ಇದರ ಹಿಂಭಾಗ ಜಾರುವ ಭಯದಿಂದ ದೂರವಿಡುತ್ತದೆ. ಇದರ ಹಿಂದೆ POCO ಲೋಗೋ ಕೆಳಗೆ ಒಂದು ಸಣ್ಣ ಚುಕ್ಕೆ ನೀಡಲಾಗಿದೆ.
ಈ ಹೊಚ್ಚ ಹೊಸ POCO F1 ಮುಖ್ಯವಾಗಿ ಸ್ಪೀಡನ್ನು ನೋಡುತ್ತದೆ. ಇದರಲ್ಲಿ ನಿಮಗ್ ಸ್ನ್ಯಾಪ್ಡ್ರಾಗನ್ 845 ಚಿಪ್ಸೆಟನ್ನು ಒಳಗೊಂಡಿದೆ. ಇದರಿಂದಾಗಿ ಸ್ಪೀಡ್ ಒಂದು ರೀತಿಯಲ್ಲಿ ಗ್ಯಾರಂಟಿ ಎನ್ನಬವುದು. ಇದರಲ್ಲಿ ಪ್ರತ್ಯೇಕವಾದ ಕೂಲಿಂಗ್ ಮೆಕಾನಿಸಮ್ ಫೋನನ್ನು ತಂಪಾಗಿಡಲು ಮತ್ತು ಬೆಸ್ಟ್ ಪರ್ಫಾರ್ಮೆನ್ಸ್ ಗಾಗಿ ಅಳವಡಿಸಲಾಗಿದೆ. ಈ POCO F1 ನಿಜಕ್ಕೂ ಅದ್ದೂರಿಯ ಡಿಸೈನ್ ಬಾಡಿ ವಿನ್ಯಾಸವನ್ನು ಹೊಂದಿದೆ. ಇದು ಯಾವುದೇ ರೀತಿಯ ಮೆಟಲ್ ಬಾಡಿ ಹೊಂದಿಲ್ಲ ಇದು Xiaomi ಫೋನ್ಗಳಲ್ಲಿ ಸಾಮಾನ್ಯವಾಗಿದ್ದು ಇದನ್ನು ಪೋಲಿ ಕಾರ್ಬನ್ ಮೆಟಿರಿಯಲ್ಗಳಿಂದ ತಯಾರಿಸಲಾಗಿದೆ. ಇದರ ಹಿಂಭಾಗ ಜಾರುವ ಭಯದಿಂದ ದೂರವಿಡುತ್ತದೆ. ಇದರ ಹಿಂದೆ POCO ಲೋಗೋ ಕೆಳಗೆ ಒಂದು ಸಣ್ಣ ಚುಕ್ಕೆ ನೀಡಲಾಗಿದೆ ಆದ್ರೆ ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಇದರ ಫ್ರಂಟ್ ಬಗ್ಗೆ ಹೇಳಬೇಕೆಂದರೆ ಇದರಲ್ಲಿ ನಿಮಗೆ ಆಕರ್ಷಣೀಯ ನಾಚ್ ಬರುತ್ತದೆ. ಇದು ಒಂದು ರೀತಿಯಲ್ಲಿ iPhone 10 ರಂತೆ ಕಾಣುತ್ತದೆ. ಇದರಲ್ಲಿ IR ಸೆನ್ಸರ್ ಸಹ ನೀಡಲಾಗಿದೆ. ಇದರ ಮೂಲಕ ನೀವು ಫೇಸ್ ಅನ್ಲೋಕ್ ಮಾಡಬವುದು. ಈ ಫೀಚರ್ ಲೊ ಲೈಟಲ್ಲು ಸಹ ಅದ್ದೂರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರ ಬಾಡಿ ಹೆಚ್ಚು ಕಾಂಪ್ಯಾಕ್ಟ್ ಆಗಿದ್ದು ಇದರ ಹಿಂಭಾಗದಲ್ಲಿ ನಿಮಗೆ 4000mAh ಬ್ಯಾಟರಿ ಒಳಗೊಂಡಿದೆ. ಈ ರೀತಿಯ ಫೋನ್ಗಳು ಇಂದಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ಇದರ ಡಿಸ್ಪ್ಲೇ ಬಗ್ಗೆ ಹೇಳಬೇಕೆಂದರೆ ಇದರಲ್ಲಿ ನಿಮಗೆ 6.18 ಇಂಚಿನ IPS ಫುಲ್ HD+ ಡಿಸ್ಪ್ಲೇ ಪ್ಯಾನಲ್ ಜೋತೆಯಲ್ಲಿ 19:9 ಅಸ್ಪೆಟ್ ರೇಷುವಿನೊಂದಿಗೆ ಬರುತ್ತದೆ. ಅಲ್ಲದೆ ನಿಮಗೆ ಇದರ ಮೇಲೆ ಕಾರ್ನಿಂಗ್ ಗೋರಿಲ್ಲಾ 3 ಸ್ಕ್ರೀನ್ ಪ್ರೊಟೆಕ್ಷನ್ ಸಹ ಬರುತ್ತದೆ.
ಈ ಹೊಸ POCO F1 ಹೆಚ್ಚಾಗಿ ಸ್ಪೀಡ್ ಫೀಚರ್ ಬಗ್ಗೆ ಗಮನ ಹರಿಸುವ ಸಲುವಾಗಿ ಇದರ ಬೆಂಚ್ಮಾರ್ಕ್ ಸಹ ನಾವು ಇಲ್ಲಿ ನೀಡಿದ್ದೇವೆ. ಇದರಲ್ಲಿ ಗಮನದಲ್ಲಿಡಬೇಕಾದ ಅಂಶಗಳೆಂದರೆ ಇದರ ಎಲ್ಲಾ ಟೆಸ್ಟ್ ಗಳು 35,000 ಬೆಲೆಯ OnePlus 6 ಫೋನಿಗೆ ಸೈಡ್ ಹೊಡೆದಿದೆ. AnTuTu ನಲ್ಲಿ 265754 ಸ್ಕೋರ್ ಮಾಡಿದರೆ ಇದರ ಗೀಕ್ಬೇಂಚಲ್ಲಿ ಸಿಂಗಲ್ ಕೊರ್ ಟೆಸ್ಟ್ 2467 ಮತ್ತು ಮಲ್ಟಿ ಕೋರ್ ಟೆಸ್ಟ್ 9009 ಸ್ಕೋರ್ ಮಾಡಿದೆ. ಇದರ ಚಿಪ್ಸೆಟ್ ಬಗ್ಗೆ ಮಾತನಾಡಿದರೆ ಇದರಲ್ಲಿ 8GB ಯ RAM ಮತ್ತು 128GB ಯ ಸ್ಟೋರೇಜ್ಗಳ ವರೆಗೆ ಲಭ್ಯವಿದೆ. ನಮ್ಮ ರಿಯಲ್ ಲೈಫಲ್ಲಿ ಇದರ ಬಳಕೆಯ ಅನುಭವ ಹೇಳಬೇಕೆಂದರೆ ನಿಜಕ್ಕೂ ಯಾವುದೇ ಅಪ್ಲಿಕೇಶನ್ ಓಪನ್ ಆಗಲು ಟೈಮ್ ತಗೋಳೋಲ್ಲ. ಇದರಲ್ಲಿ ಈಗಾಗಲೇ ನಾವು ಮೊಬೈಲ್ Pub G ಯಂತಹ ಗೇಮ್ಗಳನ್ನು ಆಡಿದೆ ಅದರಲ್ಲೂ ಯಾವುದೇ ದೂರುಗಳಿಲ್ಲ.
ಅರ್ಧ ಘಂಟೆ ಆಡಿದ ಮೇಲು OnePlus 6 ನಂತೆ ಈ POCO F1 ಫೋನಲ್ಲಿ ಯಾವುದೇ ಬಿಸಿಯಾಗುವ ಅನುಭವ ನೋಡಿಲ್ಲ. ಈಗಾಗಲೇ ಹೇಳಿರುವಂತೆ ಇದರಲ್ಲಿ ಪ್ರತ್ಯೇಕವಾದ ಲಿಕ್ವಿಡ್ ಕೂಲಿಂಗ್ ಮೆಕಾನಿಸಮ್ ನೀಡಲಾಗಿದೆ. ಇದನ್ನು ನಾವೀಗಾಗಲೇ ಸುಮಾರು 68,000 ರೂಪಾಯಿಯ Sumsung Galaxy Note 9 ಫೋನಲ್ಲಿ ನೋಡಿದ್ದೇವೆ. ಈ ಹೊಸ POCO F1 ಇದರಲ್ಲಿ MIUI 9.5 UI ಬಳಸುತ್ತದೆ. ಇದು ಸ್ಟಾಕ್ ಆಂಡ್ರಾಯ್ಡ್ ಫ್ಯಾನ್ಗಳಿಗೆ ಹೆಚ್ಚು ಮೆಚ್ಚುಗೆಯಾಗಬವುದು. ಇದರಲ್ಲಿ Xiaomi ಮೊತ್ತ ಮೊದಲಿಗೆ ಲಾಂಚರ್ ನೀಡಲಾಗಿದೆ. ಈ ಲಾಂಚರ್ ಬೇರೆ ಯಾರಬೇಕಾದ್ರು ಪ್ಲೇ ಸ್ಟೋರಿಂದ ಈ ತಿಂಗಳ ಕೊನೆವರೆಗೆ ಡೌನ್ಲೋಡ್ ಮಾಡಬವುದು. ಇದರ ಕಸ್ಟೋಮೆಸೇಷನ್ ನಿಮಗೆ ಫಾಸ್ಟರ್ ಆನಿಮೇಷನ್ ಫಾಸ್ಟರ್ ಸ್ವಾಪ್ ಮತ್ತಿತರೇ ಮಾಡಬವುದು. ಇದರಲ್ಲಿ ನಿಮಗೆ ಡುಯಲ್ ವೋಲ್ಟಿ ಮತ್ತು ಡುಯಲ್ 4G ಸಪೋರ್ಟ್ ಮಾಡುತ್ತದೆ. ಇಂದಿನ ದಿನಗಳಲ್ಲಿ ಒಂದು ಅತ್ಯುತ್ತಮವಾದ ಕ್ಯಾಮೆರಾ ಫೋನಿನ ಭವಿಷ್ಯ ತಿಳಿಸುತ್ತದೆ.ಈ ಹೊಸ POCO F1 ಸಹ ಕ್ಯಾಮೆರಾ ವಿಭಾಗದಲ್ಲಿ ಅದ್ದೂರಿಯಾಗಿದೆ.
ಇದರ ಹಿಂಭಾಗದಲ್ಲಿ 12+5MP ಯ IMX 363 ಡ್ಯೂಯಲ್ ಕ್ಯಾಮೆರಾ ಸೆಟಪ್ f/1.8 ಅಪೆರ್ಚರ್ ಲೆನ್ಸ್. ಇದು ನಿಜಕ್ಕೂ ಈ ರೇಂಜಿನ ಫೋನ್ಗಳಲ್ಲಿ ಹೆಚ್ಚಾಗಿದೆ. ಇದರ ಫ್ರಂಟಲ್ಲಿ ನಿಮಗೆ 20MP ಸೆಲ್ಫಿ ಕ್ಯಾಮೆರಾ ನಿಮಗೆ ಲೋ ಲೈಟ್ ಸೆಲ್ಫಿಗಳನ್ನು ಪಡೆಯುವುದರಲ್ಲಿ ಉತ್ತಮವಾಗಿದೆ. ಇದರ ಕ್ಯಾಮೆರಾ ಒಂದು ರೀತಿಯಲ್ಲಿ ಭಾರತದಲ್ಲಿ ಇನ್ನು ಬಿಡುಗಡೆಯಾಗದ Mi 8 ನಲ್ಲಿರುವಂತೆ ರಚಿಸಲಾಗಿದೆ. ನೀವು ಈ POCO F1 ಫೋನಲ್ಲಿ ಡೇ ಲೈಟಲ್ಲಿ ನೀವು ಅದ್ದೂರಿಯ ಫೋಟೋಗಳನ್ನು ಪಡೆಯಬವುದು. ಇದರ ಸ್ಯಾಂಪಲ್ ನೋಡಬವುದು. ಇದರ ಕ್ಯಾಮೆರಾ ನೀವು ಸೆರೆಯಿಡಿಯುವ ವಸ್ತುವಿನ ಬಣ್ಣವನ್ನು ವೇಗವಾಗಿ ಮತ್ತು ಅದ್ದೂರಿಯಾಗಿ ಕ್ಯಾಚ್ ಮಾಡಿ ಆಕರ್ಷಕ ಚಿತ್ರಗಳನ್ನು ನೀಡುತ್ತದೆ. ಇದರ ಲೊ ಲೈಟ್ ಕ್ಯಾಮೆರಾದ ಬಗ್ಗೆ ಹೇಳಬೇಕಾದ್ರೆ ಅಷ್ಟಾಗಿ ಕಳಪೆಯಾಗಿಲ್ಲವಾದರೂ ಸರಿ ಅನ್ನುವ ಫೋಟೋಗಳನ್ನು HDR ಮತ್ತು ಡೈನಾಮಿಕ್ ರೇಂಜಲ್ಲಿ ಪಡೆಯಬವುದು. ಕೊನೆಯದಾಗಿ ಇದರ ಬ್ಯಾಟರಿ ಬಗ್ಗೆ ಮತ್ತೊಂಮ್ಮೆ ಹೇಳಬೇಕಾದ್ರೆ ಇದರಲ್ಲಿ 4000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ PC ಮಾರ್ಕ್ ಬ್ಯಾಟರಿ ಟೆಸ್ಟ್ ನಲ್ಲಿ ಪೂರ್ತಿ ಮಾಡಿದ ಫೋನ್ 11 ಘಂಟೆ 42 ನಿಮಿಷಗಳನ್ನು ನೀಡಿತು. ಈ ಫೋನ್ ನಿಮಗೆ ಕ್ವಿಕ್ v3.0 ಚಾರ್ಜರನ್ನು ಬೆಂಬಲಿಸುತ್ತದೆ. ಇದರ ಬಾಕ್ಸ್ ನಲ್ಲಿ ನಿಮಗೆ ಫಾಸ್ಟ್ ಚಾರ್ಜರ್ ಅಡಾಪ್ಟರ್ ಸಹ ನೀಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile