50MP ಸೆಲ್ಫಿ ಕ್ಯಾಮೆರಾದ HONOR 200 5G ಬೆಲೆ ಕಡಿತ! ₹3000 ರೂಗಳ ಡಿಸ್ಕೌಂಟ್‌ನೊಂದಿಗೆ ಹೊಸ ಬೆಲೆ ಎಷ್ಟು?
ಭಾರತದಲ್ಲಿ HONOR 200 5G ಸ್ಮಾರ್ಟ್ಫೋನ್ ಬೆಲೆ ಈಗ ಕಡಿತವಾಗಿದೆ.
50MP ಸೆಲ್ಫಿ ಕ್ಯಾಮೆರಾ, ಉತ್ತಮ AMOLED ಡಿಸ್ಪ್ಲೇ ಮತ್ತು 5200mAh ಬ್ಯಾಟರಿ ಹೊಂದಿದೆ.
HONOR 200 5G ಸ್ಮಾರ್ಟ್ಫೋನ್ ₹3000 ರೂಗಳ ಉಚಿತ ಡಿಸ್ಕೌಂಟ್‌ನೊಂದಿಗೆ ಕೇವಲ ₹23,999 ರೂಗಳಿಗೆ ಲಭ್ಯ.
HONOR 200 5G Price Cut: ನಿಮಗೆ ಲೇಟೆಸ್ಟ್ ಫೀಚರ್ ಮತ್ತು ಪವರ್ಫುಲ್ ಸ್ಮಾರ್ಟ್ಫೋನ್ ಪ್ರತಿಯೊಂದು ವಲಯದಲ್ಲೂ ಉತ್ತಮವಾಗಿರುವ ಅದರಲ್ಲೂ ಫೋಟೋಗ್ರಾಫಿಗಾಗಿ ಹುಡುಕುತ್ತಿದ್ದರೆ ನಿಮಗೊಂದು ಅತ್ಯುತ್ತಮ ಅವಕಾಶವನ್ನು HONOR 200 5G ಸ್ಮಾರ್ಟ್ಫೋನ್ ನೀಡುತ್ತಿದೆ. ಯಾಕೆಂದರೆ ಈ ಬೆಲೆಯಲ್ಲಿ ಬೇರೆ ಯಾರು ನೀಡದ ಜಬರದಸ್ತ್ ಫೀಚರ್ ಮತ್ತು ವಿಶೇಷತೆಗಳನ್ನು ನೀಡುತ್ತಿರುವ ಈ ಸ್ಮಾರ್ಟ್ಫೋನ್ ಅಮೆಜಾನ್‌ನಲ್ಲಿ ಸದ್ದಿಲ್ಲದೇ ಮಾರಾಟವಾಗುತ್ತಿದೆ.
ಪ್ರಸ್ತುತ ನಿಮ್ಮನ್ನು ಈ ಫೋನ್ ಆಕರ್ಷಿಸಲು 50MP ಸೆಲ್ಫಿ ಕ್ಯಾಮೆರಾ, ಉತ್ತಮ AMOLED ಡಿಸ್ಪ್ಲೇ ಮತ್ತು 5200mAh ಬ್ಯಾಟರಿ ಸಾಕಾಗಿದೆ. ಈ ಹೊಸ HONOR 200 5G ಬೆಲೆ ಈಗ ಕಡಿತವಾಗಿದ್ದು ಜೊತೆಗೆ ₹3000 ರೂಗಳ ಉಚಿತ ಡಿಸ್ಕೌಂಟ್‌ನೊಂದಿಗೆ ಬರುತ್ತದೆ. ಹಾಗಾದ್ರೆ HONOR 200 5G ಸ್ಮಾರ್ಟ್ಫೋನ್ ಹೊಸ ಬೆಲೆಯೊಂದಿಗೆ ಫೀಚರ್ ಮತ್ತು ವಿಶೇಷತೆಗಳೇನು ತಿಳಿಯಿರಿ.
Also Read: Mera Ration 2.0: ಹೊಸ ವರ್ಷದಿಂದ ರೇಷನ್ ಕಾರ್ಡ್ ಬಳಕೆದಾರರಿಗೆ ಈ ಸಿಹಿಸುದ್ದಿ ಜಾರಿಯಾಗಲಿದೆ!
HONOR 200 5G Price Cut in India
ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹26,999 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹34,998 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು HONOR 200 5G ಸ್ಮಾರ್ಟ್ಫೋನ್ ಆರಂಭಿಕ ರೂಪಾಂತರದ ಮೇಲೆ ಮಾತ್ರ ಬರೋಬ್ಬರಿ ₹3000 ರೂಗಳ ಉಚಿತ ಡಿಸ್ಕೌಂಟ್‌ನೊಂದಿಗೆ ಕೇವಲ ₹23,999 ರೂಗಳಿಗೆ ಈ ಸ್ಮಾರ್ಟ್ಫೋನ್ ಖರೀದಿಸಬಹುದು ಎನ್ನುವುದನ್ನು ಮಾತ್ರ ಗಮನದಲ್ಲಿರಲಿ.
ಅಲ್ಲದೆ ನೀವು ಈ Honor 200 5G ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. HONOR 200 5G ಸ್ಮಾರ್ಟ್ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 25,350 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
HONOR 200 5G ಫೀಚರ್ ಮತ್ತು ವಿಶೇಷತೆಗಳೇನು?
ಈ ಲೇಟೆಸ್ಟ್ Honor 200 5G ಸ್ಮಾರ್ಟ್‌ಫೋನ್ 6.7 ಇಂಚಿನ ಕ್ವಾಡ್ ಕರ್ವ್ಡ್ AMOLED ಸ್ಕ್ರೀನ್ ಅನ್ನು ಹೊಂದಿದೆ. Honor 200 5G ಸ್ಮಾರ್ಟ್‌ಫೋನ್ ಪ್ರೀಮಿಯಂ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನ್ 50MP OIS + EIS ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ ಮತ್ತೊಂದು 50MP OIS ಟೆಲಿಫೋಟೋ ಮತ್ತು 12MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ ಮುಂಭಾಗದಲ್ಲಿ 50MP ಪೋಟ್ರೇಟ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಫೋನ್‌ನಲ್ಲಿರುವ ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 4K ವೀಡಿಯೊಗಳನ್ನು ಸಹ ಶೂಟ್ ಮಾಡಬಹುದು.
Honor 200 5G ಸ್ಮಾರ್ಟ್‌ಫೋನ್ Snapdragon 7 Gen 3 ಚಿಪ್‌ಸೆಟ್ 8GB RAM ಮತ್ತು 256GB ಸ್ಟೋರೇಜ್ ಅನ್ನು ಪ್ಯಾಕ್ ಮಾಡುತ್ತದೆ. ಈ ಫೋನ್ AI ಚಾಲಿತ ಮ್ಯಾಜಿಕ್ಓಎಸ್ 8.0 ಸಾಫ್ಟ್‌ವೇರ್‌ನೊಂದಿಗೆ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ Honor 200 5G ಸ್ಮಾರ್ಟ್‌ಫೋನ್ 100W ಫಾಸ್ಟ್ ಚಾರ್ಜ್ ಬೆಂಬಲದೊಂದಿಗೆ 5200mAh ಮೂಲಕ 2Gen ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile