ಮೊಟೊರೊಲಾ ಅಂತಿಮವಾಗಿ ಭಾರತದಲ್ಲಿ Moto E7 Power ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಡುಗಡೆಯಾಗಿದ್ದು ಫೆಬ್ರವರಿ 26 ರಂದು ಮೊದಲ ಮಾರಾಟಕ್ಕೆ ಮಾರಾಟವಾಗಲಿದೆ. Moto E7 Power ಅನ್ನು ಪ್ರವೇಶ ಮಟ್ಟದ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದ್ದರೂ ಎದುರುನೋಡಬೇಕಾದ ಆಸಕ್ತಿದಾಯಕ ಸ್ಪೆಕ್ಸ್‌ನೊಂದಿಗೆ ಇದು ಬರುತ್ತದೆ. Motorola ಹೇಳಿದ್ದು Moto E7 Power 100% ಪ್ರತಿಶತದಷ್ಟು ಭಾರತೀಯ ನಿರ್ಮಿತ ಸ್ಮಾರ್ಟ್‌ಫೋನ್ ಆಗಿದ್ದು ಈ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯ ಫೋನ್ ಆಗಿದ್ದು Motorola ಭಾರತೀಯ ಮಾರುಕಟ್ಟೆಯಲ್ಲಿ ನೀಡುತ್ತಿದೆ. ಈ ಸಾಧನವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.
ಇದರೊಂದಿಗೆ ಬೆಲೆ ಬಗ್ಗೆ ನೋಡುವುದಾದರೆ Moto E7 Power ಫೋನ್ 3GB+32GB ರೂಪಾಂತರ 7,499 ರೂಗಳಾದರೆ ಇದರ 4GB+64GB ರೂಪಾಂತರ 8,299 ರೂಗಳಾಗಿವೆ. ಈ ಸ್ಮಾರ್ಟ್‌ಫೋನ್ ಅನ್ನು ಟಹೀಟಿ ಬ್ಲೂ ಮತ್ತು ಕೋರಲ್ ರೆಡ್ ಸೇರಿದಂತೆ ಎರಡು ಬಣ್ಣ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. Moto E7 Power ತನ್ನ ಮೊದಲ ಮಾರಾಟವನ್ನು ಫೆಬ್ರವರಿ 26 ಮಧ್ಯಾಹ್ನ 12:00 ರಂದು ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ನಡೆಸಲಿದೆ.
Motorola Moto E7 Power ಸ್ಮಾರ್ಟ್ಫೋನ್ 6.50 ಇಂಚಿನ ಮ್ಯಾಕ್ಸ್ ವಿಷನ್ HD+ ಡಿಸ್ಪ್ಲೇಯನ್ನು 20: 9 ಆಕಾರ ಅನುಪಾತದೊಂದಿಗೆ ದೊಡ್ಡ ಸ್ಕ್ರೀನ್ ಬಾಡಿಯ ಅನುಪಾತದಲ್ಲಿ ಹೊಂದಿದೆ. ಈ ಫೋನಿನ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾಗೆ ವಾಟರ್‌ಡ್ರಾಪ್ ನಾಚ್ ಇದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಹೆಲಿಯೊ G25 ಆಕ್ಟಾ-ಕೋರ್ ಪ್ರೊಸೆಸರ್ ಜೊತೆಗೆ 4GB LPDDR4x RAM ಮತ್ತು 64GB ಆಂತರಿಕ ಸಂಗ್ರಹವಿದೆ ಇದನ್ನು ಮೈಕ್ರೊ SD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.
ಕ್ಯಾಮೆರಾ ವಿಭಾಗದಲ್ಲಿ ಸ್ಮಾರ್ಟ್ಫೋನ್ ಕ್ಯಾಪ್ಸುಲ್ ಆಕಾರದ ಕ್ಯಾಮೆರಾವನ್ನು ಹೊಂದಿದೆ. ಅದು ಡ್ಯುಯಲ್ ಕ್ಯಾಮೆರಾ ಸೆನ್ಸರ್ ಅನ್ನು ಒಳಗೊಂಡಿದೆ. ಕ್ಯಾಮೆರಾ ಸೆನ್ಸರ್ ಅನ್ನು PDAF ನೊಂದಿಗೆ 13MP + 2MP ಮುಖ್ಯ ಕ್ಯಾಮೆರಾವನ್ನು ಒಳಗೊಂಡಿವೆ. ಮತ್ತು ದ್ವಿತೀಯ ಮ್ಯಾಕ್ರೋ ವಿಷನ್ ಲೆನ್ಸ್ ಇದ್ದು 4x ಡಿಜಿಟಲ್ ಜೂಮ್ ಹೊಂದಿದೆ. ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.
ಹಿಂಭಾಗದಲ್ಲಿ ಸ್ಪಂದಿಸುವ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಿದ್ದು ಸಂಪರ್ಕಕ್ಕಾಗಿ Moto E7 Power 2×2 MIMO ವೈ-ಫೈ ನೆಟ್‌ವರ್ಕ್ ಬೆಂಬಲ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಯುಎಸ್‌ಬಿ ಟೈಪ್-ಸಿ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ 5000 mAh ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಹೋಗಬಹುದು ಎಂದು ಕಂಪನಿ ಹೇಳಿಕೊಂಡಿದೆ.