Jio Cloud Laptop: ಜಿಯೋದಿಂದ ಕ್ಲೌಡ್ ಲ್ಯಾಪ್‌ಟಾಪ್ ಕೇವಲ ₹15,000 ರೂಗಳಿಗೆ ಬಿಡುಗಡೆಯಾಗುವ ನಿರೀಕ್ಷೆ!

Updated on 21-Feb-2024
HIGHLIGHTS

ಹೊಸ Jio Cloud PC ಲ್ಯಾಪ್‌ಟಾಪ್ ಕೇವಲ ₹15,000 ರೂಗಳಿಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ.

ಈ ಮುಂಬರುವ ಜಿಯೋ ಕ್ಲೌಡ್ ಲ್ಯಾಪ್‌ಟಾಪ್‌ನ ಬೆಲೆ ಅದಕ್ಕಿಂತ ಕಡಿಮೆಯಾಗಿದೆ ಎಂಬುದು ಗಮನಾರ್ಹವಾಗಿದೆ.

ಎಲ್ಲಾ ಸಿಸ್ಟಮ್ ಪ್ರೊಸೆಸಿಂಗ್ ಜಿಯೋ ಕ್ಲೌಡ್ ಪಿಸಿಯಲ್ಲಿ ಮಾಡಲಾಗುತ್ತಿದ್ದು ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್ ಪಡೆಯಲು ಬೆಸ್ಟ್ ಅವಕಾಶ

ರಿಲಯನ್ಸ್ ಜಿಯೋ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯಲ್ಲಿ ಮತ್ತೊಂದು ಹೊಸ Jio Cloud Laptop ಲ್ಯಾಪ್‌ಟಾಪ್ ಅನ್ನು ತರಲಿದೆ. ಈ ಜಿಯೋ ಕ್ಲೌಡ್ ಲ್ಯಾಪ್‌ಟಾಪ್ ಕೇವಲ ₹15,000 ರೂಗಳಿಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ನ ಪ್ರಯೋಗಗಳು ಭಾರಿ ಅದ್ದೂರಿಯಾಗಿ ನಡೆಯುತ್ತಿದ್ದು ಜಿಯೋದಿಂದ ಬರುವ ಎರಡನೇ ಲ್ಯಾಪ್‌ಟಾಪ್ ಇದಾಗಲಿದೆ. ಈ ಮೊದಲು ಕಳೆದ ಜುಲೈನಲ್ಲಿ JioBook ಹೆಸರಿನ ಲ್ಯಾಪ್‌ಟಾಪ್ ಅನ್ನು ಕಂಪನಿ ಕೇವಲ 16,400 ರೂಗಳಿಗೆ ಬಿಡುಗಡೆಗೊಳಿಸಿತ್ತು. ಮುಂಬರುವ ಜಿಯೋ ಕ್ಲೌಡ್ ಲ್ಯಾಪ್‌ಟಾಪ್‌ನ ಬೆಲೆ ಅದಕ್ಕಿಂತ ಕಡಿಮೆಯಾಗಿದೆ ಎಂಬುದು ಗಮನಾರ್ಹ.

Also Read: OnePlus AI Music Studio: ಕೆಲವೇ ನಿಮಿಷಗಳಲ್ಲಿ ನಿಮ್ಮದೇ ಹಾಡನ್ನು ರಚಿಸಿ ಅತ್ಯಾಕರ್ಷಕ ಬಹುಮಾನ ಗೆಲ್ಲಿ!

ರಿಲಯನ್ಸ್ ಜಿಯೋ ಬಳಕೆದಾರರಿಗೆ Jio Cloud Laptop

ಸಾಮಾನ್ಯವಾಗಿ ಲ್ಯಾಪ್‌ಟಾಪ್‌ನ ಬೆಲೆಯನ್ನು ಅದರಲ್ಲಿರುವ ಸ್ಟೋರೇಜ್, ಪ್ರೊಸೆಸರ್, ಚಿಪ್‌ಸೆಟ್, ಬ್ಯಾಟರಿ ಮತ್ತು ಇತರ ಹಾರ್ಡ್‌ವೇರ್ ಘಟಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವುಗಳ ಬೆಲೆ ಹೆಚ್ಚಾದರೆ ಲ್ಯಾಪ್‌ಟಾಪ್‌ನ ಬೆಲೆಯೂ ಹೆಚ್ಚಾಗುತ್ತದೆ. ಆದ್ದರಿಂದ ಈ ವೆಚ್ಚವನ್ನು ಕಡಿಮೆ ಮಾಡಲು Jio Cloud PC ಅನ್ನು ತರಲಾಗುತ್ತಿದೆ. ಎಲ್ಲಾ ಸಿಸ್ಟಮ್ ಪ್ರೊಸೆಸಿಂಗ್ ಅನ್ನು ಜಿಯೋ ಕ್ಲೌಡ್ ಪಿಸಿಯಲ್ಲಿ ಮಾಡಲಾಗುತ್ತದೆ. ಆದ್ದರಿಂದ ಬಳಕೆದಾರರು ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್ ಪಡೆಯಬಹುದು ಎಂದು ಅಧಿಕಾರಿ ಹೇಳಿದ್ದಾರೆ.

Jio Cloud Laptop ಮಾಸಿಕ ಚಂದಾದಾರಿಕೆ ಯೋಜನೆಗಳು:

ಕಂಪನಿಯು ಜಿಯೋ ಕ್ಲೌಡ್ ಪಿಸಿಗಾಗಿ ಮಾಸಿಕ ಚಂದಾದಾರಿಕೆ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಬಳಕೆದಾರರು ಹೆಚ್ಚುವರಿ ಲ್ಯಾಪ್‌ಟಾಪ್ ಬಯಸದಿದ್ದರೆ ಅವರು ತಮ್ಮ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್ ಟಿವಿಗಳಲ್ಲಿ ಜಿಯೋ ಕ್ಲೌಡ್ ಪಿಸಿ ಸಾಫ್ಟ್‌ವೇರ್ ಅನ್ನು ಸ್ಥಾಪಿಸಬಹುದು ಮತ್ತು ಕಂಪ್ಯೂಟಿಂಗ್ ಸೇವೆಯನ್ನು ಬಳಸಬಹುದು. ಈ ಚಂದಾದಾರಿಕೆಯ ಭಾಗವಾಗಿ ಕಂಪನಿಯು ಇನ್ನೂ ಯಾವುದೇ ಹೆಚ್ಚಿನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಗಳನ್ನು ಅಧಿಕೃತವಾಗಿ ನೀಡಿಲ್ಲದ ಕಾರಣ ಅದಕ್ಕಾಗಿ ನಾವಿನ್ನು ಕೊಂಚ ಸಮಯ ಕಾಯಲೇಬೇಕು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :