ಬರೋಬ್ಬರಿ 7000mAh ಬ್ಯಾಟರಿಯನ್ನು ಹೊಂದಿರುವ itel P40 Plus ಬೆಸ್ಟ್ ಸ್ಮಾರ್ಟ್‌ಫೋನ್‌!

ಬರೋಬ್ಬರಿ 7000mAh ಬ್ಯಾಟರಿಯನ್ನು ಹೊಂದಿರುವ itel P40 Plus ಬೆಸ್ಟ್ ಸ್ಮಾರ್ಟ್‌ಫೋನ್‌!
HIGHLIGHTS

ಬರೋಬ್ಬರಿ 7000mAh ಬ್ಯಾಟರಿಯನ್ನು ಹೊಂದಿರುವ itel P40 Plus ಬೆಸ್ಟ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತಲೆ ಎತ್ತಿ ನಿಲ್ಲುತ್ತದೆ.

ಪ್ರಸ್ತುತ itel P40 Plus ಸ್ಮಾರ್ಟ್‌ಫೋನ್‌ ಮಾತ್ರ ಅಮೆಜಾನ್ ಇಂಡಿಯಾದಲ್ಲಿ 7299 ರೂಗಳಿಗೆ ಖರೀದಿಸಲು ಲಭ್ಯವಿದೆ.

ಭಾರತದಲ್ಲಿ ನಿಮಗೊಂದು ಧೀರ್ಘಕಾಲದವರೆಗೆ ಬಾಳಿಕೆ ಬರುವ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಪ್ರಸ್ತುತ ಅತಿದೊಡ್ಡ ಬ್ಯಾಟರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಬರೋಬ್ಬರಿ 7000mAh ಬ್ಯಾಟರಿಯನ್ನು ಹೊಂದಿರುವ itel P40 Plus ಬೆಸ್ಟ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತಲೆ ಎತ್ತಿ ನಿಲ್ಲುತ್ತದೆ. ಈ ಸ್ಮಾರ್ಟ್ಫೋನ್ 4G ಟೆಕ್ನಾಲಜಿಯನ್ನು ಬೆಂಬಲಿಸುವುದರೊಂದಿಗೆ 4GB+4GB RAM ಮತ್ತು ದೊಡ್ಡ ಡಿಸ್ಪ್ಲೇ ಯೊಂದಿಗೆ ಬರುತ್ತದೆ. ಭಾರತದಲ್ಲಿ ಈ 7000mAh ಬ್ಯಾಟರಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಈಗಾಗಲೇ Samsung Galaxy F62, Samsung Galaxy M51, itel P40 Plus ಮತ್ತು Tecno Pova 3 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. ಆದರೆ ಇವುಗಳು ಇಂದಿನ ದಿನಗಳಲ್ಲಿ ಖರೀದಿಸಲು ಲಭ್ಯವಿಲ್ಲ. ಆದರೆ ಪ್ರಸ್ತುತ itel P40+ ಸ್ಮಾರ್ಟ್‌ಫೋನ್‌ ಮಾತ್ರ ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಲು ಲಭ್ಯವಿದೆ.

Also Read: ನಿಮ್ಮ ಒಂದು ಕ್ಲಿಕ್‌ ನಿಮ್ಮ ಮೊಬೈಲ್ ನಂಬರ್ ಹ್ಯಾಕರ್ ಕೈ ಸೇರಿಸುತ್ತೆ! ಏನಿದು SIM Swap ವಂಚನೆ?

ಭಾರತದಲ್ಲಿ itel P40 Plus ಬೆಲೆ ಮತ್ತು ಮಾರಾಟದ ಆಫರ್‌ಗಳು

ಕಳೆದ ವರ್ಷ ಅಂದ್ರೆ 2023 ಜೂಲೈ ತಿಂಗಳಲ್ಲಿ ಬಿಡುಗಡೆಯಾದ ಈ ಐಟೆಲ್ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆಯಾಗಿದ್ದು 4GB RAM ಮತ್ತು 128GB ಸ್ಟೋರೇಜ್ ವೇರಿಯೆಂಟ್ ಬೆಲೆ ₹7,299 ರೂಗಳಾಗಿದೆ. ಸ್ಮಾರ್ಟ್ಫೋನ್ ಅನ್ನು ಆಸಕ್ತರು Ice Cyan ಮತ್ತು Black ಬಣ್ಣಗಳಲ್ಲಿ ಖರೀದಿಸಬಹುದು. ಅಲ್ಲದೆ ಬಳಕೆದಾದರ ಸರಳ ಮತ್ತು ಸುಲಭ ಖರೀದಿಗಾಗಿ ನೀವು Bajaj FinServ EMI ಮೂಲಕ ಖರೀದಿಸಲು ಉತ್ತಮವಾಗಿದೆ. ಅಂದ್ರೆ ನೀವು 3 ಮತ್ತು 6 ತಿಂಗಳ EMI ಸೌಲಭ್ಯವನ್ನು ಸಹ ನೀಡಲಾಗುತ್ತಿದ್ದು ಇದನ್ನು ಇಂದೇ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

7000mAh big battery itel P40 Plus smartphone
7000mAh big battery itel P40 Plus smartphone

ಭಾರತದಲ್ಲಿ itel P40+ ಫೀಚರ್ ಮತ್ತು ವಿಶೇಷಣಗಳು

ಈ ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಈ ಫೋನ್ ನಯವಾದ ವಿನ್ಯಾಸದೊಂದಿಗೆ 6.82 ಇಂಚಿನ HD+ ಪಂಚ್-ಹೋಲ್ ಫುಲ್ ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಪರದೆಯ ರಿಫ್ರೆಶ್ ದರ 90 Hz ಆಗಿದೆ. P40+ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬಳಕೆದಾರರು ಉತ್ತಮ ದೃಶ್ಯ ಅನುಭವವನ್ನು ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ. ಈ Itel P40+ ಕಂಪನಿಯ ಪವರ್ ಸೀರೀಸ್‌ನ ಭಾಗವಾಗಿದ್ದು ಇದರ ಪ್ರಮುಖ ಫೀಚರ್ ಅಂದ್ರೆ ಇದರಲ್ಲಿನ ಒದಗಿಸಲಾದ 7000mAh ಬ್ಯಾಟರಿಯಾಗಿದೆ. itel P40+ ಸ್ಮಾರ್ಟ್ಫೋನ್ ಈಗಾಗಲೇ ಮೇಲೆ ತಿಳಿಸಿರುವಂತೆ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.

ಅಲ್ಲದೆ ಹ್ಯಾಂಡ್‌ಸೆಟ್ 4GB ಹೆಚ್ಚುವರಿಯ ಮೆಮೊರಿ ಫ್ಯೂಷನ್ ಬೆಂಬಲವನ್ನು ಸಹ ಹೊಂದಿದೆ. ಅಂದ್ರೆ ಈ ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ 8GB RAM ಬೆಂಬಲವನ್ನು ಪಡೆಯಬಹುದು. ಈ ಫೋನ್‌ನಲ್ಲಿ ಮಲ್ಟಿಟಾಸ್ಕಿಂಗ್ ಸುಲಭವಾಗಿರುತ್ತದೆ ಅಲ್ಲದೆ 13MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಭದ್ರತೆಗಾಗಿ ಫೋನ್ ಸೈಡ್ ಫಿಂಗರ್‌ಪ್ರಿಂಟ್ ಮತ್ತು ಫೇಸ್ ಐಡಿ ಫೀಚರ್ಗಳೊಂದಿಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo