ಮೋಟೊರೋಲ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಅನ್ನು ತನ್ನ Edge 40 ಸರಣಿಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮೋಟೊರೋಲ ಈಗ ಜಾಗತಿಕ ಮಾರುಕಟ್ಟೆಯಲ್ಲಿ Moto Edge 40 Neo ಸ್ಮಾರ್ಟ್‌ಫೋನ್ 21ನೇ ಸೆಪ್ಟೆಂಬರ್ 2023 ರಂದು ಭಾರತದಲ್ಲಿ ಉನ್ನತ ದರ್ಜೆಯ ಡಿಸ್ಪ್ಲೇ ಮತ್ತು ಡೈಮೆನ್ಸಿಟಿ 7030 ಚಿಪ್‌ಸೆಟ್ನೊಂದಿಗೆ ಬಿಡುಗಡೆಯಾಗುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಇದಾಗಲಿದೆ. ಈ Moto Edge 40 Neo ಫೋನ್ ಭಾರಿ ಕೊಡುಗೆಗಳೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.
ಈ ಸ್ಮಾರ್ಟ್ಫೋನ್ 144Hz ರಿಫ್ರೆಶ್ ರೇಟ್ ಮತ್ತು ಪೂರ್ಣ HD+ ರೆಸಲ್ಯೂಶನ್ ಅನ್ನು ಒಳಗೊಂಡಿರುವ 6.55 ಇಂಚಿನ pOLED ಡಿಸ್ಪ್ಲೇಯನ್ನು ಪಡೆಯಬಹುದು. ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಆಕ್ಟಾ-ಕೋರ್ ಡೈಮೆನ್ಸಿಟಿ 7030 ಚಿಪ್‌ಸೆಟ್‌ನೊಂದಿಗೆ 12GB RAM ಮತ್ತು 256GB ವರೆಗಿನ ಸ್ಟೋರೇಜ್ ಜೊತೆಗೆ ಜೋಡಿಸಲ್ಪಡುತ್ತದೆ. Moto Edge 40 Neo ಫೋನ್ 5000mAh ಬ್ಯಾಟರಿಯನ್ನು ಪಡೆಯುವ ನಿರೀಕ್ಷೆಯಿದೆ ಇದು 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ Moto Edge 40 Neo ಫೋನ್ ಆಂಡ್ರಾಯ್ಡ್ 13-ಆಧಾರಿತ MyUX ಸ್ಕಿನ್‌ನೊಂದಿಗೆ ಬರಬಹುದು.
ಈ ಸ್ಮಾರ್ಟ್‌ಫೋನ್‌ಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಬಹುದು ಇದು 50MP ಪ್ರೈಮರಿ ಶೂಟರ್ ಮತ್ತು 13MP ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಸೆಲ್ಫಿ ಪ್ರಿಯರಿಗೆ ಹ್ಯಾಂಡ್‌ಸೆಟ್‌ನ ಪಂಚ್-ಹೋಲ್ ಕಟೌಟ್‌ನಲ್ಲಿ 32MP ಫ್ರಂಟ್ ಶೂಟರ್ ಅನ್ನು ಒದಗಿಸಬಹುದು. ಸಂಪರ್ಕದ ವಿಷಯದಲ್ಲಿ, Moto Edge 40 Neo ಫೋನ್ IP68 ರೇಟಿಂಗ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, USB ಟೈಪ್-C ಪೋರ್ಟ್, ಬ್ಲೂಟೂತ್, NFC, Wi-Fi ಮತ್ತು ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್ ಇತ್ಯಾದಿಗಳನ್ನು ನಿರೀಕ್ಷಿಸಲಾಗಿದೆ.
ಈ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕಂಪನಿಯು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಇದರ ಬೆಲೆ ಸುಮಾರು 30,000 ರೂಗಳಿಗೆ ಬರುವ ನಿರೀಕ್ಷೆಗಳಿವೆ. ಅಲ್ಲದೆ ಇದರ ಎಲ್ಲಾ ವಿಶೇಷಣಗಳನ್ನು ಕಂಪನಿಯು ಇನ್ನೂ ದೃಢೀಕರಿಸಿಲ್ಲ ಎಂಬುದನ್ನು ಗಮನಿಸಬೇಕಿದೆ. ಮತ್ತು ಮೊಟೊರೊಲಾದಿಂದ ಈ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ನಾವು ಸೆಪ್ಟೆಂಬರ್ 21 ರವರೆಗೆ ಕಾಯಬೇಕಾಗಿದೆ.