5000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ ಈ 5G ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಲಭ್ಯ!
Infinix Hot 20 5G ಫೋನ್ ಈಗ ಹೆಚ್ಚಿನ ರಿಯಾಯಿತಿಯೊಂದಿಗೆ ಲಭ್ಯವಿದೆ.
ಇದೀಗ ಗ್ರಾಹಕರು Infinix Hot 20 5G ಅನ್ನು ಉತ್ತಮ ಬೆಲೆಗೆ ಪಡೆದುಕೊಳ್ಳಬಹುದು.
ಇನ್ನು ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಅಲ್ ಲೆನ್ಸ್‌ನೊಂದಿಗೆ 50MP ಕ್ಯಾಮೆರಾವನ್ನು ನೀಡಲಾಗಿದೆ.
ಬಳಕೆದಾರರು ಈಗ ದೇಶದಾದ್ಯಂತ ಅನೇಕ ದೊಡ್ಡ ಮತ್ತು ಸಣ್ಣ ನಗರಗಳಲ್ಲಿ 5G ಸಂಪರ್ಕದಿಂದ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಮತ್ತು ಟೆಲಿಕಾಂ ಕಂಪನಿಗಳು ಅನ್‌ಲಿಮಿಟೆಡ್ 5G ಡೇಟಾವನ್ನು ನೀಡುತ್ತಿವೆ. ಆದರೆ ಇದರ ಪ್ರಯೋಜನವನ್ನು ಪಡೆಯಲು 5G ಬೆಂಬಲದೊಂದಿಗೆ ಸ್ಮಾರ್ಟ್ಫೋನ್ ಕೂಡ ಅಗತ್ಯವಿದೆ. ಈ ಹಿಂದೆ 5G ಸಂಪರ್ಕವು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇಂದು ನೀವು ಕಡಿಮೆ ಬೆಲೆಯಲ್ಲಿ 5G ಫೋನ್‌ಗಳನ್ನು ಖರೀದಿಸಬಹುದು. Infinix Hot 20 5G ಫೋನ್ ಈಗ ಹೆಚ್ಚಿನ ರಿಯಾಯಿತಿಯೊಂದಿಗೆ ಲಭ್ಯವಿದೆ.
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ
ಹಲವಾರು ಸ್ಮಾರ್ಟ್‌ಫೋನ್ ಮಾದರಿಗಳು ಈಗಾಗಲೇ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದೀಗ ಗ್ರಾಹಕರು Infinix Hot 20 5G ಅನ್ನು ಉತ್ತಮ ಬೆಲೆಗೆ ಪಡೆದುಕೊಳ್ಳಬಹುದು. ಈ ಫೋನ್ ರಿಯಾಯಿತಿಯ ನಂತರ 10,000 ಕ್ಕಿಂತ ಕಡಿಮೆ ಕಡಿಮೆ ಬೆಲೆಗೆ ಲಭ್ಯವಿದೆ. ಫ್ಲಾಟ್ ರಿಯಾಯಿತಿಯ ಜೊತೆಗೆ ಈ ಫೋನ್ ಹೆಚ್ಚುವರಿ ಬ್ಯಾಂಕ್ ಆಫರ್ಗಳ ಪ್ರಯೋಜನವನ್ನು ಪಡೆಯುತ್ತಿದೆ ಮತ್ತು ವಿನಿಮಯ ರಿಯಾಯಿತಿಯಿಂದ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಈ ಫೋನ್ ಅನ್ನು ನೀವು ಖರೀದಿಸಬಹುದು.
Infinix ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಲಭ್ಯ!
ಭಾರತದಲ್ಲಿ 4GB RAM ಮತ್ತು 64GB ಸ್ಟೋರೇಜ್ Infinix Hot 20 5G ಬೆಲೆ 17,999 ರೂ ಆಗಿದೆ. ಇದೀಗ ಈ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ 11,499 ಕ್ಕೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಪಾವತಿ ಮತ್ತು EMI ವಹಿವಾಟುಗಳೆರಡಕ್ಕೂ SBI ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ ಹೆಚ್ಚುವರಿ 10% ರಿಯಾಯಿತಿ ದೊರೆಯುತ್ತದೆ. ಪಾವತಿಸಲು ತಮ್ಮ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸುವವರು 5% ಕ್ಯಾಶ್‌ಬ್ಯಾಕ್ ಅನ್ನು ಪಡೆಯುತ್ತಾರೆ.
ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿ ಹೊಸ 5G ಫೋನ್ ಖರೀದಿಸಲು ಬಯಸಿದರೆ ನೀವು 10,950 ರೂವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಆದರೆ ಹಳೆಯ ಫೋನ್‌ನ ಮಾದರಿ ಮತ್ತು ಸ್ಥಿತಿಯ ಮೌಲ್ಯದ ಆಧಾರದ ಮೇಲೆ ಈ ಸ್ಮಾರ್ಟ್ಫೋನ್ ಅನ್ನು ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಪೋನ್ ಬ್ಲಾಸ್ಟರ್ ಗ್ರೀನ್, ರೇಸಿಂಗ್ ಬ್ಲ್ಯಾಕ್ ಮತ್ತು ಸ್ಪೇಸ್ ಬ್ಲೂ ಕಲರ್‌ಗಳ ಆಯ್ಕೆಯಲ್ಲಿ ಲಭ್ಯವಿದೆ.
Infinix Hot 20 5G ಫೀಚರ್‌ಗಳು:
Infinix ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ HD+IPS ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಪಾಂಡ ಗ್ಲಾಸ್ ರಕ್ಷಣೆಯೊಂದಿಗೆ 120Hz ರಿಫ್ರೆಶ್ ದರವನ್ನು ಒಳಗೊಂಡಿದೆ. ಉತ್ತಮ ಕಾರ್ಯಕ್ಷಮತೆಗಾಗಿ MediaTek ಡೈಮೆನ್ಸಿಟಿ 810 ಪ್ರೊಸೆಸರ್ ಜೊತೆಗೆ 6GB RAM ಅನ್ನು ಈ ಫೋನ್‌ಗೆ ನೀಡಲಾಗಿದ್ದು 128GB ವರೆಗಿನ ಸ್ಟೋರೇಜ್ ಅನ್ನು ಹೊಂದಿದೆ. ಅಲ್ಲದೆ ಈ ಫೋನ್‌ನಲ್ಲಿ ಮೈಕ್ರೊ SD ಕಾರ್ಡ್ ಸ್ಲಾಟ್‌ನೊಂದಿಗೆ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದಾಗಿದೆ.
ಇನ್ನು ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಅಲ್ ಲೆನ್ಸ್‌ನೊಂದಿಗೆ 50MP ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ಕರೆಗಳನ್ನು ಮಾಡಲು ಈ ಫೋನ್ ನಲ್ಲಿ 8MP ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ದೀರ್ಘ ಬಳಕೆಗಾಗಿ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile