ಭಾರತದಲ್ಲಿ ಕೇವಲ 7000 ರೂಗಳೊಳಗಿನ 5 ಅತುತ್ತಮವಾದ ಸ್ಮಾರ್ಟ್ಫೋಗಳು – 2018

Updated on 28-Dec-2018
HIGHLIGHTS

ಹೊಸ ವೈಶಿಷ್ಟ್ಯಗಳೊಂದಿಗೆ ಈ 7000 ರೂಗಳ ಅಡಿಯಲ್ಲಿ ಎಂಟ್ರಿ ಲೆವೆಲ್ ಮಟ್ಟದ ಫೋನ್ಗಳನ್ನು ಖರೀದಿಸಬಹುದು.

ಭಾರತದಲ್ಲಿ ಕೇವಲ 7000 ರೂಗಳೊಳಗಿನ 5 ಅತುತ್ತಮವಾದ ಸ್ಮಾರ್ಟ್ಫೋಗಳನ್ನು ಇಲ್ಲಿ ನೋಡೋಣ. ಈ ಬಜೆಟ್ ಫೋನ್ಗಳು ಇನ್ನು ಮುಂದೆ ತಾವು ಬಳಸಿಕೊಳ್ಳಲು ಹೆಚ್ಚು ಫೀಚರ್ಗಳೊಂದಿಗೆ ರಾಜಿಯಾಗಿವೆ. ಅಂದ್ರೆ ನಿಮಗೆ ಕೇವಲ 7000 ರೂಪಾಯಿಗಳಲ್ಲಿ ಒಂದು ರೀತಿಯಲ್ಲಿ ನಿಮ್ಮ ಕೈಗೆಟುಕುವ ಬಜೆಟ್ ಇದ್ದರೆ ಸಾಕು ಈ ಬೆಸ್ಟ್ ಸ್ಮಾರ್ಟ್ಫೋನ್ಗಳಿಂದ ಆಯ್ಕೆ ಮಾಡಬಹುದು. 

ಇದರ 18: 9 ಡಿಸ್ಪ್ಲೇಗಳು, ಮೆಟಲ್ ಬಾಡಿಗಳು ಮತ್ತು ಹೆಚ್ಚಿನ ಹೊಸ ವೈಶಿಷ್ಟ್ಯಗಳೊಂದಿಗೆ ಈ 7000 ರೂಗಳ ಅಡಿಯಲ್ಲಿ ಎಂಟ್ರಿ ಲೆವೆಲ್ ಮಟ್ಟದ ಫೋನ್ಗಳನ್ನು ಖರೀದಿಸಬಹುದು. 7000 ರೂಗಳೊಳಗಿನ ಯಾವ ಬೆಸ್ಟ್ ತಿಳಿಯಲು ವಿಡಿಯೋವನ್ನು ಕೊನೆ ತನಕ ನೋಡಿ. ಏಕೆಂದರೆ ಇಲ್ಲಿ ನಾನು ನಿಮಗೆ 5-4-3-2-1 ಇಳಿಮುಖವಾಗಿ ಈ ಫೋನ್ಗಳನ್ನು ಪರಿಚಯಿಸುತ್ತೇನೆ.

ಐದನೇ ಸ್ಥಾನದಲ್ಲಿದೆ Nokia 1. 
ಇದು ಆಂಡ್ರಾಯ್ಡ್ ಓರಿಯೊ ಗೋ ಎಡಿಷನ್ನೊಂದಿಗೆ ಎಂಟ್ರಿ ಲೆವೆಲ್ ಹಾರ್ಡ್ವೇರ್ ಹೊಂದಿದ್ದರೂ ಸಹ ಸಾಕಷ್ಟು ಮೃದುವಾಗಿ ಕಾರ್ಯನಿರ್ವಹಿಸುತ್ತದೆ. ಇದರ ವಿನ್ಯಾಸ ಮತ್ತು ನಿರ್ಮಾಣ ಚೆನ್ನಾಗಿ ಕಾಣುತ್ತದೆ. ಮತ್ತು ಆಕರ್ಶಕವಾಗಿ ಕಾಣುವ ಸ್ವ್ಯಾಪ್ ಮಾಡಬವುದಾದ  ಪ್ಲಾಸ್ಟಿಕ್ ಬ್ಯಾಕ್ ಕವರ್ಗಳೊಂದಿಗೆ ಕೆಲವು ಹಂತದ ಗ್ರಾಹಕೀಕರಣವನ್ನು ಗ್ರಹಿಸುವ ಸಾಮರ್ಥ್ಯದ ಫೋನನ್ನು HMD ಗ್ಲೋಬಲ್ ನೀಡಿದೆ.

ನಾಲ್ಕನೆಯ ಸ್ಥಾನದಲ್ಲಿದೆ 10.or E
ಈ ಫೋನಲ್ಲಿರುವ ಫೀಚರ್ಗಳನ್ನು ನೋಡಿದರೆ ನಿಜಕ್ಕೂ ಇದು ಈ ಬಜೆಟ್ ಸೆಗ್ಮೆಂಟಲ್ಲಿ ಸಾಧ್ಯವೇ ಎನ್ನಿಸುತ್ತದೆ ಏಕೆಂದರೆ ಇದರ 5.5 Full HD ಡಿಸ್ಪ್ಲೇ 1920x1080p | 2.5D Corning Gorilla Glass 3 ಅನ್ನು ಹೊಂದಿದೆ. ಜೊತೆಗೆ ನಿಮಗೆ ಇದು 3930mAH ಲಿಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿದೆ. ಮತ್ತು 13MP ಬ್ಯಾಕ್ ಕ್ಯಾಮೆರಾ ಆಟೋ ಫೋಕಸ್ ಜೋತೆಯಲ್ಲಿ ಮತ್ತು ಸೆಲ್ಫಿಗಾಗಿ 5MP ಹೊಂದಿದೆ. 

ಮೂರನೇಯ ಸ್ಥಾನದಲ್ಲಿದೆ Honor 7S. 
ಅದರ ಅದ್ಭುತವಾದ 5.45 ಇಂಚಿನ FullView ಡಿಸ್ಪ್ಲೇ ಮತ್ತು ಸ್ಪಷ್ಟವಾದ ಪರಿಮಾಣದೊಂದಿಗೆ ನಿಮ್ಮ ಅನುಭವವನ್ನು ಹೆಚ್ಚಿಸಲು 13MP ಹಿಂಭಾಗದ ಕ್ಯಾಮರಾ ನಿಮ್ಮ ಸ್ಮರಣೀಯ ಅತ್ಯುತ್ತಮ ಸಮಯದಲ್ಲಿ ಕ್ಷಣಗಳನ್ನು ಸೆರೆಹಿಡಿಯಲು ನಿಮಗೆ ಅನುಮತಿಸುತ್ತದೆ. ನಿಮ್ಮ ಸೆಲ್ಫಿ ಅಥವಾ ವಿಡಿಯೋ ಕರೆಗಳು ಕೂಡಾ ಸ್ಪಷ್ಟವಾಗಿ ಕಾಣುತ್ತದೆ. ಏಕೆಂದರೆ ಅದು LED ಸೆಲ್ಫ್ ಲೈಟ್ನೊಂದಿಗೆ ಆಕರ್ಷಕ ಶಾಟ್ಗಳನ್ನು ನೀಡುತ್ತದೆ.

ಎರಡನೇಯ ಸ್ಥಾನದಲ್ಲಿದೆ Asus Zenfone Lite L1. 
ಇದು 5.45 ಹೈ ಡೆಫಿನಿಷನ್, ಫುಲ್ ವ್ಯೂ ಡಿಸ್ಪ್ಲೇಯೊಂದಿಗೆ ಈ ಸ್ಮಾರ್ಟ್ಫೋನ್ 1440x720p ರೆಸೊಲ್ಯೂಶನ್ನಲ್ಲಿ ನಿಮ್ಮ ಎಲ್ಲ ದೃಶ್ಯಗಳನ್ನು ಪ್ರದರ್ಶಿಸುತ್ತದೆ. ಆದ್ದರಿಂದ ಅವು ತೀಕ್ಷ್ಣವಾದ ಮತ್ತು ಸ್ಪಷ್ಟವಾದ ಶಾಟ್ಗಳನ್ನು ಪಡೆಯಬವುದು. ಈ ಸ್ಮಾರ್ಟ್ಫೋನ್ನ 3000mAh ಬ್ಯಾಟರಿ 4G ಸ್ಟ್ಯಾಂಡ್ಬೈಗೆ ಒಂದು ಸಂಪೂರ್ಣ ಚಾರ್ಜ್ ಮಾಡಿದ ನಂತರ 28 ದಿನಗಳ ವರೆಗೆ ಇರುತ್ತದೆ. ಇದು ನಿಮಗೆ 4 ದಿನಗಳ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು Wi-Fi ಬಳಸಿಕೊಂಡು 17 ಗಂಟೆಗಳ ವೆಬ್ ಬ್ರೌಸಿಂಗ್ ವರೆಗೆ ಬಸಲು ಬ್ಯಾಟರಿ ಅನುಮತಿಸುತ್ತದೆ.

ಮೊದಲ ಸ್ಥಾನದಲ್ಲಿದೆ Xiaomi Redmi 6A. 
Xiaomi Redmi 6A ಪ್ರಬಲ ವೈಶಿಷ್ಟ್ಯಗಳನ್ನು ಬಹಳಷ್ಟು ಲೋಡ್ ಹೊಂದಿರುವ ಒಂದು ಉತ್ತಮ ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ ಆಗಿದೆ. ಬಹು ಕಾರ್ಯಗಳನ್ನು ನಿಭಾಯಿಸುವ ದೃಷ್ಟಿಯಿಂದ ಕಾರ್ಯಕ್ಷಮತೆ ಉತ್ತಮವಾಗಿದೆ. ಅಲ್ಲದೆ ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮರಾಗಳು ಸಾಕಗುವಷ್ಟಿದೆ. ಜೊತೆಗೆ ಒಂದು ಉತ್ತಮವಾದ ಬ್ಯಾಟರಿ ಬ್ಯಾಕ್ಅಪ್ ಸಹ ಇದೆ. ಒಟ್ಟಾರೆಯಾಗಿ ಕೇವಲ 7000 ರೂಗಳೊಳಗಿನ ಒಂದು ಪರಿಪೂರ್ಣ ಆಯ್ಕೆ ಈ Xiaomi Redmi 6A ಸ್ಮಾರ್ಟ್ಫೋನ್ ಆಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :