ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ OnePlus ಹಾಗೂ iPhone ಭರ್ಜರಿ ರಿಯಾಯಿತಿಯೊಂದಿಗೆ ಲಭ್ಯ!

ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ OnePlus ಹಾಗೂ iPhone ಭರ್ಜರಿ ರಿಯಾಯಿತಿಯೊಂದಿಗೆ ಲಭ್ಯ!
HIGHLIGHTS

ಅಮೆಜಾನ್ ಸಮ್ಮರ್ ಸೇಲ್ (Amazon Summer Sale) ಮೇ 4 ರಂದು ಮಧ್ಯರಾತ್ರಿ 12 ಗಂಟೆಯಿಂದ ಪ್ರಾರಂಭ

ಅಮೆಜಾನ್ ಸಮ್ಮರ್ (Amazon Summer Sale) ಅತಿ ಕಡಿಮೆ ಬೆಲೆಯಲ್ಲಿ 5G ಅಥವಾ 4G ಸ್ಮಾರ್ಟ್‌ಫೋನ್‌ ಖರೀದಿ ಮಾಡಬಹುದು

ಅಮೆಜಾನ್ ಸಮ್ಮರ್ ಸೇಲ್‌ನ ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

Amazon Summer Sale 2023: ಭಾರತದಲ್ಲಿ ಅಮೆಜಾನ್ ನಾಳೆಯಿಂದ ತನ್ನ ಮೊದಲ ಬೇಸಿಗೆಯ ಮಾರಾಟವನ್ನು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಗ್ರೇಟ್ ಸಮ್ಮರ್ ಸೇಲ್ ಪ್ರಾರಂಭವಾಗಲಿದೆ. ಈ ಸೇಲ್ ಮೇ 4 ರಂದು ಮಧ್ಯರಾತ್ರಿ  12 ಗಂಟೆಯಿಂದ ಪ್ರಾರಂಭವಾದರೂ ಪ್ರೈಮ್ ಸದಸ್ಯರು ಇದನ್ನು 12 ಗಂಟೆಯ ಮೊದಲೆ ಪ್ರವೇಶಿಸಬಹುದು. ಹೆಚ್ಚಿನ ಡೀಲ್‌ಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹಿರಂಗ ಪಡಿಸಲಾಗಿದೆ. ಇದರಲ್ಲಿ ನಿಮ್ಮ ಕನಸಿನ ಸ್ಮಾರ್ಟ್ಫೋನ್ ಅನ್ನು ಸರಿಸುಮಾರು ಡಿಸ್ಕೌಂಟ್ ಜೊತೆಗೆ ಖರೀದಿಸಲು ಹೆಚ್ಚು ಅವಕಾಶಗಳಿವೆ.

ಅಮೆಜಾನ್ ಸ್ಮಾರ್ಟ್ಫೋನ್ ಸಮ್ಮರ್ ಸೇಲ್‌ 

ಒಟ್ಟಾರೆಯಾಗಿ ಮುಂಬರಲಿರುವ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ (Amazon Summer Sale 2023) OnePlus ಹಾಗೂ iPhone ಭರ್ಜರಿ ರಿಯಾಯಿತಿಯಲ್ಲಿ 5G ಅಥವಾ 4G ಸ್ಮಾರ್ಟ್‌ಫೋನ್‌ಗಳನ್ನು ನೀವು ಖರೀದಿ ಮಾಡಬಹುದು. Amazon Summer Sale 2023 ಸೇಲ್‌ನಲ್ಲಿ Samsung Galaxy M14, Xiaomi 12 Pro, OnePlus 10 Pro, iQOO Neo 7 ಮತ್ತು iPhone 14 ನಂತಹ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ. ಈ ಸೇಲ್‌ನ ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಕೈಗೆಟುಕುವ ಬೆಲೆಯಲ್ಲಿ ಸಿಗುವ ಟಾಪ್ 5G ಫೋನ್‌ಗಳು:

1. Samsung Galaxy M14 5G ಸ್ಮಾರ್ಟ್‌ಫೋನ್ ಅನ್ನು ಇದೀಗ ಪರಿಚಯಿಸಲಾಗಿದೆ. ಈ ಫೋನ್‌ Amazon Summer Sale 2023 ಸೇಲ್‌ನಲ್ಲಿ ಲಭ್ಯವಿದ್ದು ಬ್ಯಾಂಕ್ ಆಫರ್ಸ್ ಮತ್ತು ರಿಯಾಯಿತಿಗಳನ್ನು ಒಳಗೊಂಡಂತೆ ಇದರ ಬೆಲೆ 12,490 ರೂ ಆಗಿದೆ. ಇದು ರೂ 15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಅದ್ಭುತವಾದ ಸ್ಮಾರ್ಟ್‌ಫೋನ್ ಆಗಿದೆ.

2. ಇದಲ್ಲದೆ ನೀವು iQOO Z6 Lite 5G ಅನ್ನು 15,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್‌ Amazon ಸೇಲ್‌ನಲ್ಲಿ ಲಭ್ಯವಿದ್ದು ಬ್ಯಾಂಕ್ ಆಫರ್ಸ್ ಮತ್ತು ರಿಯಾಯಿತಿಗಳನ್ನು ಒಳಗೊಂಡಂತೆ ಇದರ ಬೆಲೆ 12,499 ರೂ ಆಗಿದೆ. ಕಂಪನಿಯು ಈ ಫೋನ್ ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದು ಈ ಫೋನ್‌ನ ನಿಜವಾದ ಬೆಲೆ 14,990 ರೂ ಆಗಿದೆ.

3. ನೀವು ಐಫೋನ್ ಖರೀದಿಸಲು ಬಯಸಿದರೆ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ iPhone 14 ಅನ್ನು ಪಡೆಯಬಹುದು. ಆದರೆ ಇದು ವಿನಿಮಯ ಕೊಡುಗೆಗಳು ಮತ್ತು ಇತರ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಫೋನ್ ನಿಮಗೆ 12,901 ರುಪಾಯಿಗಳ ರಿಯಾಯಿತಿ ನಂತರ 66,999 ರೂಪಾಯಿಗೆ ಸಿಗಲಿದೆ.

4.ಇದರ ನಂತರ Samsung Galaxy S23+ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿದೆ. ರಿಯಾಯಿತಿಯ ನಂತರ ಈ ಫೋನ್‌ನ ಬೆಲೆ 89,999 ರೂ ಆಗಿರುತ್ತದೆ. ಇದಲ್ಲದೆ Xiaomi 12 Pro ಫೋನ್‌ ಅನ್ನು ಬ್ಯಾಂಕ್ ಆಫರ್ಸ್ ಮತ್ತು ರಿಯಾಯಿತಿಯೊಂದಿಗೆ 42,999 ರೂಪಾಯಿಗೆ ಖರೀದಿಸಬಹುದು.

5. ನೀವು ಉತ್ತಮ ಆಫರ್ ಬಯಸಿದರೆ OnePlus ಫೋನ್‌ಗಳನ್ನು ಪ್ರಯತ್ನಿಸಬಹುದು. OnePlus 10 Pro ಫೋನ್‌ನ ಬೆಲೆ 54,999 ರೂ ಆಗಿದೆ. ಆದರೆ ಈ ಸೇಲ್‌ನಲ್ಲಿ OnePlus 10R ರೂ 29,999 ಕ್ಕೆ ಲಭ್ಯವಿದೆ. ಈ ಫೋನ್ ಪ್ರಸ್ತುತ ರೂ 31,999 ಕ್ಕೆ ಮಾರಾಟವಾಗುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo