ನಿಮ್ಮ ಸ್ಮಾರ್ಟ್ಫೋನ್ ಡಿಸ್ಪ್ಲೇ ಟಚ್ ಸ್ಕ್ರೀನ್ (Touch Screen) ಕೆಲಸ ಮಾಡದಿರಲು ಈ ಅಂಶಗಳು ಕಾರಣವಾಗಬಹುದು!

Updated on 24-Jan-2024
HIGHLIGHTS

ನಿಮ್ಮ ಸ್ಮಾರ್ಟ್ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಗಳನ್ನು ಬಳಸುವುದು ಉತ್ತಮವಾಗಿರುತ್ತದೆ.

ಡಿಸ್ಪ್ಲೇ ಟಚ್ ಸ್ಕ್ರೀನ್ (Touch Screen) ಕೆಲಸ ಮಾಡುತ್ತಿಲ್ಲವಾದರೆ ಅದಕ್ಕೆ ಸಾಮಾನ್ಯವಾಗಿ ಕಾರಣವಾಗುವ ಅಂಶಗಳು ಇಲ್ಲಿವೆ

ಸ್ಮಾರ್ಟ್ಫೋನ್ ಬ್ರಾಂಡ್ ಸ್ಟೋರ್ಗೆ ಭೇಟಿ ನೀಡಿ ಒಳ್ಳೆ ಕ್ವಾಲಿಟಿಯ ಸ್ಕ್ರೀನ್ ಪ್ರೊಟೆಕ್ಟರ್ ಪಡೆಯುವ ಮೂಲಕ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಅತ್ಯಾಧುನಿಕವಾಗಿದ್ದು ನಮ್ಮ ದೈನಂದಿನ ಕೆಲಸದ ಹರಿವಿಗೆ ಕೊಡುಗೆ ನೀಡುತ್ತವೆ. ಹೊಸ ಅಪ್‌ಡೇಟ್‌ಗಳೊಂದಿಗೆ ಅವುಗಳನ್ನು ಹೆಚ್ಚು ಆಕರ್ಷಕವಾಗಿಸುತ್ತಿರುತ್ತಾರೆ. ಬಳಕೆದಾರರು ಕೆಲವೊಮ್ಮೆ ತಮ್ಮ ಸ್ಕ್ರೀನ್ ಟಚ್ ಅನ್ನು ಆಂಡ್ರಾಯ್ಡ್‌ನಲ್ಲಿ ಕೆಲಸ ಮಾಡದಿರುವುದು ಸಾಮಾನ್ಯವಾಗಿ ಹೆಚ್ಚು ಕಾಲ ಬಳಸಿದ ಹಳೆ ಫೋನ್‌ಗಳಲ್ಲಿ ಕಂಡು ಬರುತ್ತವೆ. ಆದರೆ ನಿಮ್ಮ ಸ್ಮಾರ್ಟ್ಫೋನ್ ಡಿಸ್ಪ್ಲೇ ಟಚ್ ಸ್ಕ್ರೀನ್ (Touch Screen) ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ಅದಕ್ಕೆ ಸಾಮಾನ್ಯವಾಗಿ ಕಾರಣವಾಗುವ ಕೆಲವೊಂದು ಅಂಶಗಳನ್ನು ಪರಿಗಣಿಸಿ ಅದಕ್ಕೆ ತಕ್ಕ ಸಮಾಧಾನವನ್ನು ಈ ಕೆಳಗೆ ನೀಡಿದ್ದೇವೆ.

Also Read: ಇಡೀ ಫ್ಯಾಮಿಲಿಗೆ ಒಂದೇ ಯೋಜನೆಯಲ್ಲಿ Unlimited ಕರೆ ಮತ್ತು ಡೇಟಾ ನೀಡುವ ಬೆಸ್ಟ್ Jio ಮತ್ತು Airtel ಪ್ಲಾನ್!

ಕೊಳಕು, ಕ್ರೀಮ್, ಧೂಳು ಮತ್ತು ಎಣ್ಣೆಯಂತಹ ಜಿದ್ದುಗಳು

ಸ್ಮಾರ್ಟ್ಫೋನ್ ಬಳಸುತ್ತಿದ್ದಂತೆ ಇದರ ಬಳಕೆಯ ಸಮಯವೂ ಹೆಚ್ಚುತ್ತಿರುತ್ತದೆ. ಇದರೊಂದಿಗೆ ಸಣ್ಣ ಪುಟ್ಟನ ಕೊಳಕು, ಕ್ರೀಮ್, ಧೂಳು ಮತ್ತು ಎಣ್ಣೆಯಂತಹ ಜಿದ್ದುಗಳಿಂದ ಫೋನ್ ಮೇಲೆ ಸಣ್ಣ ರೀತಿಯ ಲೇಯರ್ ರೂಪುಗೊಳ್ಳುತ್ತದೆ. ಇದರಿಂದ ನಿಮ್ಮ ಟಚ್ ಸ್ಕ್ರೀನ್ (Touch Screen) ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ನಿಮ್ಮ ಸ್ಮಾರ್ಟ್ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆಯಂತಹ ಮೃದುವಾದ ಸ್ವಲ್ಪ ಒದ್ದೆಯಾದ ರೇಷುಗಳನ್ನು ಬಿಡದ ಬಟ್ಟೆಯಿಂದ ಸ್ವಚ್ಛಗೊಳಿಸಲು ಸ್ಮಾರ್ಟ್ಫೋನ್ ಕಂಪನಿಗಳು ಶಿಫಾರಸು ಮಾಡುತ್ತದೆ. ಸೌಮ್ಯವಾದ ವೃತ್ತಾಕಾರದ ಚಲನೆಗಳನ್ನು ಬಳಸಿಕೊಂಡು ಫೋನ್ ಡಿಸ್ಪ್ಲೇ ಸ್ಕ್ರೀನ್ ಸ್ವಚ್ಛಗೊಳಿಸುವ ಮೊದಲು ಎಲ್ಲಾ ಕೇಬಲ್‌ಗಳನ್ನು ಅನ್ಪ್ಲಗ್ ಮಾಡಿ ಫೋನ್ ಆಫ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.

ನೀರಿಂದ ಡ್ಯಾಮೇಜ್ ಆಗಿರಬಹುದು

ನಿಮ್ಮ ಸ್ಮಾರ್ಟ್ಫೋನ್ ಅಪ್ಪಿತಪ್ಪಿ ನೀರಿನೊಳಗೆ ಅಥವಾ ಬೇರೆ ಯಾವುದೇ ಲಿಕ್ವಿಡ್ ಪದಾರ್ಥಗಳಿಂದ ಡ್ಯಾಮೇಜ್ ಆಗಿದ್ದರು ಸ್ಮಾರ್ಟ್ಫೋನ್ ಡಿಸ್ಪ್ಲೇ ಟಚ್ ಹಾಳಾಗುತ್ತದೆ. ಇದಕ್ಕಾಗಿ ಅದೃಷ್ಟವಶಾತ್ ನಮ್ಮ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಅಂತರ್ನಿರ್ಮಿತ ದ್ರವ ಸಂಪರ್ಕ ಸೂಚಕಗಳನ್ನು LCI (Liquid Contact Indicators) ಅನ್ನು ಹೊಂದಿವೆ. ಇದರಿಂದ ಫೋನ್ಗಳನ್ನು ಮತ್ತೆ ಮೊದಲಿನಂತೆ ಮಾಡಲು ಅವಕಾಶಗಳಿವೆ. ಆಕಸ್ಮಿಕವಾಗಿ ನಿಮ್ಮ ಫೋನ್ ನೀರೊಳಗೆ ಬಿದ್ದರೆ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ ಒಣ ಬಟ್ಟೆಗಳಿಂದ ಪೂರ್ತಿಯಾಗಿ ಒದರಿ ಒರೆಸಿಬಿಡಿ. ಇದರ ನಂತರ ಅಕ್ಕಿಯೊಳಗೆ 5-6 ಘಂಟೆ ಇಡುವುದರಿಂದ ಫೋನ್ ಮೊದಲಿನಂತೆ ಪಡೆಯಬಹುದು. ಆದರೆ ಟಚ್ ಸ್ಕ್ರೀನ್ (Touch Screen) ಕೊಂಚ ತಲೆ ಕೆಡಿಸಬಹುದು.

ಲೋ ಕ್ವಾಲಿಟಿಯ ಟಚ್ ಸ್ಕ್ರೀನ್ (Touch Screen) ಪ್ರೊಟೆಕ್ಟರ್

ಎಲ್ಲವು ಸರಿಯಾಗಿದ್ದು ಡಿಸ್ಪ್ಲೇ ಟಚ್ ಸ್ಕ್ರಿನ್ ತೊಂದರೆ ನೀಡುತ್ತಿದ್ದರೆ ಇದೊಂದು ಕಾರಣ ನಿಮಗಾಗಿರಬಹುದು. ಸಾಮನ್ಯವಾಗಿ ನೀವೊಂದು ಹೊಸ ಸ್ಮಾರ್ಟ್ಫೋನ್ ಖರೀದಿಸಿದರೆ ಅದಕ್ಕೆ ಪ್ರೊಟೆಕ್ಷನ್ ನೀಡಲು ನಾವು ಸ್ಕ್ರೀನ್ ಪ್ರೊಟೆಕ್ಟರ್ ಬಳಸುವುದು ರೂಡಿಯಲ್ಲಿದೆ. ಆದರೆ ನಿಮ್ಮ ಫೋನಿಗೆ ಯಾವ ಸ್ಕ್ರೀನ್ ಪ್ರೊಟೆಕ್ಟರ್ ಸರಿಯಾಗಿರುತ್ತದೆ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ. ಏಕೆಂದರೆ ಕಡಿಮೆ ಬೆಲೆಗೆ ಲೊ ಕ್ವಾಲಿಟಿಯ ಡಿಸ್ಪ್ಲೇ ಸ್ಕ್ರೀನ್ ಪ್ರೊಟೆಕ್ಟರ್ ಬಳಸುವುದುರರಿಂದ ಅಸಲಿ ಡಿಸ್ಪ್ಲೇ ಟಚ್ ಕಂಟ್ರೋಲ್ ಕೊಂಚ ಕಡಿಮೆಯಾಗಬಹುದು. ಇದರಿಂದಾಗಿ ನೀವು ನಿಮ್ಮ ಸ್ಮಾರ್ಟ್ಫೋನ್ ಬ್ರಾಂಡ್ ಸ್ಟೋರ್ಗೆ ಭೇಟಿ ನೀಡಿ ಒಳ್ಳೆ ಕ್ವಾಲಿಟಿಯ ಸ್ಕ್ರೀನ್ ಪ್ರೊಟೆಕ್ಟರ್ ಪಡೆಯುವ ಮೂಲಕ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಟಚ್ ಸ್ಕ್ರೀನ್ (Touch Screen) ಸಾಫ್ಟ್ವೇರ್ ದೋಷಗಳು

ಪ್ರತಿಯೊಂದು ಸ್ಮಾರ್ಟ್ಫೋನ್ ಬ್ರಾಂಡ್ ತಮ್ಮ ಬಳಕೆದಾದರಿಗೆ ಹೊಸ ಅನುಭವವನ್ನು ನೀಡಲು ಮತ್ತು ಹಲವಾರು ಹೊಸ ಅಪ್‌ಡೇಟ್‌ಗಳನ್ನು ನೀಡಲು ಸದಾ ಕೆಲಸ ಮಾಡುತ್ತಿರುತ್ತವೆ. ಅದರೊಂದಿಗೆ ಕಂಪನಿಗಳು ಕೆಲವೊಂದು ಸೆಕ್ಯೂರಿಟಿ, ಆಂಡ್ರಾಯ್ಡ್ ಮತ್ತಿ iOS ಅಪ್‌ಡೇಟ್‌ಗಳೊಂದಿಗೆ ಹೊಸ ಫೀಚರ್ಗಳನ್ನೂ ಸೇರಿಸುವುದು ಅನಿವಾರ್ಯವಾಗಿರುತ್ತದೆ. ಇದರಲ್ಲಿ ಕೆಲವೊಮ್ಮೆ ಟಚ್ ಸಹ ಪ್ರತಿಕ್ರಿಯೆಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :