50MP ಸೆಲ್ಫಿ ಕ್ಯಾಮೆರಾದ Nothing Phone 2a Plus ಭಾರತದಲ್ಲಿ ಲಾಂಚ್! ಬೆಲೆಯೊಂದಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ!

50MP ಸೆಲ್ಫಿ ಕ್ಯಾಮೆರಾದ Nothing Phone 2a Plus ಭಾರತದಲ್ಲಿ ಲಾಂಚ್! ಬೆಲೆಯೊಂದಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ!
HIGHLIGHTS

Nothing Phone 2a Plus ಸ್ಮಾರ್ಟ್ಫೋನ್ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಗೊಳಿಸಿದೆ.

Nothing Phone 2a Plus ಸ್ಮಾರ್ಟ್ಫೋನ್ 7ನೇ ಆಗಸ್ಟ್ 2024 ರಿಂದ ಮೊದಲ ಮಾರಾಟಕ್ಕೆ ಫ್ಲಿಪ್ಕಾರ್ಟ್ ಮೂಲಕ ಪಡೆಯಬಹುದು.

Nothing Phone 2a Plus ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ, MediaTek Dimensity 7350 ಪ್ರೊಸೆಸರ್ ಅನ್ನು ಹೊಂದಿದೆ.

ಪಾರದರ್ಶಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದ ನಥಿಂಗ್ (Nothing) ಸ್ಮಾರ್ಟ್ಫೋನ್ ತಯಾರಕ ತನ್ನ ಲೇಟೆಸ್ಟ್ Nothing Phone 2a Plus ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು ಇದರ ಲೇಟೆಸ್ಟ್ ಫೀಚರ್ಗಳು ಗ್ರಾಹಕರಿಗೆ ಸಿಕಾಪಟ್ಟೆ ಪಸಂದ್ ಆಗುತ್ತಿದೆ. ಈ ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳನ್ನು ನೋಡುವುದಾದರೆ 50MP ಸೆಲ್ಫಿ ಕ್ಯಾಮೆರಾ, MediaTek Dimensity 7350 ಪ್ರೊಸೆಸರ್ ಮತ್ತು 3 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ. ಈ Nothing Phone 2a Plus ಖರೀದಿಸುವ ಮುಂಚೆ ಇದರ ಬೆಲೆಯೊಂದಿಗೆ ಒಂದಿಷ್ಟು ಮಾಹಿತಿಗಳನ್ನು ಈ ಕೆಳಗೆ ಪರಿಶೀಲಿಸಬಹುದು.

Nothing Phone 2a Plus Display Details

ಈ ನಥಿಂಗ್ ಸ್ಮಾರ್ಟ್ಫೋನ್ ಮುಂಭಾಗದಲ್ಲಿ Nothing Phone 2a Plus ನಂತೆಯೇ ಅದೇ ಡಿಸ್‌ಪ್ಲೇಯನ್ನು ಹೊಂದಿದೆ. ಇದು 6.7 ಇಂಚಿನ FHD+ AMOLED ಸ್ಕ್ರೀನ್ 1300 nits ಗರಿಷ್ಠ ಬ್ರೈಟ್‌ನೆಸ್ 120Hz ಅಡಾಪ್ಟಿವ್ ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ಡಿಸ್ಪ್ಲೇ ಪ್ರೊಟೆಕ್ಷನ್‌ಗಾಗಿ Corning Gorilla Glass 5 ಅನ್ನು ಹೊಂದಿದೆ. ಆದಾಗ್ಯೂ ಇದು ಈಗ ನವೀಕರಿಸಿದ ಪಲ್ಸ್-ವಿಡ್ತ್ ಮಾಡ್ಯುಲೇಶನ್ (PWM) ಮಬ್ಬಾಗಿಸುವಿಕೆಯನ್ನು ಹೊಂದಿದ್ದು ಇದನ್ನು 2160Hz ಹೆಚ್ಚಿಸಲಾಗಿದೆ.

50MP Selfie Camera's Nothing Phone 2a Plus launched in India
50MP Selfie Camera’s Nothing Phone 2a Plus launched in India

Nothing Phone 2a Plus Camera Details

ಈ ಲೇಟೆಸ್ಟ್ Nothing Phone 2a Plus ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ f/1.88 ಅಪರ್ಚರ್ನೊಂದಿಗೆ Samsung GN9 ಆಧಾರಿತ OIS ಮತ್ತು EIS ಸೆನ್ಸರ್ ಹೊಂದಿದೆ. ಎರಡನೇಯದಾಗಿ ಮತ್ತೊಂದು 50MP ಅಲ್ಟ್ರಾ ವೈಡ್ ಕ್ಯಾಮೆರಾ f/2.2 ಅಪರ್ಚರ್ನೊಂದಿಗೆ Samsung JN1ಸೆನ್ಸರ್ ಅನ್ನು ಬರುತ್ತದೆ. ಕೊನೆಯದಾಗಿ ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಕ್ಯಾಮೆರಾ f/2.2 ಅಪರ್ಚರ್ ಹೊಂದಿದೆ. ಈ ಮೂಲಕ ನಿಮಗೆ ಈ ಸ್ಮಾರ್ಟ್ಫೋನ್ ಅತ್ಯುತ್ತಮವಾದ ಇಮೇಜ್ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಯಾವುದೇ ಕಸರತ್ತನ್ನು ಮಾಡಲು ತಯಾರಾಗಿದೆ.

50MP Selfie Camera's Nothing Phone 2a Plus launched in India
50MP Selfie Camera’s Nothing Phone 2a Plus launched in India

Nothing Phone 2a Plus Hardware Details

ಇಂದು ಬಿಡುಗಡೆಯಾದ Nothing Phone 2a Plus ಸ್ಮಾರ್ಟ್ಫೋನ್ MediaTek Dimensity 7350 Pro 5G ಪ್ರೊಸೆಸರ್ ಮತ್ತು Mali-G610 MC4 GPU ಜೊತೆಗೆ ಆರಂಭಿಕ 8GB RAM ಮತ್ತು 256GB ವರೆಗಿನ ಸ್ಟೋರೇಜ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಅನ್ನು ಆಧರಿಸಿದ್ದು ತಮ್ಮದೇಯಾದ Nothing 2.6 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಅಲ್ಲದೆ Nothing ಕಂಪನಿಯು ಈ ಹೊಸ ಫೋನ್‌ಗಾಗಿ ಈಗಾಗಲೇ ಮೇಲೆ ತಿಳಿಸಿರುವಂತೆ 3 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.

Nothing Phone 2a Plus Battery Details

ಈ Nothing Phone 2a Plus ಸ್ಮಾರ್ಟ್ಫೋನ್ ಬ್ಯಾಟರಿಯನ್ನು ನೋಡುವುದಾದರೆ 5000mAh ಸಾಮರ್ಥ್ಯ ಹೊಂದಿದ್ದು 33W ಚಾರ್ಜಿಂಗ್ ವೇಗವನ್ನು ನೀಡಿತು ಇದು ಸ್ವಲ್ಪ ಕಡಿಮೆಯಾಗಿದೆ. ವಿಶೇಷವಾಗಿ ಇದೇ ರೀತಿಯ ಬೆಲೆ ವಿಭಾಗದಲ್ಲಿ ಸ್ಮಾರ್ಟ್‌ಫೋನ್‌ಗಳು ಸುಮಾರು 50W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತವೆ. Nothing Phone 2a Plus ಫೋನ್ ಅನ್ನು ಶೇಕಡಾ 0 ರಿಂದ 100 ರಷ್ಟು ಚಾರ್ಜ್ ಮಾಡಲು ಸುಮಾರು 40-45 ನಿಮಿಷಗಳು ಬೇಕಾಗುತ್ತದೆ.

50MP Selfie Camera's Nothing Phone 2a Plus launched in India
50MP Selfie Camera’s Nothing Phone 2a Plus launched in India

Nothing Phone 2a Plus Price ಮತ್ತು Offers Details

ಭಾರತದಲ್ಲಿ ಈ ಸ್ಮಾರ್ಟ್ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು ಭಾರತೀಯ ಮಾರುಕಟ್ಟೆಗೆ ವಿಶೇಷವಾದ 8GB RAM ಮಾದರಿಯು ಮಾರಾಟದ ಮೊದಲ ದಿನದಲ್ಲಿ 24,999 ರೂಗಳಾಗಿದ್ದು ಇದರ 12GB RAM ರೂಪಾಂತರವು ಮೊದಲ ದಿನದಲ್ಲಿ 26,999 ರೂಗಳಿಗೆ ಬಿಡುಗಡೆಯ ಕೋಡುಗಡೆಯಾಗಿ ನೀಡುತ್ತಿದೆ. ಆದರೆ ಆಫರ್ ಹೊರೆತು ಪಡಿಸಿ ನೋಡುವುದಾದರೆ ಈ ಕೆಳಗೆ ಇದರ ಸಾಮಾನ್ಯ ಬೆಲೆ ಮತ್ತು ಲಭ್ಯತೆಯನ್ನು ನೋಡುವುದಾದರೆ Nothing Phone 2a Plus ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ 27,999 ರೂಗಳಾಗಿದ್ದು Nothing Phone 2a Plus ಸ್ಮಾರ್ಟ್ಫೋನ್ 12GB RAM ಮತ್ತು 256GB ಸ್ಟೋರೇಜ್ 29,999 ರೂಗಳಾಗಿದೆ. ಸ್ಮಾರ್ಟ್ಫೋನ್ ನಿಮಗೆ 7ನೇ ಆಗಸ್ಟ್ 2024 ರಿಂದ ಮೊದಲ ಮಾರಾಟಕ್ಕೆ ಫ್ಲಿಪ್ಕಾರ್ಟ್ ಮೂಲಕ ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo