Xiaomi ಈಗ ಹೊಸದಾಗಿ ಬ್ಯಾಂಡ್ 3 ಅನ್ನು ಪ್ರಕಟಿಸಲು ಕಂಪನಿಯು ಟ್ವಿಟ್ಟರನ್ನು ತೆಗೆದುಕೊಂಡಿದೆ. ಇದು ಈ ವರ್ಷದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಇದರ ಬಗ್ಗೆ ಟ್ವೀಟ್ ಮಾಡಿದ ಪ್ರಕಾರ ಈ ಹೊಸ ಬ್ಯಾಂಡ್ 3 OLED ಡಿಸ್ಪ್ಲೇ ಮತ್ತು ಕೆಪ್ಯಾಸಿಟಿವ್ ಬಟನ್ನೊಂದಿಗೆ ಬರುವ Mi ಬ್ಯಾಂಡ್ 2 ಗೆ ಹೋಲಿಸಿದರೆ ಇದರ ವಿನ್ಯಾಸದ ಅಂಶದಲ್ಲಿ ಹೆಚ್ಚು ಹೋಲುತ್ತದೆ.
ಇದಕ್ಕೂ ಮುಂಚೆ ಬಂದ Mi ಬ್ಯಾಂಡ್ 2 ಕ್ಕಿಂತ ಹೆಚ್ಚು ಈ ಬ್ಯಾಂಡ್ 3 ಬ್ಲೂಟೂತ್ ಪ್ರಮಾಣೀಕರಣದೊಂದಿಗೆ ಬ್ಲೂಟೂತ್ 4.2 BLE ಅನ್ನು ಬೆಂಬಲಿಸುತ್ತದೆಂದು ವರದಿ ಮಾಡಿದೆ. ಇದರ ಬಗ್ಗೆ ಕಂಪನಿಯು ಇತ್ತೀಚೆಗೆ ತನ್ನ ಹೊಸ ಬ್ಲ್ಯಾಕ್ ಶಾರ್ಕ್ ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿದೆ. ಇದರ ಉಡಾವಣೆಯ ಸಮಯದಲ್ಲಿ ಕಂಪನಿಯ CEO ಆದ ಲೀ ಜುನ್ ಈ ಹೊಸ ಬ್ಯಾಂಡ್ನೊಂದಿಗೆ ಗುರುತಿಸಲ್ಪಟ್ಟಿದ್ದರು.
ಇದು ಹೊಸ ಬ್ಯಾಂಡ್ 3 ಆಗಿದ್ದು ಬಿಡುಗಡೆಯ ಸಮಯದಲ್ಲಿ ದೊಡ್ಡ ಸ್ಕ್ರೀನಲ್ಲಿ ತೋರಿಸಲಾಯಿತು. ಆದರೆ ಇದರ ಚಿತ್ರವು ಸ್ಪಷ್ಟವಾಗಿರಲ್ಲಿಲ್ಲ. ಇದರಾರ್ಥ ಹೊಸ Mi ಬ್ಯಾಂಡ್ 3 ಈಗಾಗಲೇ ಉತ್ಪಾದನೆಯಲ್ಲಿದೆ ಎಂದು ಸೂಚಿಸುತ್ತದೆ. ಮತ್ತು ಮಾರುಕಟ್ಟೆಗೆ ಇದೇ ವರ್ಷದಲ್ಲಿ ಬರುವ ನಿರೀಕ್ಷೆಯಿದೆ. ಮತ್ತು ಈ ಚೀನೀ ಉತ್ಪಾದಕರ ಈ ಹೊಸ ಟೀಸರ್ ಅದನ್ನು ಖಚಿತಪಡಿಸುತ್ತದೆ.
ಇದರ ವಿಶೇಷಣಗಳ ಬಗ್ಗೆ ಸಂಪೂರ್ಣ ವಿವರಗಳು ಇನ್ನೂ ತಿಳಿಯಬೇಕಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile