50MP ಸೆಲ್ಫಿ ಕ್ಯಾಮೆರಾ ಮತ್ತು ಕರ್ವ್ ಡಿಸ್ಪ್ಲೇಯ Vivo V29e 5G ಸ್ಮಾರ್ಟ್ಫೋನ್ ಮೇಲೆ ₹6000 ರೂಗಳ ಭಾರಿ ಡಿಸ್ಕೌಂಟ್!
ಪವರ್ಫುಲ್ ಸೆಲ್ಫಿ ಕ್ಯಾಮೆರಾ ನಿಮಗೆ ಬೇಕಿದ್ದರೆ ಈ 50MP ಸೆಲ್ಫಿ ಕ್ಯಾಮೆರಾ ಮತ್ತು ಕರ್ವ್ ಡಿಸ್ಪ್ಲೇಯ Vivo V29e 5G ಸ್ಮಾರ್ಟ್ಫೋನ್
ಈ ಸ್ಮಾರ್ಟ್ಫೋನ್ ಕಂಪನಿಯ ವೆಬ್‌ಸೈಟ್‌ನಲ್ಲಿ ರೂ 6000 ವರೆಗೆ ಭಾರಿ ಕಡಿತವನ್ನು ನೀಡುತ್ತಿದೆ.
ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚಾಗಿ ಪೋಸ್ಟ್ ಮಾಡಲು ಎಲ್ಲರು ಇಷ್ಟಪಡುತ್ತಾರೆ. ಅದರಲ್ಲೂ ಸೆಲ್ಫಿಗಳಂತೂ ಪ್ರತಿಯೊಬ್ಬರಿಗೂ ಬಹು ಇಷ್ಟ. ನೀವು ಅಂಥವರಲ್ಲಿ ಒಬ್ಬರಾಗಿದ್ದಾರೆ ಈ ಡೀಲ್ ಕೈ ಜಾರುವ ಮುಂಚೆ ಪಡೆದುಕೊಳ್ಳಿ. ಸೆಲ್ಫಿಗೆ ಸಂಬಂಧಿಸಿದ ಹೊಸ ಟ್ರೆಂಡ್‌ನಿಂದಾಗಿ ಪವರ್ಫುಲ್ ಸೆಲ್ಫಿ ಕ್ಯಾಮೆರಾ ಈಗ ಅನಿವಾರ್ಯವಾಗಿದೆ. ನೀವು ಪವರ್ಫುಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಾಗಿ ಸಹ ಹುಡುಕುತ್ತಿದ್ದರೆ ನೀವು Vivo V29e 5G ವಿಶೇಷ ಒಪ್ಪಂದದ ಪ್ರಯೋಜನವನ್ನು ಪಡೆಯುತ್ತೀರಿ. ಈ ಸ್ಮಾರ್ಟ್ಫೋನ್ ಕಂಪನಿಯ ವೆಬ್‌ಸೈಟ್‌ನಲ್ಲಿ ರೂ 6000 ವರೆಗೆ ಭಾರಿ ಕಡಿತವನ್ನು ನೀಡುತ್ತಿದೆ. ಈ 5G ಸ್ಮಾರ್ಟ್ಫೋನ್ ಶಕ್ತಿಶಾಲಿ ವಿಶೇಷಣಗಳೊಂದಿಗೆ ಮಿಡ್ರೇಂಜ್ ವಿಭಾಗದಲ್ಲಿ ಅತ್ಯುತ್ತಮ ಮೌಲ್ಯವನ್ನು ನೀಡುತ್ತಿದೆ.
Vivo V29e 5G ಸ್ಮಾರ್ಟ್ಫೋನ್ ಹೈಲೈಟ್ ಫೀಚರ್‌ಗಳು
ಬಾಗಿದ ಡಿಸ್ಪ್ಲೇ ಹೊರತುಪಡಿಸಿ Vivo V29e 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 44W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದರ 50MP ಸೆಲ್ಫಿ ಕ್ಯಾಮೆರಾವನ್ನು ಹೊರತುಪಡಿಸಿ ಇದು ಹಿಂದಿನ ಪ್ಯಾನೆಲ್‌ನಲ್ಲಿ 64MP ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ ವಿಶೇಷ ವೆಡ್ಡಿಂಗ್ ಸ್ಟೈಲ್ ಪೋಟ್ರೇಟ್ ಕ್ಯಾಮೆರಾ ವೈಶಿಷ್ಟ್ಯವನ್ನು ಹೊಂದಿದೆ ಮತ್ತು ಇದು ಬಣ್ಣ ಬದಲಾಯಿಸುವ ವಿನ್ಯಾಸವನ್ನು ಹೊಂದಿದೆ. ಪ್ರಮಾಣಿತ ರಿಯಾಯಿತಿಯ ಹೊರತಾಗಿ ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ.
Vivo V29e ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್‌ಗಳು
ಈ ವಿವೊದ Vivo V29e 5G ಸ್ಮಾರ್ಟ್‌ಫೋನ್‌ನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವು 31,999 ರೂಗಳ MRP ಬದಲಿಗೆ 26,999 ರೂಗಳಲ್ಲಿ ಪಟ್ಟಿಮಾಡಲಾಗಿದೆ. ಕಂಪನಿಯ ವೆಬ್‌ಸೈಟ್‌ನ ಹೊರತಾಗಿ ಆಯ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸುವ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ರೂ 2,000 ಹೆಚ್ಚುವರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರೀತಿಯಾಗಿ Vivo V29e 5G ಸ್ಮಾರ್ಟ್ಫೋನ್ ಅನ್ನು ಒಟ್ಟು 7000 ರೂಪಾಯಿಗಳ ರಿಯಾಯಿತಿಯಲ್ಲಿ ಖರೀದಿಸಬಹುದು. ಗ್ರಾಹಕರು ಹಳೆಯ ಫೋನ್‌ನ ವಿನಿಮಯದಲ್ಲಿ ವಿನಿಮಯ ರಿಯಾಯಿತಿಯನ್ನು ಪಡೆಯಲು ಬಯಸಿದರೆ ಹಳೆಯ ಸ್ಮಾರ್ಟ್ಫೋನ್ ಮಾದರಿ ಮತ್ತು ಅದರ ಸ್ಟೇಟಸ್ ಅವಲಂಬಿಸಿ ಗರಿಷ್ಠ 18,950 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು.
Vivo V29e 5G ಸ್ಮಾರ್ಟ್ಫೋನ್ ವಿಶೇಷಣಗಳು ಹೀಗಿವೆ
ಈ Vivo V29e 5G ಸ್ಮಾರ್ಟ್ಫೋನ್ 6.78 ಇಂಚಿನ FHD+ AMOLED 3D ಕರ್ವ್ ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಹೊಂದಿದೆ. ಇದು Qualcomm Snapdragon 695 ಪ್ರೊಸೆಸರ್ ಜೊತೆಗೆ 8GB RAM ಮತ್ತು 256GB ವರೆಗೆ ಸ್ಟೋರೇಜ್ ಹೊಂದಿದೆ. ಫೋನ್ ಬಣ್ಣ ಬದಲಾಯಿಸುವ ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ ಮತ್ತು Android 13 ಆಧಾರಿತ ಸಾಫ್ಟ್‌ವೇರ್ ಸ್ಕಿನ್ ಲಭ್ಯವಿದೆ. Vivo V29e ಸ್ಮಾರ್ಟ್ಫೋನ್ ಹಿಂಭಾಗದ ಪ್ಯಾನೆಲ್ OIS ಜೊತೆಗೆ 64MP ಮುಖ್ಯ ಮತ್ತು 8MP ವೈಡ್ ಆಂಗಲ್ ಕ್ಯಾಮೆರಾದೊಂದಿಗೆ ಡ್ಯುಯಲ್ ಸೆಟಪ್ ಮತ್ತು ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ 5000mAh ಬ್ಯಾಟರಿಯು 44W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತದೆ. ಈ ಫೋನ್ ಅನ್ನು ಆರ್ಟಿಸ್ಟಿಕ್ ರೆಡ್ ಮತ್ತು ಆರ್ಟಿಸ್ಟಿಕ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile