UPI ID Deactivation: ನೀವು ಭಾರತದಲ್ಲಿ UPI ಸೇವೆಗಳನ್ನು ಬಳಸುತ್ತಿದ್ದರೆ ಈ ಹೊಸ NPCI ನಿಯಮವನ್ನು ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ಯುಪಿಐ ಐಡಿಯನ್ನು ಶಾಶ್ವತವಾಗಿ ಬಂದ್ ಆಗುವ ಸಾಧ್ಯತೆಗಳಿವೆ. ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಒಂದಲ್ಲ ಒಂದು ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಲು UPI ಸೇವೆಯನ್ನು ಬಳಸುತ್ತಿದ್ದರೆ ನೀವು ಖಂಡಿತವಾಗಿಯೂ ಗಮನ ಹರಿಸಬೇಕಾದ ಸುದ್ದಿ ಇದಾಗಿದೆ. ಬಳಸದೆ ಇರುವ UPI ಐಡಿಗಳನ್ನು ಬಂದ್ ಮಾಡಲು NPCI ಹೊಸ ಪ್ರಸ್ತಾವನೆಯ ನಿಯಮವನ್ನು ತಂದಿದೆ.
Also Read: Jio AirFiber: ಜಿಯೋದ ಈ ಬೆಸ್ಟ್ ಪ್ಲಾನ್‌ಗಳಲ್ಲಿ FREE ನೆಟ್‍ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಲಭ್ಯ!
ನಿಮ್ಮ UPI ಐಡಿಯು ಸಾಮಾನ್ಯವಾಗಿ Google pay, PhonePe, Paytm, Amazon Pay, Airtel Pay ಮತ್ತು JioMoney ಇತ್ಯಾದಿಗಳನ್ನು ಬಳಸುತ್ತಿರಬಹುದು.ಈ ಐಡಿಯಲ್ಲಿ ನೀವು ಇನ್ನೂ ಯಾವುದೇ ವಹಿವಾಟುಗಳನ್ನು ಮಾಡದಿದ್ದರೆ ತಕ್ಷಣವೇ ಮಾಡಿಕೊಳ್ಳಿ ಇಲ್ಲವಾದರೆ ಈ ಐಡಿಯನ್ನು 31ನೇ ಡಿಸೆಂಬರ್ 2023 ನಂತರ ಬಂದ್ ಮಾಡಲಾಗುತ್ತದೆ. ಈ ಹೊಸ ಪ್ರಸ್ತಾಪವು NPCI (National Payments Corporation of India ) ಮೂಲಕ ಈ ಹೊಸ ನಿಯಮ ಜಾರಿಯಾಗಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟುಗಳಿಲ್ಲದ UPI ಐಡಿಗಳನ್ನು ನಿರ್ಬಂಧಿಸುವುದು ಈ ಕ್ರಮವಾಗಿದೆ. ಇದಕ್ಕಾಗಿ NPCI ಎಲ್ಲಾ ಬ್ಯಾಂಕ್‌ಗಳು ಮತ್ತು ಸಾಮಾನ್ಯವಾಗಿ Google pay, PhonePe, Paytm, Amazon Pay, Airtel Pay ಮತ್ತು JioMoney ಇತ್ಯಾದಿಗಳಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ನಿರ್ದೇಶಿಸಿದೆ. ಅಧಿಕಾರಿಗಳು ಯುಪಿಐ ಬಳಸದವರಿಗೆ ನಿರ್ದಿಷ್ಟ ಸಮಯವನ್ನು ಅನುಮತಿಸಿದ್ದಾರೆ. ಈ UPI ಐಡಿಯನ್ನು ನಿಷ್ಕ್ರಿಯಗೊಳಿಸಲು NPCI ಈ ಹೊಸ ವಿಧಾನವನ್ನು ಇಲ್ಲಿ ವಿವರವಾಗಿ ವಿವರಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ಯಾವುದೇ ವಹಿವಾಟು ನಡೆಸದ UPI ಐಡಿಗಳನ್ನು 31ನೇ ಡಿಸೆಂಬರ್ 2023 ನಂತರ ನಿರ್ಬಂಧಿಸಲಾಗುತ್ತದೆ. ನೀವು UPI ಐಡಿಯನ್ನು ಬಳಸಿಕೊಂಡು ಹಣವನ್ನು ವರ್ಗಾಯಿಸದಿದ್ದರೆ ಅಥವಾ ಸ್ವೀಕರಿಸದಿದ್ದರೆ ಅಂತಹ UPI ಐಡಿಯನ್ನು ಬಂದ್ ಮಾಡಲಾಗುತ್ತದೆ. ಆದ್ದರಿಂದ ನೀವು ದೀರ್ಘಕಾಲದವರೆಗೆ ಬಳಸದ ಯಾವುದೇ UPI ಐಡಿಯನ್ನು ಹೊಂದಿದ್ದರೆ ತಕ್ಷಣವೇ ಯಾವುದೇ ರೀತಿಯ ಪಾವತಿಯನ್ನು ಮಾಡಿಕೊಳ್ಳಿ ಈ ರೀತಿಯಲ್ಲಿ ನೀವು ಆ UPI ಐಡಿಯನ್ನು ಬಂದ್ ಆಗುವುದರಿಂದ ತಪ್ಪಿಸಬಹುದು.
ಬಳಕೆಯಲ್ಲಿಲ್ಲದ UPI ಐಡಿಗಳನ್ನು ಗುರುತಿಸಲು NPCI ಈ ವರ್ಷದ ಅಂತ್ಯದವರೆಗೆ ದೇಶದ ಎಲ್ಲಾ ಬ್ಯಾಂಕ್ ಮತ್ತು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಿಗೆ ಈಗಾಗಲೇ ನಿಯಮದ ಮಾಹಿತಿಗಳನ್ನು ನೀಡಿದೆ. NPCI ಹೊಸ ಮಾರ್ಗಸೂಚಿಗಳ ಪ್ರಕಾರ UPI ಐಡಿ ಮತ್ತು ಅದಕ್ಕೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಎಲ್ಲಾ ಥರ್ಡ್ ಪಾರ್ಟಿ ಪೇಮೆಂಟ್ ಅಪ್ಲಿಕೇಶನ್‌ಗಳು ಮತ್ತು PSP ಬ್ಯಾಂಕ್‌ಗಳು ಪರಿಶೀಲಿಸುತ್ತವೆ. ಒಂದು ವೇಳೆ ಯಾವುದೇ ನಂಬರ್ ಅಥವಾ ಖಾತೆಗಳು ಲಿಂಕ್ ಆಗದಿದ್ದರೆ ನಿಮಗೆ ಇದರ ಮೆಸೇಜ್ ಬರುವ ಸಾಧ್ಯತೆಗಳಿವೆ. ಎಲ್ಲವಾದರೆ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಒಮ್ಮೆ ಭೇಟಿ ನೀಡಬಹುದು.
ನಿರ್ದಿಷ್ಟ ಸಮಯದೊಳಗೆ ಬಳಕೆದಾರರಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸದಿದ್ದರೆ, UPI ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿಯಲ್ಲಿ ನಿಷ್ಕ್ರಿಯಗೊಳಿಸಲಾದ UPI ಐಡಿಗಳು ಮತ್ತು UPI ಸಂಖ್ಯೆಗಳು ನಂತರ ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಇತರ ಜನರು ಈ ಐಡಿಗಳಿಗೆ ಹಣವನ್ನು ಕಳುಹಿಸಿದರೆ ಅದನ್ನು ಸ್ವೀಕರಿಸಲು ಅಥವಾ ನಿಮಗೆ ಹಣವನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ಡಿಜಿಟಲ್ ಪಾವತಿಗಳನ್ನು ಹೆಚ್ಚು ಸ್ಟೇಎಬಲ್ ಮತ್ತು ತಡೆರಹಿತವಾಗಿ ಮಾಡುವುದು ಇದರ ಗುರಿಯಾಗಿದೆ ಎಂದು ಭಾರತೀಯ ಪಾವತಿ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಪಟೇಲ್ ಹೇಳಿದ್ದಾರೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ