50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ ಈ Samsung ಫೋನ್ ಕೇವಲ ₹6,799 ರೂಗಳಿಗೆ ಲಭ್ಯ!

Updated on 21-Nov-2024
HIGHLIGHTS

ಇದರಲ್ಲಿ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಈ ಸ್ಯಾಮ್‌ಸಂಗ್‌ ಫೋನ್ ಹೊಂದಿದೆ.

Samsung Galaxy F05 ಫೋನ್ ಕೇವಲ ₹6,799ರೂಗಳಿಗೆ ಖರೀದಿಸುವ ಬಂಪರ್ ಅವಕಾಶ

ಇದರಲ್ಲಿ 4800 ರೂಗಳವರೆಗಿನ ವಿನಿಯಮ ಆಫರ್ (Exchange Offer) ಸಹ ನೀಡುತ್ತಿರುವುದು ವಿಶೇಷವಾಗಿದೆ.

ಜನಪ್ರಿಯ ಫ್ಲಿಪ್‌ಕಾರ್ಟ್‌ (Flipkart) ಈಗ ಆಕರ್ಷಕ ಡಿಸ್ಕೌಂಟ್‌ನೊಂದಿಗೆ ಲೇಟೆಸ್ಟ್ ಸ್ಯಾಮ್‌ಸಂಗ್‌ ಫೋನ್ ಅನ್ನು ನೀಡುತ್ತದೆ. ಇಂದು Samsung Galaxy F05 ಸ್ಮಾರ್ಟ್ಫೋನ್ ಮೇಲೆ ಸಖತ್ ರಿಯಾಯಿತಿ ನೀಡುತ್ತಿದ್ದು ಎಂಟ್ರಿ ಲೆವೆಲ್‌ ವಿಭಾಗದಲ್ಲಿ ಹೊಸ ಫೋನ್‌ ಖರೀದಿಸುವವರ ಗ್ರಾಹಕರು ಹಬ್ಬೇರಿಸುವಂತೆ ಮಾಡಿದೆ. ಯಾಕೆಂದರೆ ಇದರಲ್ಲಿ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಈ ಸ್ಯಾಮ್‌ಸಂಗ್‌ ಫೋನ್ ಹೊಂದಿದೆ. ಈ Samsung Galaxy F05 ಫೋನ್ ಕೇವಲ ₹6,799ರೂಗಳಿಗೆ ಖರೀದಿಸುವ ಬಂಪರ್ ಅವಕಾಶವನ್ನು ನೀಡುತ್ತಿದೆ. ಅಲ್ಲದೆ ಇದರಲ್ಲಿ 4800 ರೂಗಳವರೆಗಿನ ವಿನಿಯಮ ಆಫರ್ (Exchange Offer) ಸಹ ನೀಡುತ್ತಿರುವುದು ವಿಶೇಷವಾಗಿದೆ.

Also Read:

Samsung Galaxy F05 ಆಫರ್ ಬೆಲೆ ಮತ್ತು ಲಭ್ಯತೆ

Samsung Galaxy F05 ಕೇವಲ ಒಂದೇ ಒಂದು ಬಣ್ಣದಲ್ಲಿ Twilight Blue ಎಂಬ ಆಕರ್ಷಕ ಬಣ್ಣದಲ್ಲಿ ಖರೀದಿಸಬಹುದು. ಅಲ್ಲದೆ ಈ Samsung Galaxy F05 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಒಂದೇ ಒಂದು ರೂಪಾಂತರದಲ್ಲಿ ಲಭ್ಯವಾಗಲಿದ್ದು ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ರೂಪಾಂತರವನ್ನು ಕೇವಲ 7,999 ರೂಗಳಿಗೆ ಬಿಡುಗಡೆಗೊಳಿಸಿದೆ.

ಆದರೆ ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಕೇವಲ 6,799 ರೂಗಳಿಗೆ ಖರೀದಿಸಬಹುದು. ಅಲ್ಲದೆ ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯಲ್ಲಿ (Exchange Offer) ಮೇಲೆ ಪಡೆಯಬಹುದು. ನಿಮ್ಮ ಹಳೆಯ ಸ್ಮಾರ್ಟ್ ಫೋನ್ ನೀಡಿ ಸುಮಾರು 4800 ರೂಗಳವರೆಗಿನ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

Samsung Galaxy F05 ಫೀಚರ್ಗಳೇನು?

ಈ ಬೆಸ್ಟ್ ಬಜೆಟ್ Samsung Galaxy F05 ಸ್ಮಾರ್ಟ್ಫೋನ್ HD+ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಇದು MediaTek Helio G85 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 4GB RAM ಅನ್ನು RAM ಪ್ಲಸ್ ವೈಶಿಷ್ಟ್ಯವನ್ನು ಬಳಸಿಕೊಂಡು 8GB ವರೆಗೆ ವಿಸ್ತರಿಸಬಹುದು. ಇದು ಉಚಿತ ಸ್ಟೋರೇಜ್ ಅನ್ನು ವರ್ಚುವಲ್ RAM ಆಗಿ ಪರಿವರ್ತಿಸುತ್ತದೆ. ಸ್ಮಾರ್ಟ್ಫೋನ್ 64GB ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ. ಇದನ್ನು ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ವಿಸ್ತರಿಸಬಹುದು.

ಈ ಸ್ಮಾರ್ಟ್‌ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು, 2MP ಡೆಪ್ತ್ ಸೆನ್ಸಾರ್‌ನಿಂದ ಬೆಂಬಲಿತವಾಗಿದೆ. ಮುಂಭಾಗದಲ್ಲಿ ಇದು ಸೆಲ್ಫಿಗಾಗಿ 8MP ಕ್ಯಾಮೆರಾವನ್ನು ಹೊಂದಿದೆ. ಇದು 25W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಡ್ರಾಯ್ಡ್ 14 ನಲ್ಲಿ ಚಾಲನೆಯಲ್ಲಿರುವ Galaxy F05 ಎರಡು ಪ್ರಮುಖ ಆಪರೇಟಿಂಗ್ ಸಿಸ್ಟಮ್ ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಸ್ವೀಕರಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :