32MP ಸೆಲ್ಫಿ ಕ್ಯಾಮೆರಾ ಮತ್ತು 6000mAh ಬ್ಯಾಟರಿಯ Samsung Galaxy F54 5G ಕೈಗೆಟಕುವ ಬೆಲೆಗೆ ಲಭ್ಯ | Tech News
Samsung Galaxy F54 5G ಸ್ಮಾರ್ಟ್ಫೋನ್ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ
6000mAh ಬ್ಯಾಟರಿ ಮತ್ತು 25W ಫಾಸ್ಟ್ ಚಾರ್ಜರ್ ಸಹ ಸಪೋರ್ಟ್ ಮಾಡುತ್ತದೆ.
IDFC FIRST ಕ್ರೆಡಿಟ್ ಕಾರ್ಡ್ ಬಳಸಿ EMI ಸೌಲಭ್ಯ ಪಡೆದು ಖರೀದಿಸಿದರೆ ಸುಮಾರು 10% ವರೆಗೆ ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು
ನೀವೊಂದು ಕೈಗೆಟಕುವ ಬೆಲೆಗೆ ಅತ್ಯುತ್ತಮ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಈ ಡೀಲ್ ಕೈ ಜಾರುವ ಮೊದಲು ಇಂದೇ ಖರೀದಿಸಿಕೊಳ್ಳಿ. ಸುಮಾರು 25,000 ಸಾವಿರ ಬೆಲೆಯೊಳಗೆ ಬರುವ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸಲು ನೀವು ಬಯಸಿದರೆ ನಿಮಗಾಗಿ ಒಂದು ದೊಡ್ಡ ಅವಕಾಶವನ್ನು ಫ್ಲಿಪ್ಕಾರ್ಟ್ ಬಂಪರ್ ಡೀಲ್‌ನಲ್ಲಿ ನೀಡುತ್ತಿದೆ. ಈ Galaxy F ಸರಣಿಯ Samsung Galaxy F54 5G ಯ ಉತ್ತಮ ಸ್ಮಾರ್ಟ್‌ಫೋನ್ ಅತ್ಯುತ್ತಮ ಕೊಡುಗೆಯಲ್ಲಿ ಲಭ್ಯವಿದೆ. ಈ ಸ್ಯಾಮ್‌ಸಂಗ್ ಫೋನ್ 108MP ಮೆಗಾಪಿಕ್ಸೆಲ್ ಪ್ರೈಮರಿ ಬ್ಯಾಕ್ ಲೆನ್ಸ್ ಮತ್ತು 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್‌ನ ಫೀಚರ್ಗಳು ಮತ್ತು ವಿಶೇಷಣಗಳ ಬಗ್ಗೆ ತಿಳಿಯೋಣ.
Also Read: ಈಗ ಕೇವಲ 1500 ರೂಗಳಲ್ಲಿ ಹೊಸ Passport ಮನೆಯಿಂದಲೇ ಅರ್ಜಿ ಸಲ್ಲಿಸುವುದು ಹೇಗೆ?
Samsung Galaxy F54 5G ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್ಫೋನ್ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ ಬೆಲೆ 24,999 ರೂಗಳಿಗೆ ನಿಗದಿಗೊಳಿಸಿದ್ದು ನೀವು ಈ 5G ಫೋನ್ ಖರೀದಿಸಲು IDFC FIRST ಕ್ರೆಡಿಟ್ ಕಾರ್ಡ್ ಬಳಸಿ EMI ಸೌಲಭ್ಯ ಪಡೆದು ಖರೀದಿಸಿದರೆ ಸುಮಾರು 10% ವರೆಗೆ 2000 ರಿಯಾಯಿತಿಯೊಂದಿಗೆ ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಅಲ್ಲದೆ ಕಂಪನಿಯು ಈ ಫೋನ್‌ನಲ್ಲಿ ರೂ 24,160 ವರೆಗೆ ವಿನಿಮಯ ಬೋನಸ್ ಅನ್ನು ಸಹ ನೀಡುತ್ತಿದೆ. ವಿನಿಮಯ ಕೊಡುಗೆಯಲ್ಲಿ ಲಭ್ಯವಿರುವ ರಿಯಾಯಿತಿಯು ನಿಮ್ಮ ಹಳೆಯ ಫೋನ್, ಬ್ರಾಂಡ್ ಮತ್ತು ಕಂಪನಿಯ ವಿನಿಮಯ ನೀತಿಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಸ್ಯಾಮ್‌ಸಂಗ್ Galaxy F54 5G ಫೀಚರ್ ಮತ್ತು ವಿಶೇಷಣಗಳು
ಈ Samsung Galaxy F ಸರಣಿಯ ಫೋನ್‌ನಲ್ಲಿ 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯನ್ನು ನೀಡಲಾಗುತ್ತಿದೆ. 120Hz ರಿಫ್ರೆಶ್ ದರದೊಂದಿಗೆ ಈ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ. ಫೋನ್ 8GB RAM ಮತ್ತು 256 GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಅಗತ್ಯವಿದ್ದರೆ ಬಳಕೆದಾರರು ಮೈಕ್ರೋ SD ಕಾರ್ಡ್‌ನೊಂದಿಗೆ ಈ ಫೋನ್‌ನ ಮೆಮೊರಿಯನ್ನು 1TB ವರೆಗೆ ಹೆಚ್ಚಿಸಬಹುದು. ಕಂಪನಿಯು ಈ ಫೋನ್‌ನಲ್ಲಿ Exynos 1380 ಪ್ರೊಸೆಸರ್ ಅನ್ನು ಒದಗಿಸುತ್ತಿದೆ.
ಫೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಮೂರು ಕ್ಯಾಮೆರಾಗಳನ್ನು ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ನೀಡಲಾಗಿದೆ. ಇವುಗಳು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕೋನ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ 108MP ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್ ಅನ್ನು ಒಳಗೊಂಡಿವೆ. ಅದೇ ಸಮಯದಲ್ಲಿ ಸೆಲ್ಫಿಗಾಗಿ ನೀವು ಈ ಫೋನ್‌ನಲ್ಲಿ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತೀರಿ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿರುವ ಈ ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ ಆಂಡ್ರಾಯ್ಡ್ 13 ಆಧಾರಿತ OneUI 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್‌ನಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ವೈ-ಫೈ ಮತ್ತು ಬ್ಲೂಟೂತ್‌ನಂತಹ ಆಯ್ಕೆಗಳನ್ನು ಪಡೆಯುತ್ತೀರಿ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile