಥ್ಯವನ್ನು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಐಒಎಸ್ 15.4 ರ ಹೊಸ ಬೀಟಾ ಬಿಡುಗಡೆಯು ಮಾಸ್ಕ್ ಅನ್ನು ಧರಿಸಿರುವಾಗ ಐಫೋನ್ ಬಳಕೆದಾರರ ಕಣ್ಣಿನ ರಚನೆಯನ್ನು ಫೇಸ್ ಐಡಿಯೊಂದಿಗೆ ಸಕ್ರಿಯಗೊಳಿಸುತ್ತದೆ. ಇದಲ್ಲದೇ ಆಯಾ ದೇಶವನ್ನು ಆಧರಿಸಿ ಬಳಕೆದಾರರನ್ನು ಗುರುತಿಸಲು ಆಪಲ್ ಹೊಸ ಅಲ್ಗಾರಿದಮ್‌ಗಳನ್ನು ತರಬೇತಿ ಮಾಡಿದೆ. ಇದರಿಂದಾಗಿ ಮಾಸ್ಕ್ ಧರಿಸಿದ ವೇಳೆಯು ಫೇಸ್ ಐಡಿಯನ್ನು ಬಳಸಿಕೊಂಡು ಬಳಕೆದಾರರು ತಮ್ಮ ಐಫೋನ್ ಅನ್ನು ಅನ್‌ಲಾಕ್ ಮಾಡಲು ಸಾಧ್ಯವಾಗುತ್ತದೆ. ಇನ್ನು ಬಳಕೆದಾರರು ಐಒಎಸ್ 15.4 ಚಾಲನೆಯಲ್ಲಿರುವ ತಮ್ಮ ಐಫೋನ್ ಅನ್ನು ಮೊದಲ ಬಾರಿಗೆ ಬೂಟ್ ಮಾಡಿದಾಗ ಮಾಸ್ಕ್‌ನೊಂದಿಗೆ ಫೇಸ್ ಐಡಿಯನ್ನು ಬಳಸಿಕೊಂಡು ಹೊಂದಿಸುವ ಆಯ್ಕೆಯನ್ನು ಪಡೆಯುತ್ತಾರೆ.
ಒಂದು ವೇಳೆ ಈ ಆಯ್ಕೆ ನಿಮಗೆ ಈ ರೀತಿಯಲ್ಲಿ ದೊರೆಯದಿದ್ದರೆ ಐಒಎಸ್ 15.4 ನೊಂದಿಗೆ ಬೂಟ್ ಮಾಡಿದ ನಂತರ ಸೆಟ್ಟಿಂಗ್‌ಗಳು > ಫೇಸ್ ಐಡಿ ಮತ್ತು ಪಾಸ್‌ಕೋಡ್ ಅಡಿಯಲ್ಲಿ ಲಭ್ಯವಿರುವ 'ಫೇಸ್ ಐಡಿ ವಿತ್ ಎ ಮಾಸ್ಕ್' ಎಂಬ ಆಯ್ಕೆಯನ್ನು ಟಾಗಲ್ ಮಾಡುವ ಮೂಲಕ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದಾಗಿದೆ. ಹೀಗೆ ಹೊಸ ಅಪ್‌ಡೇಟ್ ಅನ್ನು ಸೆಟಪ್ ಮಾಡುವಾಗ ನೀವು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಇದರರ್ಥ ಮಾಸ್ಕ್‌ನೊಂದಿಗಿನ ಐಡಿಗಾಗಿ ನೋಂದಾಯಿಸುವ ಅನುಭವವು ನೀವು ಸಾಮಾನ್ಯವಾಗಿ ಮುಖ ಗುರುತಿಸುವಿಕೆ ತಂತ್ರಜ್ಞಾನಕ್ಕೆ ಹೇಗೆ ನೋಂದಾಯಿಸಿಕೊಳ್ಳುತ್ತೀರಿ ಎಂಬುದರಂತೆಯೇ ಇರುತ್ತದೆ ಎಂದು ತಿಳಿದುಬಂದಿದೆ.