ಭಾರತದಲ್ಲಿ ನಿಮಗೊಂದು ಧೀರ್ಘಕಾಲದವರೆಗೆ ಬಾಳಿಕೆ ಬರುವ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಪ್ರಸ್ತುತ ಅತಿದೊಡ್ಡ ಬ್ಯಾಟರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಬರೋಬ್ಬರಿ 7000mAh ಬ್ಯಾಟರಿಯನ್ನು ಹೊಂದಿರುವ itel P40 Plus ಬೆಸ್ಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಲೆ ಎತ್ತಿ ನಿಲ್ಲುತ್ತದೆ. ಈ ಸ್ಮಾರ್ಟ್ಫೋನ್ 4G ಟೆಕ್ನಾಲಜಿಯನ್ನು ಬೆಂಬಲಿಸುವುದರೊಂದಿಗೆ 4GB+4GB RAM ಮತ್ತು ದೊಡ್ಡ ಡಿಸ್ಪ್ಲೇ ಯೊಂದಿಗೆ ಬರುತ್ತದೆ. ಭಾರತದಲ್ಲಿ ಈ 7000mAh ಬ್ಯಾಟರಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಈಗಾಗಲೇ Samsung Galaxy F62, Samsung Galaxy M51, itel P40 Plus ಮತ್ತು Tecno Pova 3 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. ಆದರೆ ಇವುಗಳು ಇಂದಿನ ದಿನಗಳಲ್ಲಿ ಖರೀದಿಸಲು ಲಭ್ಯವಿಲ್ಲ. ಆದರೆ ಪ್ರಸ್ತುತ itel P40+ ಸ್ಮಾರ್ಟ್‌ಫೋನ್ ಮಾತ್ರ ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಲು ಲಭ್ಯವಿದೆ.
Also Read: ನಿಮ್ಮ ಒಂದು ಕ್ಲಿಕ್ ನಿಮ್ಮ ಮೊಬೈಲ್ ನಂಬರ್ ಹ್ಯಾಕರ್ ಕೈ ಸೇರಿಸುತ್ತೆ! ಏನಿದು SIM Swap ವಂಚನೆ?
ಕಳೆದ ವರ್ಷ ಅಂದ್ರೆ 2023 ಜೂಲೈ ತಿಂಗಳಲ್ಲಿ ಬಿಡುಗಡೆಯಾದ ಈ ಐಟೆಲ್ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆಯಾಗಿದ್ದು 4GB RAM ಮತ್ತು 128GB ಸ್ಟೋರೇಜ್ ವೇರಿಯೆಂಟ್ ಬೆಲೆ ₹7,299 ರೂಗಳಾಗಿದೆ. ಸ್ಮಾರ್ಟ್ಫೋನ್ ಅನ್ನು ಆಸಕ್ತರು Ice Cyan ಮತ್ತು Black ಬಣ್ಣಗಳಲ್ಲಿ ಖರೀದಿಸಬಹುದು. ಅಲ್ಲದೆ ಬಳಕೆದಾದರ ಸರಳ ಮತ್ತು ಸುಲಭ ಖರೀದಿಗಾಗಿ ನೀವು Bajaj FinServ EMI ಮೂಲಕ ಖರೀದಿಸಲು ಉತ್ತಮವಾಗಿದೆ. ಅಂದ್ರೆ ನೀವು 3 ಮತ್ತು 6 ತಿಂಗಳ EMI ಸೌಲಭ್ಯವನ್ನು ಸಹ ನೀಡಲಾಗುತ್ತಿದ್ದು ಇದನ್ನು ಇಂದೇ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.
ಈ ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಈ ಫೋನ್ ನಯವಾದ ವಿನ್ಯಾಸದೊಂದಿಗೆ 6.82 ಇಂಚಿನ HD+ ಪಂಚ್-ಹೋಲ್ ಫುಲ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಪರದೆಯ ರಿಫ್ರೆಶ್ ದರ 90 Hz ಆಗಿದೆ. P40+ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬಳಕೆದಾರರು ಉತ್ತಮ ದೃಶ್ಯ ಅನುಭವವನ್ನು ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ. ಈ Itel P40+ ಕಂಪನಿಯ ಪವರ್ ಸೀರೀಸ್‌ನ ಭಾಗವಾಗಿದ್ದು ಇದರ ಪ್ರಮುಖ ಫೀಚರ್ ಅಂದ್ರೆ ಇದರಲ್ಲಿನ ಒದಗಿಸಲಾದ 7000mAh ಬ್ಯಾಟರಿಯಾಗಿದೆ. itel P40+ ಸ್ಮಾರ್ಟ್ಫೋನ್ ಈಗಾಗಲೇ ಮೇಲೆ ತಿಳಿಸಿರುವಂತೆ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.
ಅಲ್ಲದೆ ಹ್ಯಾಂಡ್‌ಸೆಟ್ 4GB ಹೆಚ್ಚುವರಿಯ ಮೆಮೊರಿ ಫ್ಯೂಷನ್ ಬೆಂಬಲವನ್ನು ಸಹ ಹೊಂದಿದೆ. ಅಂದ್ರೆ ಈ ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ 8GB RAM ಬೆಂಬಲವನ್ನು ಪಡೆಯಬಹುದು. ಈ ಫೋನ್‌ನಲ್ಲಿ ಮಲ್ಟಿಟಾಸ್ಕಿಂಗ್ ಸುಲಭವಾಗಿರುತ್ತದೆ ಅಲ್ಲದೆ 13MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಭದ್ರತೆಗಾಗಿ ಫೋನ್ ಸೈಡ್ ಫಿಂಗರ್‌ಪ್ರಿಂಟ್ ಮತ್ತು ಫೇಸ್ ಐಡಿ ಫೀಚರ್ಗಳೊಂದಿಗೆ ಬರುತ್ತದೆ.