ಹುವಾವೇಯ ಸಬ್ ಬ್ರಾಂಡ್ ಆಗಿರುವ ಹಾನರ್ ತನ್ನ ಹೊಸ Honor View 20 ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನಿನ ಐದು ಬೆಸ್ಟ್ ಫೀಚರ್ಗಳ ಬಗ್ಗೆ ತಿಳಿದುಕೊಳ್ಳೋಣ. ಹಾನರ್ ಕಂಪನಿಯ ಈ Honor View 20 ಸ್ಮಾರ್ಟ್ಫೋನನ್ನು ವಿಶ್ವದ ಮೊಟ್ಟ ಮೊದಲ ಇನ್ ಡಿಸ್ಪ್ಲೇ ಕ್ಯಾಮೆರದ ಫೋನ್ ಅಂಥ ಸಹ ಕರೆಯುತ್ತಾರೆ. ಇಂದು ನಾವು ಮಾತನಾಡಲು ಹೋಗುವ ಕೆಲ ಅದ್ದೂರಿಯ ಫೀಚರ್ಗಳು ವಿಶ್ವದ ಈ ಮೊಟ್ಟ ಮೊದಲ ಸ್ಮಾರ್ಟ್ಫೋನಲ್ಲಿ ನೀಡಿದೆ.
ಮೊದಲಿಗೆ ಈ Honor View 20 ವಿಶ್ವದ ಈ ಮೊಟ್ಟ ಮೊದಲ 48MP + TOF 3D Stereo ಮೇನ್ ಕ್ಯಾಮೆರಾವನ್ನು ಒಳಗೊಂಡಿದೆ. ಇಲ್ಲಿ ನಿಮ್ಮ ನೆನಪಿಗೆ Redmi Note 7 ಬಂದ್ರೆ ಅದರಲ್ಲಿನ 48MP ಕ್ಯಾಮೆರಾವನ್ನು ಮರೆತುಬಿಡಿ. ಇಲ್ಲಿ ಸೋನಿಯ IMX 586 ಸೆನ್ಸರ್ಗಾಗಿ ಧನ್ಯವಾದ ಹೇಳಲೇಬೇಕು. ಇದು ನಿಮಗೆ ಅಚ್ಚುಕಟ್ಟಾದ ಇಮೇಜ್ಗಾಲ ಹೈ ರೆಸೊಲ್ಯೂಷನ್ ಮಾತ್ರ ನೀಡುವುದಲ್ಲದೆ ಇದರಲ್ಲಿನ ಪಿಕ್ಸೆಲ್ ಬಿನ್ನಿಂಗ್ ನಿಮಗೆ ಇಮೇಜ್ಗಳಲ್ಲಿನ ಅತಿ ಸಣ್ಣ ಮತ್ತು ನಂಬಲಾಗದ ಅಂದ್ರೆ ಈವರೆಗೆ ನೀವೊಂದು ಸ್ಮಾರ್ಟ್ಫೋನ್ ನಲ್ಲಿ ನೋಡದ ಇಮೇಜಿನರಿಯನ್ನು ನೀಡುತ್ತದೆ.
ಎರಡನೆಯದಾಗಿ ಇದರಲ್ಲಿನ TOF ಅಂದ್ರೆ ಟೈಮ್ ಆ ಫ್ಲೈಟ್ ಕ್ಯಾಮೆರಾ ಇದು ತನ್ನನ್ ತಾನೇ ನೀವು ತೆಗೆಯುವ ಇಮೇಜ್ಗಳಲ್ಲಿ ಬ್ಯಾಕ್ಗ್ರೌಂಡ್ ಅನ್ನು ಸರಸರಿಯಾದ ಲೈಟ್ ಸ್ಪೀಡ್ ಅನುಗುಣವಾಗಿ ಡೆಪ್ತ್ ಅನುಸರಿಸಿ ನೀವು ತೆಗೆಯುವ ಫೋಟೋಗಳಲ್ಲಿ ಉತ್ತಮವಾದ ಪೋಟ್ರೇಟ್ ನೀಡುತ್ತದೆ.
ಮೂರನೇದಾಗಿ Honor View 20 ಭಾರತದಲ್ಲಿ ಬಿಡುಗಡೆಯಾಗಿರುವ ವಿಶ್ವದ ಈ ಮೊಟ್ಟ ಮೊದಲ 'ಪಂಚ್ ಹೋಲ್' ಡಿಸೈನ್ ಹೊಂದಿರುವ ಸ್ಮಾರ್ಟ್ಫೋನ್ ಆಗಿದೆ. ಇದು ನಿಮಗೆ ಫ್ರಂಟಲ್ಲಿ 25MP ಇನ್ ಸ್ಕ್ರೀನ್ ಕ್ಯಾಮೆರಾವನ್ನು ನೀಡುತ್ತದೆ. ನಾಚ್ ಎಂದಿನಿಂದ ಶುರುವಾಯ್ತೋ ಅಂದಿನಿಂದ ಸ್ಮಾರ್ಟ್ಫೋನ್ ತಯಾರಕರು ಸ್ಕ್ರೀನ್ ಟು ಬಾಡಿ ರೀಷು ಯಾವ ರೀತಿ ಆದಷ್ಟು ಮಟ್ಟಿಗೆ ಕಮ್ಮಿ ಮಾಡುವುದಕ್ಕಾಗಿ ಯತ್ನಿಸುತ್ತಿದ್ದಾರೆ. ಆದರೆ ಇಲ್ಲಿ ನಾಚ್ ಸಹ ಬೇಕಾಗಿದೆ. ಈ ಪಂಚ್ ಹೋಲ್' ಡಿಸೈನ್ ಫೋನಲ್ಲಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ನೀಡಿ ಡಿಸ್ಪ್ಲೇಯ ಕೋನದಲ್ಲಿ ಇರಿಸಿದೆ. ಇದು ನಿಜಕ್ಕೂ ಈವರೆಗೆ ಯಾರು ಊಹಿಸದ ಇಂಟ್ರೆಸ್ಟಿಂಗ್ ಫೀಚರ್ ಆಗಿದೆ.
ನಾಲ್ಕನೆಯದಾಗಿ ಹಾನರ್ ತನ್ನ ಗ್ರೇಟ್ ಫಿನಿಷ್ಗಾಗಿ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಹೆಸರುವಾಸಿಯಾಗಿದೆ. ಈ Honor View 20 ಸ್ಮಾರ್ಟ್ಫೋನಲ್ಲಿ ನಿಮಗೆ ಸಿಗ್ನೇಚರ್ V ಶೇಪ್ ಫಿನಿಷ್ ನೀಡಿದೆ. ಇದರ ಹಿಂಭಾಗದ ಸರ್ಫೇಸ್ ಮೋವ್ ಆಗಿ ಬೆಳಗು ಹರಿಯುತ್ತಿದಂತೆ ನಿಮಗೆ ಆ ಸಿಗ್ನೇಚರ್ V ಶೇಪ್ ಫಿನಿಷ್ ಗೋಚರಿಸುತ್ತದೆ. ಇದು ಕೂಲ್ ಲುಕ್ ನೀಡುತ್ತದೆ ಅದರಲ್ಲಿ ಯಾವುದೇ ಸಂದೇಹವಿಲ್ಲ. ಇದರೊಂದಿಗೆ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ.
ಕೊನೆಯದಾಗಿ ಈ Honor View 20 ಸ್ಮಾರ್ಟ್ಫೋನ್ ನಿಮಗೆ 4000mAh ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ನಿಮಗೆ ಒಂದೂವರೆ ದಿನದ ಬ್ಯಾಟರಿ ಲೈಫನ್ನು ಆರಾಮಾಗಿ ನೀಡುತ್ತದೆ. ಇದರಲ್ಲಿ ನಿಮಗೆ 20QW ಸೂಪರ್ ಚಾರ್ಜ್ ಬಾಕ್ಸ್ ಒಳಗೆ ಬರುತ್ತದೆ. ಇದರಲ್ಲಿ ಹಾನರ್ ಇದೇಲ್ಲ ನೀಡಿ ನಿಮಗೆ ವಯರ್ಲೆಸ್ ಚಾರ್ಜಿಂಗ್ ಫೀಚರ್ ಮಾತ್ರ ನೀಡುವುದಿಲ್ಲ.