ಭಾರತದಲ್ಲಿ ಅತಿ ಹೆಚ್ಚು ನಿರೀಕ್ಷಿತ ಮೋಟೊರೋಲದ (Motorola) ಹೊಸ ಎಡ್ಜ್ ಸರಣಿಯ ಸ್ಮಾರ್ಟ್‌ಫೋನ್ Motorola Edge 50 Ultra ಸ್ಮಾರ್ಟ್ಫೋನ್ ಮಾರಾಟ ಇಂದಿನಿಂದ ಶುರುವಾಗಿದ್ದು ಸುಮಾರು 59,999 ರೂಗಳಿಗೆ ಫ್ಲಿಪ್ಕಾರ್ಟ್ (Flipkart) ಮೂಲಕ ಮಾರಾಟವಾಗುತ್ತಿದೆ. ಈ Motorola Edge 50 Ultra ಸ್ಮಾರ್ಟ್ಫೋನ್ ಅನ್ನು ಖರೀದಿಸುವ ಆಸಕ್ತರು ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ನಿಂದ ಇಂದು ಮಧ್ಯಾಹ್ನ 12:00 ಗಂಟೆಗೆ ತಮ್ಮ HDFC ಅಥವಾ ICICI ಕ್ರೆಡಿಟ್ ಕಾರ್ಡ್ ಬಳಸಿ ಭಾರಿ ಆಫರ್ಗಳೊಂದಿಗೆ ಖರೀದಿಸಬಹುದು.
ಭಾರತದಲ್ಲಿ Motorola Edge 50 Ultra ಸ್ಮಾರ್ಟ್ಫೋನ್ ಒಂದೇ ಒಂದು 12GB RAM ಮತ್ತು 512GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದ್ದು ಫೋನ್ ಬೆಲೆ 59,999 ರೂಗಳಿಗೆ ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್ಫೋನ್ ಮೇಲೆ ಕಂಪನಿಯು ತನ್ನ ಮೊದಲ ಮಾರಾಟದಲ್ಲಿ ಬರೋಬ್ಬರಿ 5000 ರೂಪಾಯಿಗಳ Early Bird Offer ಅಡಿಯಲ್ಲಿ ರಿಯಾಯಿತಿಯನ್ನು ನೀಡುತ್ತಿದೆ.
ಅಲ್ಲದೆ ಆಸಕ್ತ ಗ್ರಾಹಕರು ತಮ್ಮ HDFC ಅಥವಾ ICICI ಕ್ರೆಡಿಟ್ ಕಾರ್ಡ್ EMI ಅಲ್ಲದ ಪಾವತಿಗಾಗಿ ಬಳಸಿ ಮತ್ತೆ ಸುಮಾರು 5000 ರೂಗಳ ಬಿಡುಗಡೆಯ ಕೊಡುಗೆಯನ್ನು ಪಡೆಯಬಹುದು. ಅಷ್ಟೇಯಲ್ಲದೆ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಪಾವತಿಗಳಲ್ಲಿ ಗ್ರಾಹಕರಿಗೆ 5% ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಸಹ ನೀಡುತ್ತದೆ. ಒಟ್ಟಾರೆಯಾಗಿ ನೀವು ಈ Motorola Edge 50 Ultra ಸ್ಮಾರ್ಟ್ಫೋನ್ ಅನ್ನು ಸುಮಾರು 49,999 ರೂಗಳಿಗೆ ಮೊದಲ ಮಾರಾಟದಲ್ಲಿ ಖರೀದಿಸಬಹುದು.
ಈ ಲೇಟೆಸ್ಟ್ Motorola Edge 50 Ultra ಸ್ಮಾರ್ಟ್ಫೋನ್ ನಿಮಗೆ 6.7 ಇಂಚಿನ Super 1.5K ರೆಸಲ್ಯೂಷನ್ ಅನ್ನು 2712 x 1220 ಪಿಕ್ಸೆಲ್ ಹೊಂದಿದೆ. ಅಲ್ಲದೆ 144Hz ರಿಫ್ರೆಶ್ ರೇಟ್ OLED ಡಿಸ್ಪ್ಲೇ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿವೆ. ಇದರ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಫೋನ್ ಟ್ರಿಪಲ್ ಕ್ಯಾಮೆತ ಸೆಟಪ್ ಹೊಂದಿದ್ದು 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತೊಂದು 50MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಮತ್ತು ಕೊಂದೆಯದಾಗಿ 3x ಆಪ್ಟಿಕಲ್ ಜೂಮ್‌ನೊಂದಿಗೆ 64MP ಟೆಲಿಫೋಟೋ ಲೆನ್ಸ್ ಹೊಂದಿದೆ. Motorola Edge 50 Ultra ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಮುಂಭಾಗದಲ್ಲಿ ಹೊಂದಿದೆ.
ಈ Motorola Edge 50 Ultra ಸ್ಮಾರ್ಟ್ಫೋನ್ 12GB LPDDR5X RAM ಮತ್ತು 512GB UFS 4.0 ಸ್ಟೋರೇಜ್‌ನೊಂದಿಗೆ ಜೋಡಿಸಲಾದ Qualcomm Snapdragon® 8s Gen 3 ಮೊಬೈಲ್ ಪ್ಲಾಟ್‌ಫಾರ್ಮ್‌ನೊಂದಿಗೆ ಸಜ್ಜುಗೊಂಡಿದೆ. 4500mAh ಬ್ಯಾಟರಿಯು ಫೋನ್ ಗಾತ್ರ ಮತ್ತು ಬ್ಯಾಟರಿ ಅವಧಿಯ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ. Motorola ತಮ್ಮ ಸದಾ ಪ್ರಭಾವಶಾಲಿ TurboPower™ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಇದನ್ನು ಪೂರೈಸುತ್ತದೆ. 125W ವೈರ್ಡ್ ಚಾರ್ಜಿಂಗ್ ನಿಮ್ಮ ಫೋನ್ ಅನ್ನು ನಿಮಿಷಗಳಲ್ಲಿ ಪವರ್ ನೀಡಲು ಅನುಮತಿಸುತ್ತದೆ.