108MP ಕ್ಯಾಮೆರಾದ Redmi Note 11S ಬೆಲೆ ಕೇವಲ 16,499 ಇಂದೇ ಖರೀದಿಸಿ! ಯಾರಿಗುಂಟು ಯಾರಿಗಿಲ್ಲ

108MP ಕ್ಯಾಮೆರಾದ Redmi Note 11S ಬೆಲೆ ಕೇವಲ 16,499 ಇಂದೇ ಖರೀದಿಸಿ! ಯಾರಿಗುಂಟು ಯಾರಿಗಿಲ್ಲ
HIGHLIGHTS

Redmi ಇಂದು ಭಾರತದಲ್ಲಿ ತಮ್ಮ ಇತ್ತೀಚಿನ ಸ್ಮಾರ್ಟ್ಫೋನ್ Redmi Note 11S ಮಾರಾಟಕ್ಕೆ ಬಿಡುಗಡೆಗೊಳಿಸಿದೆ.

ರೆಡ್ಮಿ ನೋಟ್‌ 11S ಫೋನ್ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೇಲ್ ಕಾಣುತ್ತಿದೆ.

ಈ ಸ್ಮಾರ್ಟ್‌ಫೋನ್‌ 108MP ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಭಾರತದ ನಂಬರ್ ಒನ್ ಸ್ಮಾರ್ಟ್ಫೋನ್ ಬ್ರಾಂಡ್ Xiaomi Redmi ಇಂದು ಭಾರತದಲ್ಲಿ ತಮ್ಮ ಇತ್ತೀಚಿನ ಸ್ಮಾರ್ಟ್ಫೋನ್ Redmi Note 11S ಮಾರಾಟಕ್ಕೆ ಬಿಡುಗಡೆಗೊಳಿಸಿದೆ. ಇತ್ತೀಚೆಗಷ್ಟೆ ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಶವೋಮಿ (Xiaomi) ಕಂಪನಿಯು ತನ್ನ ರೆಡ್ಮಿ ನೋಟ್ ಸರಣಿಯಲ್ಲಿ ಹೊಸ ರೆಡ್ಮಿ ನೋಟ್‌ 11 (Redmi Note 11) ಮತ್ತು ರೆಡ್ಮಿ ನೋಟ್‌ 11S (Redmi Note 11S) ಫೋನ್​ಗಳು ಲಾಂಚ್ ಮಾಡಿತ್ತು. ಇದರಲ್ಲಿ ಬಿಡುಗಡೆ ದಿನವೇ ಟಕ್ ಪ್ರಿಯರ ನಿದ್ದೆ ಕದ್ದಿದ್ದ ರೆಡ್ಮಿ ನೋಟ್‌ 11S ಫೋನ್ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೇಲ್ ಕಾಣುತ್ತಿದೆ.

Redmi Note 11S ಬೆಲೆ ಮತ್ತು ಲಭ್ಯತೆ 

ರೆಡ್ಮಿ ನೋಟ್‌ 11S ಸ್ಮಾರ್ಟ್‌ಫೋನ್‌ ಮೂರು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. 6GB RAM ಮತ್ತು 64GB ಮಾದರಿಗೆ 16,499. ರೂ ಬೆಲೆ ನಿಗದಿ ಪಡಿಸಲಾಗಿದೆ. 6GB RAM ಮತ್ತು 128GB ಮಾದರಿ ಆಯ್ಕೆಗೆ 17,499 ರೂ., 8GB RAM ಮತ್ತು 128GB ಆಯ್ಕೆಯ ಬೆಲೆ 18,499 ರೂ. ಇದೆ. ಈ ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಸೇರಿದಂತೆ ಎಂಐ. ಕಾಮ್, ಎಂಐ ಸ್ಟೋರ್ ಮತ್ತು ರಿಟೇಲ್ ಸ್ಟೋರ್​ಗಳಲ್ಲಿ ಖರೀದಿಗೆ ಸಿಗುತ್ತಿದೆ. ಖರೀದಿಸಬಹುದು.

Redmi Note 11S ವಿಶೇಷತೆ

ರೆಡ್ಮಿ ನೋಟ್‌ 11S ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್‌ ಮೀಡಿಯಾಟೆಕ್‌ ಹಿಲಿಯೋ G96 ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ MIUI 13 ನೊಂದಿಗೆ ಆಂಡ್ರಾಯ್ಡ್‌ 11 ಬೆಂಬಲಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ HM2 ಸೆನ್ಸಾರ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದು 16 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿಯನ್ನು ಒಳಗೊಂಡಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo