108MP ಕ್ಯಾಮೆರಾ ಮತ್ತು 256GB ಸ್ಟೋರೇಜ್‌ನ ಈ 5G ಕಡಿಮೆ ಬೆಲೆಗೆ ಲಭ್ಯ | Best Offer

108MP ಕ್ಯಾಮೆರಾ ಮತ್ತು 256GB ಸ್ಟೋರೇಜ್‌ನ ಈ 5G ಕಡಿಮೆ ಬೆಲೆಗೆ ಲಭ್ಯ | Best Offer
HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಭಾರಿ ರಿಯಾಯಿತಿ ಲಭ್ಯ

8GB RAM ಮತ್ತು 108MP ಕ್ಯಾಮೆರಾದ Poco X5 Pro 5G ಭಾರಿ ಡಿಸ್ಕೌಂಟ್ನೊಂದಿಗೆ ಲಭ್ಯ

AXIS ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ ರೂ 1,000 ಉಳಿಸಬಹುದು.

ಭಾರತದಲ್ಲಿ ನಡೆಯುತ್ತಿರುವ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್ (Smartphone 2023) ಖರೀದಿಸಲು ನೀವು ಯೋಜಿಸುತ್ತಿದ್ದರೆ ನಿಮಗಾಗಿ ಸಿಹಿಸುದ್ದಿಯನ್ನು ಫ್ಲಿಪ್ಕಾರ್ಟ್ ನೀಡುತ್ತಿದೆ. ಏಕೆಂದರೆ ನೀವು ಈ Poco X5 Pro 5G ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಭಾರಿ ರಿಯಾಯಿತಿಯೊಂದಿಗೆ ಪಟ್ಟಿ ಮಾಡಲಾಗಿದೆ. ಈ ಫೋನ್‌ನಲ್ಲಿ ನೀವು ಅನೇಕ ಅದ್ಭುತ ಲೇಟೆಸ್ಟ್ ಫೀಚರ್ಗಳನ್ನು ಪಡೆಯುವಿರಿ. ಈ ಫೋನ್ 8GB RAM ಮತ್ತು 108MP ಕ್ಯಾಮೆರಾವನ್ನು ಹೊಂದಿದ್ದು ಕೇವಲ 19,000 ಸಾವಿರ ರೂಪಾಯಿಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ.

ಇದನ್ನೂ ಓದಿ: ಸುಮಾರು 20 ಸಾವಿರದ ಈ ಟಾಪ್ Smartphones ಮೇಲೆ ಬಂಪರ್ ಡಿಸ್ಕೌಂಟ್

Poco X5 Pro 5G ಫೋನ್‌ ಬೆಲೆ ಮತ್ತು ಡೀಲ್‌ಗಳೇನು?

ವಾಸ್ತವವಾಗಿ Poco X5 Pro 5G ಅನ್ನು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ನ ಬಿಡುಗಡೆಯ ಬೆಲೆ ಸುಮಾರು 29,000 ಸಾವಿರ ರೂಪಾಯಿಗಳು ಆದರೆ ನೀವು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಿದರೆ ನೀವು ಈ 5G ಸ್ಮಾರ್ಟ್‌ಫೋನ್‌ ಕೇವಲ 18,000 ಸಾವಿರ ರೂಪಾಯಿಗೆ ಬಂಪರ್ ರಿಯಾಯಿತಿಯಲ್ಲಿ ಖರೀದಿಸಬಹುದು. ಫೋನ್‌ನಲ್ಲಿ ಬ್ಯಾಂಕ್ ಕೊಡುಗೆಗಳ ಅಡಿಯಲ್ಲಿ ಉಳಿತಾಯವನ್ನೂ ಮಾಡಬಹುದು. ನೀವು AXIS ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ ನೀವು ಹೊಸ ಫೋನ್‌ನಲ್ಲಿ ರೂ 1,000 ಉಳಿಸಬಹುದು.

Poco X5 Pro 5G ಫೋನ್‌ನ 108MP ಹೈಲೈಟ್ ಫೀಚರ್‌ಗಳು

➥ಈ ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಫುಲ್ HD+ Xfinity AMOLED ಡಿಸ್ಪ್ಲೇಯನ್ನು ಹೊಂದಿದೆ.

➥ಈ Poco X5 Pro 5G ಪವರ್ಫುಲ್ Qualcomm Snapdragon 778G ಪ್ರೊಸೆಸರ್ ಹೊಂದಿದೆ.

➥ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಇದರಲ್ಲಿ 108MP ಪ್ರೈಮರಿ ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ.

➥ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ 4K ಬೆಂಬಲದೊಂದಿಗೆ 30fps ವೀಡಿಯೊಗಳನ್ನು ಮಾಡಲು ಸಾಧ್ಯವಾಗುತ್ತದೆ.

➥ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಕಂಪನಿಯು ಫೋನ್‌ನಲ್ಲಿ 67W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ಒದಗಿಸಿದೆ.

➥ಕೊನೆಯದಾಗಿ ಈ Poco X5 Pro 5G ಫಿಂಗರ್‌ಪ್ರಿಂಟ್ ಸೆನ್ಸರ್, ಡ್ಯುಯಲ್ ಸಿಮ್, ವೈ-ಫೈ ಮತ್ತು ಬ್ಲೂಟೂತ್‌ನಂತಹ ವೈಶಿಷ್ಟ್ಯಗಳು ಫೋನ್‌ನಲ್ಲಿವೆ.

Poco X5 Pro 5G ವಿನಿಮಯ ಕೊಡುಗೆಗಳು

ಕಂಪನಿಯು ಗ್ರಾಹಕರಿಗೆ ವಿನಿಮಯ ಕೊಡುಗೆಯ ಲಾಭವನ್ನು ನೀಡುತ್ತಿದೆ. ನಿಮ್ಮ ಹಳೆಯ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ನೀಡುವ ಮೂಲಕ ನೀವು ಹೊಸ ಫೋನ್ ಖರೀದಿಸಬಹುದು. Poco X5 Pro ಸ್ಮಾರ್ಟ್‌ಫೋನ್ 13,150 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ಈ ಬೆಲೆಯು ವೆಬ್‌ಸೈಟ್‌ನಲ್ಲಿ ರಿಯಾಯಿತಿಯ ನಂತರ ಪಟ್ಟಿ ಮಾಡಲಾದ ಬೆಲೆಗೆ ಅನ್ವಯಿಸುತ್ತದೆ ಅಂದರೆ ರೂ 18,999. ಅಂದರೆ ನೀವು ಹೊಸ ಸಾಧನವನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo