ನಿಮ್ಮ ಫೋನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ Paytm ನಿಂದ ಪಾವತಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Updated on 03-Feb-2022
HIGHLIGHTS

ಸ್ನೇಹಿತರೇ ನಿಮಗೊತ್ತಾ NFC ಮೂಲಕ ಪಾವತಿಸುವ Paytm ಸೇವೆಯು ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಕಾರ್ಯನಿರ್ವಹಿಸುತ್ತದೆ.

NFC ಬೆಂಬಲಿತ Tap to Pay ವೈಶಿಷ್ಟ್ಯವು Apple Pay ಮೂಲಕ iPhone ಬಳಕೆದಾರರಿಗೆ ಮಾತ್ರ ಪ್ರವೇಶಿಸಬಹುದಾಗಿದೆ.

ಅಪ್ಲಿಕೇಶನ್ ತೆರೆಯುವ ಮೊದಲು ನೀವು Google Play Store ಗೆ ಹೋಗಿ ಮತ್ತು ಅದನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು.

ಸ್ನೇಹಿತರೇ ನಿಮಗೊತ್ತಾ NFC ಮೂಲಕ ಪಾವತಿಸುವ Paytm ಸೇವೆಯು ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಕಾರ್ಯನಿರ್ವಹಿಸುತ್ತದೆ. ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲು ಪೇಟಿಎಂ ವರ್ಚುವಲ್ ಕಾರ್ಡ್ ಟ್ಯಾಪ್ ಟು ಪೇ ಫೀಚರ್ ಅನ್ನು ಪರಿಚಯಿಸಿದೆ. ಈ Paytm ಪಾವತಿ ಸೇವೆಯು ಬಳಕೆದಾರರು ತಮ್ಮ PoS ಯಂತ್ರದಲ್ಲಿ ತಮ್ಮ ಫೋನ್ ಅನ್ನು ಟ್ಯಾಪ್ ಮಾಡುವ ಮೂಲಕ ತಮ್ಮ Paytm ನೋಂದಾಯಿತ ಕಾರ್ಡ್ ಮೂಲಕ ತ್ವರಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಈ ಸೇವೆಯು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.

NFC ಬೆಂಬಲಿತ Tap to Pay ವೈಶಿಷ್ಟ್ಯವು Apple Pay ಮೂಲಕ iPhone ಬಳಕೆದಾರರಿಗೆ ಮಾತ್ರ ಪ್ರವೇಶಿಸಬಹುದಾಗಿದೆ. ಇದು ಪ್ರಸ್ತುತ ಭಾರತದಲ್ಲಿ ಲಭ್ಯವಿಲ್ಲ. ಈ ಸಂದರ್ಭದಲ್ಲಿ ನೀವು Android ಬಳಕೆದಾರರಾಗಿದ್ದರೆ ಮತ್ತು ನಿಮ್ಮ ಫೋನ್‌ನಲ್ಲಿ ಟ್ಯಾಪ್ ಟು ಪೇ ಫೀಚರ್ ಅನ್ನು ಬಳಸಲು ಬಯಸಿದರೆ ಇದಕ್ಕಾಗಿ ಸಂಪೂರ್ಣ ಕಾರ್ಯವಿಧಾನ ಇಲ್ಲಿದೆ. ಇದಕ್ಕಾಗಿ ನೀವು ಮೊದಲು Paytm ಆಪ್ ಅನ್ನು ತೆರೆಯಬೇಕು. ಅಪ್ಲಿಕೇಶನ್ ತೆರೆಯುವ ಮೊದಲು ನೀವು Google Play Store ಗೆ ಹೋಗಿ ಮತ್ತು ಅದನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು.

ಪೇಟಿಎಂ ಟ್ಯಾಪ್ ಟು ಪೇ (Paytm Tap to Pay) ಫೀಚರ್:

ಹಂತ 1: ಮೊದಲನೆಯದಾಗಿ ನೀವು Paytm ನಲ್ಲಿ ಪಟ್ಟಿ ಮಾಡಲಾದ ಕಾರ್ಡ್‌ನಲ್ಲಿ ಉಳಿಸಿದ ಕಾರ್ಡ್ ಅನ್ನು ಆಯ್ಕೆ ಮಾಡಬೇಕು ಅಥವಾ ಹೋಮ್ ಸ್ಕ್ರೀನ್‌ನಲ್ಲಿರುವ ಆಡ್ ಟ್ಯಾಪ್ ಟು ಪೇ ಕಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 2: ಇದರ ನಂತರ ವಿನಂತಿಸಿದ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕು. ತದನಂತರ ನೀವು ಪಾವತಿಸಲು ಟ್ಯಾಪ್ ಮಾಡಲು ಸೇವಾ ನಿಯಮಗಳನ್ನು ಒಪ್ಪಿಕೊಳ್ಳಬೇಕು.

ಹಂತ 3: ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಮೇಲ್ ಐಡಿಗೆ OTP ಕಳುಹಿಸಲಾಗುತ್ತದೆ.

ಹಂತ 4: OTP ಪಡೆದ ನಂತರ ನೀವು ಅದನ್ನು ಪರಿಶೀಲಿಸಬೇಕು.

ಹಂತ 5: ಈ ರೀತಿಯಾಗಿ ನಿಮ್ಮ Paytm ನಲ್ಲಿ ಟ್ಯಾಪ್ ಟು ಪೇ ವೈಶಿಷ್ಟ್ಯದಲ್ಲಿ ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

ಇದರ ನಂತರ ನೀವು ಇಂಟರ್ನೆಟ್ ಸಂಪರ್ಕವಿಲ್ಲದೆ ಪೇಟಿಎಂ ಮೂಲಕ ಹಣವನ್ನು ವರ್ಗಾಯಿಸಬಹುದು. ಟಾಪ್ ಟು ಪೇ ವೈಶಿಷ್ಟ್ಯವನ್ನು ಬಳಸಲು ನಿಮ್ಮ ಫೋನ್ NFC ಅನ್ನು ಆನ್ ಮಾಡಿರಬೇಕು. ಇದರೊಂದಿಗೆ ವರ್ಗಾವಣೆಯ ಗರಿಷ್ಠ ಮಿತಿ ರೂ.5000 ಆಗಿದೆ. 5 ಸಾವಿರ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆದರೆ ನೀವು ಪಿಒಎಸ್ ಯಂತ್ರದಲ್ಲಿ ಪಿನ್ ಅನ್ನು ಹಾಕಬೇಕು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :