ಈ ಸರಣಿಯಲ್ಲಿ ಎರಡು ಮಾಡೆಲ್‌ಗಳನ್ನು ತಯಾರಿಸಿದ್ದು Xiaomi SU7 ಮತ್ತು Xiaomi SU7Max ಎಂದು ಹೆಸರಿಸಿದೆ.
ಕಂಪನಿ 28 ಡಿಸೆಂಬರ್ 2023 ರಂದು ಮೊದಲ ಎಲೆಕ್ಟ್ರಿಕ್ ವಾಹನವನ್ನು (Electric Car SU7) ಅಧಿಕೃತವಾಗಿ ಘೋಷಿಸಿದೆ.
ಕಂಪನಿಯ ಈ ಮೊದಲ ಎಲೆಕ್ಟ್ರಿಕ್ ಕಾರುಗಳು Xiaomi HyperEngine V6/V6s ಜೊತೆಗೆ 21000rpm ಅನ್ನು ಹೊಂದಿವೆ.
ಚೀನಾದ ಸ್ಮಾರ್ಟ್‌ಫೋನ್ ತಯಾರಕ ಬ್ರಾಂಡ್ ಮತ್ತು ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ ಫೀಚರ್ ನೀಡಿ ಜನಪ್ರಿಯವಾಗಿರುವ Xiaomi ನೆನ್ನೆ ಅಂದ್ರೆ 28 ಡಿಸೆಂಬರ್ 2023 ರಂದು ಮೊದಲ ಎಲೆಕ್ಟ್ರಿಕ್ ವಾಹನವನ್ನು (Electric Car SU7) ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ವಿಶ್ವದ ಐದು ಅಗ್ರ ಎಲೆಕ್ಟ್ರಿಕ್ ಕಾರುಗಳ ಪೈಕಿಯಲ್ಲಿ ಒಬ್ಬರಗಲು ಬಯಸಿದೆ ಎಂದು ಹೇಳಿದೆ. ಕಂಪನಿಯು ಮೊದಲ ಬಾರಿಯಲ್ಲೇ ಒಂದೇ ಸರಣಿಯಲ್ಲಿ ಎರಡು ಮಾಡೆಲ್‌ಗಳನ್ನು ತಯಾರಿಸಿದ್ದು Xiaomi SU7 ಮತ್ತು Xiaomi SU7Max ಎಂದು ಹೆಸರಿಸಿದೆ. ಈ ಎರಡೂ ಕಾರುಗಳ ನಿರ್ಮಾಣ ಗುಣಮಟ್ಟದಲ್ಲಿ ಕಂಪನಿಯು ಸಾಕಷ್ಟು ಕೆಲಸ ಮಾಡಿ Xiaomi HyperEngine V6/V6s ಜೊತೆಗೆ 21000rpm ಅನ್ನು ಒದಗಿಸುತ್ತಿದೆ.
Also Read: 108MP ಕ್ಯಾಮೆರಾ ಮತ್ತು Powerful ಪ್ರೊಸೆಸರ್ನೊಂದಿಗೆ Honor X50 GT ಬಿಡುಗಡೆಗೆ ಡೇಟ್ ಫಿಕ್ಸ್
Electric Car SU7 ಪೋರ್ಷೆ ಮತ್ತು ಟೆಸ್ಲಾಕ್ಕೆ ಭಾರಿ ಪೈಪೋಟಿ
ಆಟೋ ಮಾರುಕಟ್ಟೆ ನಿಧಾನಗತಿಯ ಬೇಡಿಕೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಕಂಪನಿಯು ಕಾರನ್ನು ಘೋಷಿಸಿದೆ. ಇದಲ್ಲದೆ ಕಂಪನಿಗಳು ಕಾರುಗಳ ಬೆಲೆಯ ಬಗ್ಗೆ ಸಾಕಷ್ಟು ಚರ್ಚಿಸುತ್ತಿವೆ. ಇದನ್ನು ಪ್ರಕಟಿಸಿದ ಕಂಪನಿಯ CEO ಆಗಿರುವ ಲೀ ಜುನ್ (Lei Jun) ಮಾತನಾಡಿ ಈ ನಮ್ಮ ಎಲೆಕ್ಟ್ರಿಕ್ ಕಾರ್ ಪೋರ್ಷೆ ಮತ್ತು ಟೆಸ್ಲಾಗೆ ಪೈಪೋಟಿ ನೀಡಲಿದೆ ಎಂದು ಹೇಳಿದ್ದಾರೆ. ಅಂದರೆ ಐಷಾರಾಮಿ ವಿಭಾಗದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗುವುದಾಗಿ ಅವರೇ ಚುಟಿಕಿಯಷ್ಟು ಅಂದಾಜವನ್ನು ನೀಡಿದ್ದಾರೆ.
ನಾವು 15 ರಿಂದ 20 ವರ್ಷಗಳಿಂದ ಈ ಕಾರಿಗೆ ಕೆಲಸ ಮಾಡಿದ್ದೇವೆ ಶೀಘ್ರದಲ್ಲೇ ನಾವು ವಿಶ್ವದ ಐದು ಅಗ್ರ ವಾಹನ ತಯಾರಕರಾಗಲಿದ್ದೇವೆ ಎಂದು ಹೇಳಿದರು. ಇದು ಚೀನಾದ ಆಟೋಮೊಬೈಲ್ ಉದ್ಯಮಕ್ಕೂ ಸಾಕಷ್ಟು ಸಹಾಯ ಮಾಡಲಿದೆ. ಇತರ ಕಂಪನಿಗಳಂತೆ Xiaomi ಸಹ EV ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈಗ ಕಂಪನಿಯು ನಿರಂತರವಾಗಿ ಈ ಕೆಲಸ ಮಾಡುತ್ತಿದೆ. ಕಂಪನಿಯು ಆಟೋ ವಲಯದಲ್ಲಿ ಸುಮಾರು $10 ಬಿಲಿಯನ್ ಹೂಡಿಕೆ ಮಾಡಲಿದೆ. ಅದರಂತೆ ಕಂಪನಿಯು ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರಲು ಯೋಚಿಸುತ್ತಿದೆ.
ಸ್ಮಾರ್ಟ್‌ಫೋನ್‌ನಿಂದಲೇ ಫುಲ್ ಕಂಟ್ರೋಲ್!
ಇದು ಕಂಪನಿಯ ಜನಪ್ರಿಯ ಫೋನ್‌ಗಳ ಆಪರೇಟಿಂಗ್ ಸಿಸ್ಟಮ್‌ಗೆ ಸಹ ಸಂಪರ್ಕಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಇದರ ವಿನ್ಯಾಸವು ಸಾಕಷ್ಟು ಸ್ಪೋರ್ಟಿಯಾಗಿದೆ. ಇದರಲ್ಲಿ ಹೆಚ್ಚು ಇಂಟ್ರೆಸ್ಟಿಂಗ್ ಅಂದರೆ ಕಾರ್ಡ್ ಅನ್ನು ನೀವು ನಿಮ್ಮ ಸ್ಮಾರ್ಟ್ಫೋನ್ ಮೂಲಕವೂ ಸಹ ಕಂಟ್ರೋಲ್ ಮಾಡಬಹುದಾದ ಫೀಚರ್ಗಳನ್ನು ಸಹ ಹೊಂದಿದೆ. ಕಂಪನಿಯ ಈ ಮೊದಲ ಎಲೆಕ್ಟ್ರಿಕ್ ಕಾರು HyperOS ನೊಂದಿಗೆ ಬರುತ್ತದೆ.
ಕಂಪನಿಯು ಕಾರಿನ ಒಳಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಇದಕ್ಕೆ ಗ್ಯಾಲಕ್ಸಿ ಗ್ರೇ ಬಣ್ಣವನ್ನು ನೀಡಲಾಗಿದೆ. ಇದರಲ್ಲಿ ನಿಮಗೆ 16.1 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಒಂದೇ ಸೆಂಟ್ರಲ್ ಕಂಟ್ರೋಲ್ ಸ್ಕ್ರೀನ್ ಕೀಬೋರ್ಡ್ ವಿಸ್ತರಣೆಯನ್ನು ಸಹ ಬೆಂಬಲಿಸುತ್ತದೆ. ಇದರಲ್ಲಿ ರೂಢಿಯಲ್ಲಿರುವ D ಆಕಾರದ ಸ್ಟೀರಿಂಗ್ ವೀಲ್ ಹೊಂದಿರುವ ಕಾರಣ ಇದು ಸಾಕಷ್ಟು ಆರಾಮದಾಯಕವಾಗಿದೆ ಬಳಸಲು ಅನುಮತಿಸುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile