108MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ Smartphone ಕೇವಲ ₹8,900 ರೂಗಳಿಗೆ ಲಭ್ಯ | Tech News

108MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ Smartphone ಕೇವಲ ₹8,900 ರೂಗಳಿಗೆ ಲಭ್ಯ | Tech News
HIGHLIGHTS

ರಿಯಲ್‌ಮಿಯ ಈ 108MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಹೊಂದಿರುವ Realme C53 ಅತ್ಯುತ್ತಮ ಆಯ್ಕೆಯಾಗಿದೆ

ಪ್ರಸ್ತುತ ಅಮೆಜಾನ್‌ನಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದ್ದು ಉತ್ತಮ ಡಿಸ್ಕೌಂಟ್‌ಗಳೊಂದಿಗೆ ಇಂದು ಖರೀದಿಸಲು ಯೋಗ್ಯವಾಗಿದೆ.

Realme C53 ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಅಮೆಜಾನ್‌ನಲ್ಲಿ ಕೇವಲ ₹8,877 ರೂಗಳಿಗೆ ಲಭ್ಯ

ಈ ವರ್ಷ ನೀವೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ (Smartphone) ಖರೀದಿಸಲು ಯೋಚಿಸುತ್ತಿದ್ದರೆ ರಿಯಲ್‌ಮಿಯ ಈ 108MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಹೊಂದಿರುವ Realme C53 ಅತ್ಯುತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್ಫೋನ್ ಪ್ರಸ್ತುತ ಅಮೆಜಾನ್‌ನಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದ್ದು ಉತ್ತಮ ಡಿಸ್ಕೌಂಟ್‌ಗಳೊಂದಿಗೆ ಇಂದು ಖರೀದಿಸಲು ಯೋಗ್ಯವಾಗಿದೆ. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರಲ್ಲಿ ಕೇವಲ 10,000 ರೂಗಳೊಳಗೆ ಉತ್ತಮ ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿಯ ಸ್ಮಾರ್ಟ್ಫೋನ್ (Smartphone) ಹುಡುಕುತ್ತಿದ್ದರೆ ಈ ಲೇಖನವನ್ನು ಅವರೊಂದಿಗೆ ಶೇರ್ ಮಾಡಿಕೊಳ್ಳಿ. ಏಕೆಂದರೆ Realme C53 ಸ್ಮಾರ್ಟ್ಫೋನ್ ಬೆಲೆ, ಆಫರ್, ಲಭ್ಯತೆ ಮತ್ತು ಇದರ ಫೀಚರ್ಗಳನ್ನು ಈ ಕೆಳಗೆ ನೀಡಲಾಗಿದೆ.

Also Read: 77 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ಡೇಟಾ ನೀಡುವ Airtel ಹೊಸ ಪ್ಲಾನ್‌ಗಳ ಬೆಲೆ ಎಷ್ಟು?

Realme C53 Smartphone ಬೆಲೆ ಮತ್ತು ಆಫರ್ಗಳು

ಈ ಸ್ಮಾರ್ಟ್ಫೋನ್ ಅನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಇದರ ಬೆಲೆ, ಆಫರ್ ಮತ್ತು ಲಭ್ಯತೆಯ ಬಗ್ಗೆ ತಿಳಿಯುವುದು ಮುಖ್ಯವಾಗಿದೆ. ಭಾರತದಲ್ಲಿ ಸ್ಮಾರ್ಟ್ಫೋನ್ ನಿಮಗೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಆದರೆ ಗಮನದಲ್ಲಿರಲಿ ಪ್ರಸ್ತುತ ಅಮೆಜಾನ್ ಮಾತ್ರ ಇದರ ಮೇಲೆ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ 3 ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು ಚಾಂಪಿಯನ್ ಬ್ಲಾಕ್ ಮತ್ತು ಚಾಂಪಿಯನ್ ಗೋಲ್ಡ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. Realme C53 ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಅಮೆಜಾನ್‌ನಲ್ಲಿ ಕೇವಲ ₹8,877 ರೂಗಳಿಗೆ ಲಭ್ಯವಿದ್ದು ಇದರ 8GB RAM ಮತ್ತು 128GB ಸ್ಟೋರೇಜ್ ಬೆಲೆ ಕೇವಲ ₹10,495 ರೂಗಳಾಗಿದೆ. ಆದರೆ ಇದರ 6GB RAM ಮತ್ತು 64GB ಸ್ಟೋರೇಜ್ ಬಗ್ಗೆ ಪ್ರಸ್ತುತ ಯಾವುದೇ ಬೆಲೆಯನ್ನು ನೀಡಿಲ್ಲ.

Realme C53 Smartphone
Realme C53 – Amazon Deal 2024

Realme C53 ಸ್ಮಾರ್ಟ್ಫೋನ್ ವಿಶೇಷಣಗಳು

ಸ್ಮಾರ್ಟ್ಫೋನ್ 6.74 ಇಂಚಿನ ಡಿಸ್ಪ್ಲೇಯನ್ನು 90Hz ರಿಫ್ರೆಶ್ ರೇಟ್‌ನೊಂದಿಗೆ 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ಲಭ್ಯವಿದೆ. ಇದು 1.82GHz ಗರಿಷ್ಠ ಸ್ಪೀಡ್‌ನೊಂದಿಗೆ Unisoc Tiger T612 ಪ್ರೊಸೆಸರ್ನೊಂದಿಗೆ ಆಕ್ಟಾ-ಕೋರ್ 12nm ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಜೊತೆಗೆ ARM Mali-G57 GPU ಜೊತೆಗೆ ಸಂಯೋಜಿಸಲ್ಪಟ್ಟಿದೆ. Realme C53 ಸ್ಮಾರ್ಟ್ಫೋನ್ 108MP ಮೆಗಾಪಿಕ್ಸೆಲ್ ಮತ್ತು AI ಬೆಂಬಲಿತ ಪ್ರೈಮರಿ ಸೆನ್ಸರ್ ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಫೋನ್ ಒಳಗೊಂಡಿದೆ. ಇದರ ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ ಸ್ಮಾರ್ಟ್‌ಫೋನ್ 8MP ಮೆಗಾಪಿಕ್ಸೆಲ್ ಡಿಸ್ಪ್ಲೇಯಲ್ಲಿ ನೀಡಲಾಗಿದೆ.

Realem C53 ಮೈಕ್ರೋ SD ಕಾರ್ಡ್ ಮೂಲಕ (2TB ವರೆಗೆ) ವಿಸ್ತರಿಸಬಹುದಾದ ಸ್ಟೋರೇಜ್ ಸ್ಥಳವನ್ನು ಸಹ ನೀಡುತ್ತದೆ. ಫೋನ್ ಆಂಡ್ರಾಯ್ಡ್ 13 ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, GPS/AGPS, Wi-Fi, ಬ್ಲೂಟೂತ್ 5, USB ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಆನ್‌ಬೋರ್ಡ್ ಸೆನ್ಸರ್ಗಳಲ್ಲಿ ಅಕ್ಸೆಲೆರೊಮೀಟರ್, ಮ್ಯಾಗ್ನೆಟಿಕ್ ಸೆನ್ಸರ್, ಲೈಟ್ ಸೆನ್ಸಾರ್, ಗೈರೊ ಮೀಟರ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಸೇರಿವೆ. ಫೋನ್ 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo