ಸಾಮಾನ್ಯವಾಗಿ ಸ್ಮಾರ್ಟ್ಫೋನ್ಗಳು ಪ್ರತಿ ದಿನದ ಬಳಕೆಯೊಂದಿಗೆ ಅದರಲ್ಲೂ ಒಟ್ಟಿಗೆ ಹತ್ತಾರು ಅಪ್ಲಿಕೇಶನ್ ಬಳಲಸುವುದು ಅಥವಾ ಗೇಮಿಂಗ್ ಆಡುವಾಗ ಬಿಸಿಯಾಗುವುದು (Overheating Issue) ಅನಿವಾರ್ಯವಾಗಿದೆ. ಆದರೆ ಮಿತಿಗಿಂತ ಅಧಿಕವಾದರೆ ಸ್ಫೋಟಿಸುವ ಅಥವಾ ಸ್ಮಾರ್ಟ್ಫೋನ್ ಹಾಳಾಗುವ ಸಾಧ್ಯತೆಗಳಿರುತ್ತವೆ. ಇಂದು ನಾವೆಲ್ಲರೂ ಸ್ಮಾರ್ಟ್ಫೋನ್ಗಳನ್ನು ಬಳಸುತ್ತೇವೆ. ಬ್ರಾಂಡೆಡ್ ಕಂಪನಿಗಳು ನಿರಂತರವಾಗಿ ಹೊಸ 5G ಫೋನ್‌ಗಳನ್ನು ಉತ್ತಮ ಸ್ಟೋರೇಜ್ ಜೊತೆಗೆ ಪ್ರಾರಂಭಿಸುತ್ತಿವೆ ಆದರೆ ಇಂದಿಗೂ ಸಹ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸಮಸ್ಯೆ ಮುಂದುವರಿದಿದೆ. ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಬಿಸಿಯಾಗುವ ಸಮಸ್ಯೆ ಇನ್ನೂ ಮುಂದುವರಿದಿದೆ. ಹಾಗಾಗಿ ಫೋನ್ ಬಿಸಿಯಾಗಲು ಬಳಕೆದಾರರ ತಪ್ಪುಗಳೇ ಇದರ ಹಿಂದಿನ ಕಾರಣಗವೆಂಬುದನ್ನು ಗಮನಿಸಬೇಕಿದೆ.
Also Read: Disney+ Password Sharing: ಇನ್ಮುಂದೆ ಡಿಸ್ನಿ ಬಳಕೆದಾರರಿಗೆ ಪಾಸ್‌ವರ್ಡ್ ಹಂಚಿಕೆಗೆ ನಿರ್ಬಂಧ ಪರಿಚಯ!
ನಿಮ್ಮ ಫೋನ್‌ನ CPU ಸಹ ಮತ್ತೆ ಮತ್ತೆ ಓವರ್‌ಲೋಡ್ ಆಗುತ್ತಿದ್ದರೆ ಅದು ನಿಮ್ಮ ಫೋನ್ ಬೇಗನೆ ಬಿಸಿಯಾಗಲು ಕಾರಣವಾಗಬಹುದು. CPU ನಿಮ್ಮ ಫೋನ್‌ನ ಮೆದುಳು ಮತ್ತು ಅಪ್ಲಿಕೇಶನ್‌ಗಳನ್ನು ಚಲಾಯಿಸಲು ಬಳಸಲಾಗುತ್ತದೆ. ನಿಮ್ಮ CPU ಹಲವಾರು ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ರನ್ ಮಾಡಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಫೋನ್ ತ್ವರಿತವಾಗಿ ಬಿಸಿಯಾಗಬಹುದು. ಆದ್ದರಿಂದ, ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ.
ನೀವು ಬಜೆಟ್ ಫೋನ್ ಹೊಂದಿದ್ದರೆ ಮತ್ತು ಅದರಿಂದ ಪ್ರೀಮಿಯಂ ಕಾರ್ಯಕ್ಷಮತೆಯನ್ನು ಪಡೆಯಲು ಯೋಚಿಸುತ್ತಿದ್ದರೆ ತಪ್ಪಾಗಿಯೂ ಹಾಗೆ ಮಾಡಬೇಡಿ. ಫೋನ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಮತ್ತು ಆಟಗಳನ್ನು ಸ್ಥಾಪಿಸಿ. ಶಕ್ತಿಯುತವಾದ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಅತಿಯಾದ ಬಿಸಿಯಾಗುವುದರಿಂದ ಸ್ಮಾರ್ಟ್‌ಫೋನ್ ಕೂಡ ಕೆಲವೊಂದು ಸಂದರ್ಭಗಳಲ್ಲಿ ಸ್ಫೋಟಗೊಳ್ಳಬಹುದು.
ಹಲವು ಬಾರಿ ಚಾರ್ಜ್ ಮಾಡುವಾಗಲೂ ಫೋನ್ ಬಿಸಿಯಾಗುತ್ತದೆ. ಚಾರ್ಜ್ ಮಾಡುವಾಗ ಫೋನ್ ಸ್ವಲ್ಪ ಬಿಸಿಯಾಗುವುದು ಸಹಜವಾಗಿದೆ ಆದರೆ ಚಾರ್ಜ್ ಮಾಡುವಾಗ ನಿಮ್ಮ ಫೋನ್ ಹೆಚ್ಚು ಬಿಸಿಯಾಗುತ್ತಿದ್ದರೆ ಅದರ ಹಿಂದಿನ ಕಾರಣ ಕಳಪೆ ಬ್ಯಾಟರಿ ಅಥವಾ ಚಾರ್ಜರ್ ಆಗಿರಬಹುದು. ಕೆಲವು ಸಮಯದ ಹಿಂದೆ ಐಫೋನ್‌ನ ಇತ್ತೀಚಿನ ಮಾದರಿಗಳಲ್ಲಿಯೂ ಬಹಳಷ್ಟು ತಾಪನ ಸಮಸ್ಯೆಗಳು ಕಂಡುಬಂದವು. ಇದನ್ನು ಕಂಪನಿಯು ಸಾಫ್ಟ್‌ವೇರ್ ಮೂಲಕ ಸರಿಪಡಬಹುದು. ಆದ್ದರಿಂದ ಕೆಲವೊಮ್ಮೆ ಫೋನ್ ಬಿಸಿಯಾಗಲು ಕಾರಣ ಸಾಫ್ಟ್‌ವೇರ್ ದೋಷವೂ ಆಗಿರಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ