ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮತ್ತೊಂಮ್ಮೆ ದಿನಾಂಕ ವಿಸ್ತರಿಸಲಾಗಿದೆ.

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮತ್ತೊಂಮ್ಮೆ ದಿನಾಂಕ ವಿಸ್ತರಿಸಲಾಗಿದೆ.
HIGHLIGHTS

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ವರ್ಷದ ಕೊನೆವರೆಗೆ ಡಿಸೆಂಬರ್ 31 ಕೊನೆ ದಿನವಾಗಿತ್ತು ಆದರೆ ಈಗ ಇದರ ವಿಸ್ತರಣೆ ಮುಂದೂಡಲಾಗಿದೆ.

ಭಾರತ ಸರ್ಕಾರದಿಂದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮತ್ತೊಂಮ್ಮೆ ದಿನಾಂಕ ವಿಸ್ತರಿಸಲಾಗಿದೆ. ಹೌದು ಈಗ ಹೊಸ ವರ್ಷದಲ್ಲಿ ಮಾರ್ಚ 2020 ಒಳಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಂತಹ ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆಂದು ಸರ್ಕಾರ ತಿಳಿಸಿದೆ. ಹೌದು ಭಾರತ ಸರ್ಕಾರ ಈ ಎಚ್ಚರಿಕೆಯನ್ನು ಪುನಃ ಇಂದು ನೀಡಿದೆ ಏನಪ್ಪಾ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೊತೆಗೆ ಇನ್ನು ಲಿಂಕ್ ಮಾಡಿಲ್ವಾ?

ಹಾಗಾದರೆ ಮಾರ್ಚ್ 2020 ಕೊನೆಯ ದಿನಾಂಕವಂತೆ ನಿವೇನಾದರೂ ಮಾರ್ಚ 2020 ಒಳಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಹೋದರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗಲಿದೆ. ಇದನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ಅಡಿಯಲ್ಲಿ ಆಧಾರ್​​​ ನೊಂದಿಗೆ ಜೋಡಣೆಯಾಗದ ಪ್ಯಾನ್ ಸಂಖ್ಯೆಯನ್ನು ಅಮಾನ್ಯ ಎಂದು ಅಧಿಕೃತವಾಗಿ ಪರಿಗಣಿಸಲಾಗುತ್ತದೆ.

ಈ ಮೂಲಕ ಕಂದಾಯ ತೆರಿಗೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಿಂದ ತೆರಿಗೆ ಮರುಪಾವತಿ ಸಮಸ್ಯೆ ಉಂಟಾಗಲಿದೆ. ಹಾಗೆಯೇ ಪ್ಯಾನ್ ಕಾರ್ಡ್ ಇನ್ವಾಲಿಡ್ ಅಂದ್ರೆ ಅಮಾನ್ಯವಾಗಲಿದೆ ಎಂದು ತಿಳಿಸಲಾಗಿದೆ. ಆದ್ದರಿಂದ ನೀವಿನ್ನು ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಇನ್ನು ಲಿಂಕ್ ಮಾಡಿಲ್ಲವಾದರೆ ಕೂಡಲೇ ಈ ಕೆಳಗಿನ ಮಾಹಿತಿಯನ್ನು ಅನುಸರಿಸಿ ಲಿಂಕ್ ಮಾಡಿಕೊಳ್ಳಿ.

-ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ www.incometaxindiaefiling.gov.in ಲಾಗಿನ್ ಆಗಿ. ಆ ಬಳಿಕ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.

ಇದಾದ ಮೇಲೆ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ.

-ಆ ನಂತರ ನಿಮ್ಮ ಹೆಸರು, ಜನ್ಮ ದಿನಾಂಕ ಇತ್ಯಾದಿಗಳನ್ನು ತಪ್ಪಿಲ್ಲದೇ ನಮೂದಿಸಿ. ಇದಾದ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ಸಾಕು.

-ಇದಾದ ಮೇಲೆ UIDAI ನಿಂದ ವೆರಿಫಿಕೇಶನ್ ಆದ ಬಳಿಕ ಆಧಾರ್-ಪ್ಯಾನ್ ಲಿಂಕ್ ಆಗಲಿದೆ.

SMS ಮೂಲಕ ಲಿಂಕ್ ಮಾಡೋದೇಗೆ? 
-ಇನ್ನು SMS ಕಳುಹಿಸುವ ಮೂಲಕ ಕೂಡ ಆಧಾರ್-ಪ್ಯಾನ್ ಲಿಂಕ್ ಮಾಡಬಹುದು.

-ನಿಮ್ಮ ಮೊಬೈಲ್ನಲ್ಲಿ UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ನಿಮ್ಮ 12 ಡಿಜಿಟ್ ಆಧಾರ್ ನಂಬರ್ ನಮೂದಿಸಿ. ಆ ಬಳಿಕ ಸ್ಪೇಸ್ ಕೊಟ್ಟು 10 ಸಂಖ್ಯೆ ಪ್ಯಾನ್ ನಂಬರ್ ನಮೂದಿಸಿ.

-ಈ SMS ಅನ್ನು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ನಿಂದ 567678 ಅಥವಾ 56161 ನಂಬರ್ಗೆ ಕಳುಹಿಸಿದರೆ ಆಧಾರ್-ಪ್ಯಾನ್ ಸಂಖ್ಯೆಗಳು ಲಿಂಕ್ ಆಗಲಿವೆ.

ಈ ಮೊದಲು ಭಾರತ ಸರ್ಕಾರ ಗ್ರಾಹಕರಿಗೆ ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಜೋಡನೆ ಮಾಡಲು 30ನೇ ಜೂನ್ 2019 ರವರೆಗೆ ಸಮಯ ನೀಡಲಾಗಿತ್ತು. ಆದರೆ ಮಾಹಿತಿ ಕೊರತೆಯಿಂದಾಗಿ ಹೆಚ್ಚಿನವರು ಲಿಂಕ್ ಮಾಡಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಅಧಾರ್ ಮತ್ತು ಪ್ಯಾನ್ ಸಂಖ್ಯೆ ಜೋಡನೆಗೆ ಮಾರ್ಚ್ 31 ವರೆಗೆ ಗಡುವು ನೀಡಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಗಡುವು ವಿಸ್ತರಿಸಿದ ಸರ್ಕಾರ ಹೊಸ ವರ್ಷದೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡುವಂತೆ ಸೂಚಿಸಿದೆ. ಅಂದ್ರೆ ಮಾರ್ಚ್ 2020 ಕಡೆಯ ದಿನವೆಂದು ತಿಳಿಸಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo