Intel Core 11th Gen i3 ಪ್ರೊಸೆಸರ್‌ನೊಂದಿಗೆ TECNO MEGABOOK T1 ಕೇವಲ ₹23,990 ರೂಗಳಿಗೆ ಲಭ್ಯ!

Intel Core 11th Gen i3 ಪ್ರೊಸೆಸರ್‌ನೊಂದಿಗೆ TECNO MEGABOOK T1 ಕೇವಲ ₹23,990 ರೂಗಳಿಗೆ ಲಭ್ಯ!
HIGHLIGHTS

Tecno Megabook T1 ಲ್ಯಾಪ್‌ಟಾಪ್ ಕೈಗೆಟಕುವ ಬೆಲೆಗೆ ನಿಜಕ್ಕೂ ಅದ್ದೂರಿಯ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ.

ಈ ಲೇಟೆಸ್ಟ್ Megabook T1 ಲ್ಯಾಪ್‌ಟಾಪ್‌ ಒಟ್ಟು 3 ರೂಪಾಂತರಗಳೊಂದಿಗೆ ಬರುತ್ತದೆ.

ಚೀನಾದ ಸ್ಮಾರ್ಟ್ಫೋನ್ ತಯಾರಕ ಟೆಕ್ನೋ ಕಂಪನಿ ತನ್ನ ಲೇಟೆಸ್ಟ್ Tecno Megabook T1 ಲ್ಯಾಪ್‌ಟಾಪ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಗೆ ನಿಜಕ್ಕೂ ಅದ್ದೂರಿಯ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಬಿಡುಗಡೆಯ ಸಮಯದಲ್ಲಿ ಕಂಪನಿಯು ಲ್ಯಾಪ್‌ಟಾಪ್‌ನ ರೂಪಾಂತರಗಳನ್ನು ಖಚಿತಪಡಿಸಿತ್ತು ಆದರೆ ಬೆಲೆಯ ಬಗ್ಗೆ ಏನನ್ನೂ ಬಹಿರಂಗಪಡಿಸಲಿಲ್ಲ. ಆದರೆ ಈಗ ಪೇಜ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. ಇದು ಲ್ಯಾಪ್‌ಟಾಪ್‌ನಲ್ಲಿ ಲಭ್ಯವಿರುವ ವಿಶೇಷತೇ ಅಂದ್ರೆ ಈ ಬೆಲೆಗೆ Intel Core 11th Gen i5 ಪ್ರೊಸೆಸರ್‌ನೊಂದಿಗೆ ಬರುವ ಬೆಸ್ಟ್ ಲ್ಯಾಪ್ಟಾಪ್ ಇದಾಗಿದೆ. ಕಂಪನಿಯು ಅದರ ಬೆಲೆಯನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸೇರಿ ಅಮೆಜಾನ್ನಲ್ಲೂ ನೀಡುತ್ತಿದೆ.

Also Read: ನಿಮ್ಮ Facebook ಮತ್ತು Instagram ಅಥವಾ ಬೇರೆ ಗೂಗಲ್ ಖಾತೆಗಳ ಪಾಸ್‌ವರ್ಡ್ (Password) ಮರೆತೊಗಿದ್ರೆ ಇಲ್ಲಿದೆ ರಾಮಬಾಣ!

Tecno Megabook T1 ಬೆಲೆ ಮತ್ತು ಲಭ್ಯತೆ

ಈ ಲೇಟೆಸ್ಟ್ Megabook T1 ಲ್ಯಾಪ್‌ಟಾಪ್‌ ಒಟ್ಟು 3 ರೂಪಾಂತರಗಳೊಂದಿಗೆ ಬರುತ್ತದೆ. ಭಾರತದಲ್ಲಿ ಅಮೆಜಾನ್ ಮತ್ತು ಟೆಕ್ನೋ ವೆಬ್ ಸೈಟ್ಗಳಲ್ಲಿ ಇದರ ಮಾಹಿತಿಯನ್ನು ಪಡೆದು ಭಾರಿ ಡಿಸ್ಕೌಂಟ್ ಮತ್ತು ಆಫರ್ನೊಂದಿಗೆ ಖರೀದಿಸಬಹುದು.
Tecno Megabook T1 > Intel Core 11th Gen i3 – ₹23,990 ರೂಗಳು
Tecno Megabook T1 > Intel Core 11th Gen i5 – ₹29,990 ರೂಗಳು
Tecno Megabook T1 > Intel Core 11th Gen i7 – ₹39,990 ರೂಗಳು

TECNO MEGABOOK T1

Tecno Megabook T1 ಲ್ಯಾಪ್‌ಟಾಪ್‌ ವಿಶೇಷಣಗಳು

ಈ ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ HD ಡಿಸ್ಪ್ಲೇಯನ್ನು ಹೊಂದಿದೆ. ಇದು 350 nits ಹೊಳಪನ್ನು ಹೊಂದಿದೆ. ಡಿಸ್ಪ್ಲೇ ಪ್ಯಾನಲ್ TUV ರೈನ್‌ಲ್ಯಾಂಡ್ ಐ ಕಂಫರ್ಟ್ ಪ್ರಮಾಣೀಕರಣವನ್ನು ಹೊಂದಿದೆ. sRGB ಬಣ್ಣದ ಹರವು 100% ಕವರೇಜ್, ಮತ್ತು ಅಡಾಪ್ಟಿವ್ DC ಡಿಮ್ಮಿಂಗ್ ಬೆಂಬಲವನ್ನು ಹೊಂದಿದೆ. ಲ್ಯಾಪ್‌ಟಾಪ್ ಇಂಟೆಲ್‌ನ 11 ನೇ ತಲೆಮಾರಿನ ಕೋರ್ i7 ಪ್ರೊಸೆಸರ್‌ನೊಂದಿಗೆ 16GB RAM ಮತ್ತು 1TB ವರೆಗೆ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಲ್ಯಾಪ್‌ಟಾಪ್ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು DTS ಇಮ್ಮರ್ಸಿವ್ ಸೌಂಡ್‌ನೊಂದಿಗೆ ಡ್ಯುಯಲ್ ಸ್ಪೀಕರ್ ಅನ್ನು ಹೊಂದಿದೆ ಜೊತೆಗೆ AI ಎನ್ವಿರಾನ್‌ಮೆಂಟ್ ನಾಯ್ಸ್ ಕ್ಯಾನ್ಸಲೇಶನ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಮೈಕ್ರೊಫೋನ್‌ಗಳನ್ನು ಹೊಂದಿದೆ.

ಲ್ಯಾಪ್‌ಟಾಪ್ ಪೂರ್ಣ ಚಾರ್ಜ್‌ನಲ್ಲಿ 17.5 ಗಂಟೆಗಳವರೆಗೆ ಇರುತ್ತದೆ

ಸಂಪರ್ಕಕ್ಕಾಗಿ MegaBook T1 ಎರಡು USB 3.0 ಪೋರ್ಟ್‌ಗಳು ಒಂದು USB 3.1 ಪೋರ್ಟ್, ಎರಡು USB Type-C ಪೋರ್ಟ್‌ಗಳು, HDMI ಪೋರ್ಟ್, Wi-Fi 6, 3.5mm ಆಡಿಯೋ ಜ್ಯಾಕ್ ಮತ್ತು TF ಕಾರ್ಡ್ ರೀಡರ್‌ನೊಂದಿಗೆ ಬರುತ್ತದೆ. ಲ್ಯಾಪ್‌ಟಾಪ್ 2MP ಮೆಗಾಪಿಕ್ಸೆಲ್ ಪೂರ್ಣ HD ವೆಬ್‌ಕ್ಯಾಮ್ ಮತ್ತು ಫಿಂಗರ್‌ಪ್ರಿಂಟ್ ಸಂವೇದಕವನ್ನು ಗೌಪ್ಯತೆ ಕವರ್‌ನೊಂದಿಗೆ ಹೊಂದಿದೆ. ಲ್ಯಾಪ್‌ಟಾಪ್‌ನ ದಪ್ಪವು 14.8mm ಮತ್ತು ಅದರ ತೂಕ ಸುಮಾರು 1.56kg ಲ್ಯಾಪ್‌ಟಾಪ್ 70Wh ಬ್ಯಾಟರಿಯನ್ನು ಹೊಂದಿದ್ದು ಅದನ್ನು 65W ಚಾರ್ಜಿಂಗ್ ಅಡಾಪ್ಟರ್ ಬಳಸಿ ಚಾರ್ಜ್ ಮಾಡಬಹುದು. ಒಂದೇ ಚಾರ್ಜ್‌ನಲ್ಲಿ ಇದು 17.5 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo