ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ (Amazon GIF 2023) ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ (Smartphone) ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಅದರಲ್ಲೂ ಹೊಸದಾಗಿ ಬಿಡುಗಡೆಯಾದ ಪ್ರಾಡಕ್ಟ್‌ಗಳ ಮಾರಾಟದಲ್ಲಿ ಹೆಚ್ಚಿನ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಪಟ್ಟಿಯಲ್ಲಿ ಕೆಲವು ಅತ್ಯುತ್ತಮ 5G ಫೋನ್ (5G Phones) ಡೀಲ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದೇನೆ. ಆಕರ್ಷಕ ರಿಯಾಯಿತಿಗಳು ಮತ್ತು ಕೊಡುಗೆಗಳೊಂದಿಗೆ ಮಾರಾಟದಲ್ಲಿ ಬಳಕೆದಾರರು SBI ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.
ಇದನ್ನೂ ಓದಿ: Amazon ಸೇಲ್‌ನ ಈ ಲ್ಯಾಪ್ಟಾಪ್‌ಗಳ Attractive ಡಿಸ್ಕೌಂಟ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಿ
Amazon ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ iQOO Z7s 5G ಅನ್ನು ರೂ 17,999 ಕ್ಕೆ ಖರೀದಿಸಬಹುದು. ಮಾರಾಟದಲ್ಲಿ ಫೋನ್‌ನ ಮೂಲ ಬೆಲೆಯಲ್ಲಿ 28% ರಿಯಾಯಿತಿ ಇದೆ. SBI ಕಾರ್ಡ್ ಮೂಲಕ ಪಾವತಿಸುವ ಮೂಲಕ ನೀವು 1250 ರೂ.ವರೆಗೆ ಉಳಿಸಬಹುದು. ಇದು 64MP ಪ್ರೈಮರಿ ಕ್ಯಾಮೆರಾ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ಫೋನ್ 4500mAh ಬ್ಯಾಟರಿಯನ್ನು ಹೊಂದಿದೆ.
Samsung Galaxy M34 5G ಅಮೆಜಾನ್‌ನಲ್ಲಿ 15,999 ರೂಗಳಿಂದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೇ ನೀವು SBI ಕಾರ್ಡ್‌ನೊಂದಿಗೆ ಪಾವತಿ ವಹಿವಾಟು ನಡೆಸಿದರೆ ನೀವು ರೂ.1000 ವರೆಗೆ ಪ್ರತ್ಯೇಕ ರಿಯಾಯಿತಿಯನ್ನು ಪಡೆಯಬಹುದು. ಇದು 50MP+8MP+2MP ಟ್ರಿಪಲ್ ಪ್ರೈಮರಿ ಕ್ಯಾಮೆರಾ ಸೆಟಪ್ ಮತ್ತು 13MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ.
ಈ ಅಮೆಜಾನ್ ಮಾರಾಟದಲ್ಲಿ ಈ ರಿಯಲ್‌ಮಿ ಹ್ಯಾಂಡ್‌ಸೆಟ್ ಅನ್ನು 16,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದಲ್ಲದೆ ಇ-ಕಾಮರ್ಸ್ ಕಂಪನಿಯು ಕೂಪನ್ ಅನ್ನು ಸಹ ನೀಡುತ್ತಿದೆ. ಅದು ನಿಮಗೆ ರೂ 750 ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತದೆ. ನೀವು ಈ ಫೋನ್‌ನಲ್ಲಿ 64MP ಪ್ರೈಮರಿ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾವನ್ನು ಪಡೆಯುತ್ತೀರಿ. ಇದಲ್ಲದೆ ಇದು 5000mAh ಬ್ಯಾಟರಿಯನ್ನು ಸಹ ಪಡೆಯುತ್ತದೆ.
ನೀವು ಈ ಸ್ಮಾರ್ಟ್‌ಫೋನ್ ಅನ್ನು Amazon ಸೇಲ್‌ನಲ್ಲಿ ಖರೀದಿಸಿದರೆ ನೀವು 12,999 ರೂಗಳಲ್ಲಿ 35% ರಿಯಾಯಿತಿಯನ್ನು ಪಡೆಯುತ್ತೀರಿ. SBI ಬ್ಯಾಂಕ್ ಕಾರ್ಡ್ ಮೂಲಕ ಪಾವತಿ ವಹಿವಾಟು ರೂ.1000 ವರೆಗೆ ಬ್ಯಾಂಕ್ ರಿಯಾಯಿತಿಯನ್ನು ಪಡೆಯುತ್ತದೆ. ಇದರೊಂದಿಗೆ ಫೋನ್ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ಇದು 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ.
ಅಮೆಜಾನ್ ಸೇಲ್‌ನಲ್ಲಿ ಹೊಸ Redmi 12 5G ಅನ್ನು ಕೇವಲ 11,499 ರೂಗಳಿಗೆ ಖರೀದಿಸಬಹುದು. ಅಲ್ಲದೆ ಬ್ಯಾಂಕ್ ರಿಯಾಯಿತಿಯ ನಂತರ ಬಳಕೆದಾರರು SBI ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್ ಜೊತೆಗೆ ಕೇವಲ 10,350 ರೂಗಳಲ್ಲಿ ಲಭ್ಯವಿದೆ. ಇದರಲ್ಲಿ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನೊಂದಿಗೆ ಬಂದಿರುವ ಭಾರತದಲ್ಲಿ ಇದು ಮೊದಲ ಸ್ಮಾರ್ಟ್‌ಫೋನ್ ಆಗಿದೆ.