ನಿಮಗೊತ್ತಾ ಭಾರತದಲ್ಲೇ 35 ಕೋಟಿ ಜನರು ಈ ಫೋನ್‌ ಬಳಸತ್ತಿದ್ದಾರೆ! ಅದು ಯಾವ ಫೋನ್ ಅಂತೀರಾ?

Updated on 01-Apr-2023
HIGHLIGHTS

ಪ್ರಪಂಚದಾದ್ಯಂತ ಡಂಬ್‌ಫೋನ್ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ.

ಭಾರತವು 350 ಮಿಲಿಯನ್ ಡಂಬ್‌ಫೋನ್ ಬಳಕೆದಾರರನ್ನು ಹೊಂದಿದೆ.

ಬ್ರಿಟನ್‌ನಲ್ಲಿ ಪ್ರತಿ 10 ಬಳಕೆದಾರರಲ್ಲಿ ಒಬ್ಬರು ಡಂಬ್‌ಫೋನ್ ಅನ್ನು ಹೊಂದಿದ್ದಾರೆ.

ಇಂದು ಸ್ಮಾರ್ಟ್‌ಫೋನ್‌ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಹತ್ತಾರು ಕೆಲಸಗಳನ್ನು ಮಾಡಲು ನಾವು ಸ್ಮಾರ್ಟ್‌ಫೋನ್‌ಗಳನ್ನು ಅವಲಂಬಿಸಿದ್ದೇವೆ. ಈ ಕಾರಣದಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಸರಿಸುಮಾರು 17 ಕೋಟಿ ಮೊಬೈಲ್ ಫೋನ್‌ಗಳು ಮಾರಾಟವಾಗುತ್ತವೆ. ದೇಶದಲ್ಲಿ 120 ಕೋಟಿಗೂ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ. ಆದರೆ ಸ್ಮಾರ್ಟ್ಫೋನ್ ಈಗ ಸಮಸ್ಯೆಗಳ ಪ್ರಮುಖ ಮೂಲವಾಗಿದೆ. ಈ ಕಾರಣಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಡಂಬ್‌ಫೋನ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈಗ ನಿಮಗೆ ಡಂಬ್‌ಫೋನ್ ಎಂದರೇನು ಮತ್ತು ಅದು ಸ್ಮಾರ್ಟ್‌ಫೋನ್‌ಗಿಂತ ಹೇಗೆ ಭಿನ್ನವಾಗಿದೆ ಎನ್ನುವುದರ ಕುರಿತು ಆಶ್ಚರ್ಯವಾಗಿರಬೇಕು. ಜನರು ಏಕೆ ಸ್ಮಾರ್ಟ್‌ಫೋನ್‌ಗಳ ಬದಲಿಗೆ ಡಂಬ್‌ಫೋನ್‌ಗಳತ್ತ ಸಾಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಡಂಬ್‌ಫೋನ್‌ಗಳು ಯಾವುವು?

ಇಂಟರ್ನೆಟ್ ಅಥವಾ ಇತರೆ ಯಾವುದೇ ಫೀಚರ್‌ಗಳನ್ನು ಡಂಬ್‌ಫೋನ್‌ ಹೊಂದಿಲ್ಲ. ಇದು ಯಾವುದೇ ಅಪ್ಲಿಕೇಶನ್‌ಗಳನ್ನು ಸಹ ಹೊಂದಿಲ್ಲ. ಈ ಫೋನ್ ಸಹಾಯದಿಂದ ಕರೆಗಳನ್ನು ಮಾತ್ರ ಮಾಡಬಹುದು. ಮೆಸೇಜ್ ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಫೋಟೋಗ್ರಫಿಗಾಗಿ ಬೇಸಿಕ್ ಕ್ಯಾಮೆರಾ ಲಭ್ಯವಿದೆ ಮತ್ತು ಮನರಂಜನೆಗಾಗಿ FM ರೇಡಿಯೊದಂತಹ ಫೀಚರ್‌ ಲಭ್ಯವಿದೆ. ಆಂಡ್ರಾಯ್ಡ್ ಅನ್ನು ಅಭಿವೃದ್ಧಿಪಡಿಸುವ ಮೊದಲು ಈ ಫೋನ್‌ಗಳನ್ನು ಬಳಸುತ್ತಿದ್ದರು. ಡಂಬ್‌ಫೋನ್ ಈಗ ಪುನರಾಗಮನಕ್ಕೆ ಸಿದ್ಧವಾಗಿದೆ.

ಭಾರತದಲ್ಲಿ 350 ಮಿಲಿಯನ್ ಜನರು ಇದನ್ನು ಬಳಸುತ್ತಾರೆ

ವಾಸ್ತವವಾಗಿ 2018 ಮತ್ತು 2021 ರ ನಡುವೆ Google ನಲ್ಲಿ 89 ಪ್ರತಿಶತ ಹೆಚ್ಚು ಡಂಬ್‌ಫೋನ್ ಹುಡುಕಾಟಗಳನ್ನು ಮಾಡಲಾಗಿದೆ. ಬ್ರಿಟನ್‌ನಲ್ಲಿ ಪ್ರತಿ 10 ಜನರಲ್ಲಿ ಒಬ್ಬರು ಡಂಬ್‌ಫೋನ್‌ಗಳನ್ನು ಬಳಸುತ್ತಾರೆ ಎಂದು ಒಂದು ವರದಿ ಹೇಳುತ್ತದೆ. ಮತ್ತೊಂದೆಡೆ ಭಾರತದಲ್ಲಿ ಸುಮಾರು 35 ಕೋಟಿ ಜನರು ಡಂಬ್‌ಫೋನ್‌ಗಳನ್ನು ಬಳಸುತ್ತಾರೆ. ಈ ಸಂಧರ್ಭದಲ್ಲಿ ಜನರು ಅತ್ಯುತ್ತಮ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಟ್ಟು ಫೀಚರ್‌ಲೆಸ್ ಡಂಬ್‌ಫೋನ್‌ಗಳನ್ನು ಏಕೆ ಬಳಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಅತ್ಯಂತ ಕಡಿಮೆ ಬೆಲೆಯ ಫೋನ್

ಡಂಬ್‌ಫೋನ್ ಬಳಕೆ ಹೆಚ್ಚಾಗಲು ಮುಖ್ಯ ಕಾರಣವೆಂದರೆ ಇದರ ಬೆಲೆ. ಮಾರುಕಟ್ಟೆಯಲ್ಲಿನ ಇತರ ಫೋನ್‌ಗಳಿಗೆ ಹೋಲಿಸಿದರೆ ಇವುಗಳು ತುಂಬಾ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಭಾರತದಲ್ಲಿ ಡಂಬ್‌ಫೋನ್‌ನ ಬೆಲೆ 1500 ರಿಂದ 3000 ರೂಪಾಯಿಗಳ ನಡುವೆ ಇರುತ್ತದೆ. 
ಡಂಬ್‌ಫೋನ್‌ಗಳು ಬಹಳ ಬಲವಾದ ಮತ್ತು ದೀರ್ಘಕಾಲ ಬಾಳಿಕೆ ಬರುತ್ತವೆ. ಇವು ಸುಲಭವಾಗಿ ತುಕ್ಕು ಹಿಡಿಯುವುದಿಲ್ಲ. ಈ ಡಂಬ್‌ಫೋನ್‌ಗಳು ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಪ್ರಬಲವಾಗಿವೆ. ಅಷ್ಟೇ ಅಲ್ಲದೆ ಸ್ಮಾರ್ಟ್‌ಫೋನ್‌ನಂತೆ ಮತ್ತೆ ಮತ್ತೆ ಚಾರ್ಜ್ ಮಾಡುವ ಅಗತ್ಯವಿಲ್ಲ. ಈ ಬ್ಯಾಟರಿ ಹಲವಾರು ದಿನಗಳವರೆಗೆ ಬಾಳಿಕೆ ಬರುತ್ತದೆ.

ಸ್ಮಾರ್ಟ್‌ಫೋನ್‌ಗಳ ಅನಾನುಕೂಲಗಳು

ಇದಲ್ಲದೇ ಸ್ಮಾರ್ಟ್ ಫೋನ್ ಗಳಿಂದ ಆಗುವ ದುಷ್ಪರಿಣಾಮಗಳ ಕಾರಣದಿಂದಾಗಿ ಈ ಡಂಬ್ ಫೋನ್ ಗಳ ಬಳಕೆ ಹೆಚ್ಚಾಗುತ್ತಿದೆ. ಜಗತ್ತಿನಾದ್ಯಂತ ನಡೆದ ಹಲವು ಸಂಶೋಧನೆಗಳಿಂದ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಜ್ಞಾಪಕ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ನಕಾರಾತ್ಮಕತೆ ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ ವಂಚನೆ, ಸೈಬರ್ ಕ್ರೈಂ ಮತ್ತು ಸೆಲ್‌ಫೋನ್‌ಗಳಿಂದ ಡೇಟಾ ಕಳ್ಳತನದ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ. 

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :