48MP ಕ್ಯಾಮೆರಾ ಮತ್ತು 4000mAh ಬ್ಯಾಟರಿಯ OPPO F11 Pro ಸ್ಮಾರ್ಟ್ಫೋನಿನ ಮೊದಲ ಸೇಲ್ ಶುರು.

48MP ಕ್ಯಾಮೆರಾ ಮತ್ತು 4000mAh ಬ್ಯಾಟರಿಯ OPPO F11 Pro ಸ್ಮಾರ್ಟ್ಫೋನಿನ ಮೊದಲ ಸೇಲ್ ಶುರು.
HIGHLIGHTS

6GB-64GB ಯ ರೂಪಾಂತರದ Oppo F11 Pro ಅಮೆಝೋನಲ್ಲಿ ಕೇವಲ 24,600 ರೂಗಳಲ್ಲಿ ಪಡೆಯಬವುದು.

ಭಾರತದಲ್ಲಿ ಒಪ್ಪೋ ಕಂಪನಿ ಇತ್ತೀಚೆಗೆ ಮುಂಬೈನಲ್ಲಿ ನಡೆದ ಒಂದು ಸಮಾರಂಭದಲ್ಲಿ Oppo F11 Pro ಚೊಚ್ಚಲ ಪ್ರವೇಶ ಮಾಡಿ ಇದೀಗ ಭಾರತದಿಂದ ಪ್ರಾರಂಭವಾಗುವ ಈ ಸ್ಮಾರ್ಟ್ಫೋನ್ ತನ್ನ ಮೊದಲ ಸೇಲ್ ಇಂದಿನಿಂದ ನಡೆಸುತ್ತಿದೆ. ಈ ಸೇಲ್ ಈಗಾಗಲೇ ಫ್ಲಿಪ್ಕಾರ್ಟ್ನಲ್ಲಿ  ಶುರುವಾಗಿದ್ದು ಓಪನ್ ಸೇಲ್ ನಡೆಸುತ್ತಿದೆ. ಕಂಪನಿಯು ಹೊಸ 'Pro' ಆವೃತ್ತಿಯೊಂದಿಗೆ Oppo F11 ಸ್ಮಾರ್ಟ್ಫೋನನ್ನು ಕೂಡಾ ಬಿಡುಗಡೆ ಮಾಡಿತು. ಈ ಸ್ಮಾರ್ಟ್ಫೋನ್ ಮೋಟೊರೈಸ್ಡ್ ಕ್ಯಾಮೆರಾ ಮೆಕ್ಯಾನಿಸಮ್ ವ್ಯವಸ್ಥೆ ಮತ್ತು 48MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್ ಅನ್ನು ನೀಡುತ್ತದೆ. ಈ Oppo F11 Pro ನ್ಯಾನೋ ಪ್ರಿಂಟ್ ಹೊಂದಿರುವ 3D ಗ್ರೇಡಿಯಂಟನ್ನು ಹೊಂದಿದೆ. ಸ್ಮಾರ್ಟ್ಫೋನಿನ ಹೆಚ್ಚಿನ ಮಾಹಿತಿ ಅಥವಾ ಖರೀದಿಸಲು ಕ್ಲಿಕ್ ಮಾಡಿ.  

Oppo F11 Pro ಸ್ಮಾರ್ಟ್ಫೋನ್ 6GB ಯ RAM ಮತ್ತು 64GB ಯ ಸ್ಟೋರೇಜ್ ರೂಪಾಂತರಕ್ಕಾಗಿ Oppo F11 Pro ಭಾರತದಲ್ಲಿ ಕೇವಲ 24,600 (Without Offer) ರೂಗಳಿಂದ ಶುರುವಾಗುತ್ತದಷ್ಟೇ ಈ ಹ್ಯಾಂಡ್ಸೆಟ್ ಖರೀದಿಸಲು ಪರಿಗಣಿಸುವವರು ನೇರವಾಗಿ ಅಮೆಜಾನ್ ಇಂಡಿಯಾ ಆನ್ಲೈನ್ ವೆಬ್ಸೈಟ್ಗೆ ಹೋಗಬಹುದು. ಅಲ್ಲದೆ ಈ ಸ್ಮಾರ್ಟ್ಫೋನ್ Paytm, Snapdeal, Reliance Digital, Croma ಮತ್ತು ಎಲ್ಲ Oppo ಸ್ಟೋರ್ಗಳ ಮೂಲಕ ಖರೀದಿಸಲು ಸಹ ಲಭ್ಯವಾಗುತ್ತದೆ. ಇದರ ಅರೋರಾ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಸೇರಿದಂತೆ ಎರಡು ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್ಫೋನ್ ಲಭ್ಯವಿದೆ. 

Oppo F11 Pro ದೊಡ್ಡ 6.5 ಇಂಚಿನ FHD LTPS LCD ಡಿಸ್ಪ್ಲೇನೊಂದಿಗೆ 90.9 ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 19.9: 9 ಆಕಾರ ಅನುಪಾತದೊಂದಿಗೆ ಬರುತ್ತದೆ. ಹುಡ್ ಅಡಿಯಲ್ಲಿ 12GHM ಮೀಡಿಯಾ ಟೆಕ್ ಹೆಲಿಯೊ P70 ಆಕ್ಟಾ-ಕೋರ್ ಚಿಪ್ಸೆಟ್ 2GHz ನಲ್ಲಿ ದೊರೆಯುತ್ತದೆ. ಚಿಪ್ಸೆಟ್ಗೆ ARM ಮಾಲಿ- G72 MP3 ಜಿಪಿಯು ಜೊತೆಗೂಡಿರುತ್ತದೆ. ಮೈಕ್ರೊ ಎಸ್ಡಿ ಕಾರ್ಡ್ ಬಳಸಿ ಸ್ಟೋರೇಜ್ 512GB ವರೆಗೆ ವಿಸ್ತರಿಸುವ ಆಯ್ಕೆ ನೀಡಲಾಗಿದೆ.

ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 9.0 ಪೈ ಜೊತೆಗೆ ಕಲರ್ OS6 ನೊಂದಿಗೆ ಪ್ರೀ ಲೋಡೆಡ್ ಆಗಿರುತ್ತದೆ. ಇದರ ಸುರಕ್ಷತೆಗಾಗಿ ಫೇಸ್ ಅನ್ಲಾಕ್ನ ಹಿಂಭಾಗದ ಆರೋಹಿತವಾದ ಫಿಂಗರ್ಪ್ರಿಂಟ್ ಸಂವೇದಕವನ್ನೂ ಇದು ನೀಡುತ್ತದೆ. ಇದು VOOC ಫ್ಲ್ಯಾಶ್ ಚಾರ್ಜ್ 3.0 ವೇಗದ ಚಾರ್ಜಿಂಗ್ನೊಂದಿಗೆ 4000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಡ್ಯುಯಲ್-ಸಿಮ್ ಸಾಧನವು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದೆ. 

Oppo F11 Pro ಸ್ಮಾರ್ಟ್ಫೋನ್ 48MP ಮೆಗಾಪಿಕ್ಸೆಲ್ ಪ್ರೈಮರಿ ಬ್ಯಾಕ್ ಕ್ಯಾಮರಾವನ್ನು f / 1.79 ಅಪರ್ಚರ್ ಮತ್ತು ಒಂದು f / 2.4 ಅಪೆರ್ಚರ್ ಸೇಕೆಂಡರಿ 5MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಈ ಸೆಟಪ್ LED ಫ್ಲ್ಯಾಶ್ನೊಂದಿಗೆ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ  ಮುಂಭಾಗದಲ್ಲಿ f / 2.0 ಅಪರ್ಚರ್ನೊಂದಿಗೆ 16MP ಮೆಗಾಪಿಕ್ಸೆಲ್ ಕ್ಯಾಮರಾ ಇದೆ. ಸಂಪರ್ಕದ ಆಯ್ಕೆಗಳಲ್ಲಿ 3.5mm ಆಡಿಯೋ ಜ್ಯಾಕ್, ಡ್ಯುಯಲ್ 4G ವೋಲ್ಟೆ, ಬ್ಲೂಟೂತ್ 5.0, ವೈ-ಫೈ, ಜಿಪಿಎಸ್ + ಗ್ಲೋನಾಸ್ ಮತ್ತು ಮೈಕ್ರೋ USB ಸ್ಟಿಫ್ ಬೆಂಬಲವನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo