ಗೂಗಲ್ ಮತ್ತು ಆಪಲ್ ಅಪ್ಲಿಕೇಶನ್ ಸ್ಟೋರ್‌ಗಳಿಂದ BGMI ಗೇಮ್ ಅನ್ನು ತೆಗೆಯಲು ಕಾರಣವೇನು?

ಗೂಗಲ್ ಮತ್ತು ಆಪಲ್ ಅಪ್ಲಿಕೇಶನ್ ಸ್ಟೋರ್‌ಗಳಿಂದ BGMI ಗೇಮ್ ಅನ್ನು ತೆಗೆಯಲು ಕಾರಣವೇನು?
HIGHLIGHTS

ಭಾರತವು ಈಗ BGMI ಎಂದು ಕರೆಯಲ್ಪಡುವ PUBG ಯ ಭಾರತೀಯ ಆವೃತ್ತಿಯನ್ನು ನಿರ್ಬಂಧಿಸಿದೆ

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಿಂದಲೂ BGMI ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.

ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ BGMI ಅನ್ನು ನಿರ್ಬಂಧಿಸಲಾಗಿದೆ ಎಂದು ವರದಿಗಳು ಸೂಚಿಸುತ್ತವೆ.

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಿಂದಲೂ BGMI ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. 2020 ರಲ್ಲಿ PUBG ಮೊಬೈಲ್ ಬ್ಯಾನ್ ಮಾಡಿದ ನಂತರ ಭಾರತ ಸರ್ಕಾರ ಅದರ ಭಾರತೀಯ ಆವೃತ್ತಿಯನ್ನು ಸಹ ನಿರ್ಬಂಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ BGMI ಅನ್ನು ನಿರ್ಬಂಧಿಸಲಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಇದನ್ನು BGMI ಅಂದ್ರೆ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಎಂದು ಕರೆಯಲಾಗುತ್ತಿದೆ. 

BGMI ಇನ್ನು ಮುಂದೆ ದೇಶದಲ್ಲಿ ಡೌನ್‌ಲೋಡ್‌ಗೆ ಲಭ್ಯವಿಲ್ಲ!

ಗುರುವಾರ ಸಂಜೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಬ್ಯಾಟಲ್ ರಾಯಲ್ ಮೊಬೈಲ್ ಗೇಮ್ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ನಿರ್ಬಂಧದ ಹಿಂದಿನ ಕಾರಣವನ್ನು ಕ್ರಾಫ್ಟನ್ ಅಥವಾ ಭಾರತ ಸರ್ಕಾರ ಅಧಿಕೃತವಾಗಿ ದೃಢಪಡಿಸಿಲ್ಲ. ರಾಯಿಟರ್ಸ್‌ನಿಂದ ಬರುವ ವರದಿಯು PUBG ಮೊಬೈಲ್‌ನಂತೆ BGMI ಅನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಸೂಚಿಸುತ್ತದೆ. ಈ ಮೂಲಕ ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭಿಸಲಾದ ಈ ಜನಪ್ರಿಯ BGMI ಇನ್ನು ಮುಂದೆ ದೇಶದಲ್ಲಿ ಡೌನ್‌ಲೋಡ್‌ಗೆ ಲಭ್ಯವಿರುವುದಿಲ್ಲ.

BGMI ನಿರ್ಬಂಧಿಸಲು ಮೂಲ ಕಾರಣವೇನು? 

ತಿಳಿದಿಲ್ಲದವರಿಗೆ BGMI ಅನ್ನು ಕ್ರಾಫ್ಟನ್ ಎಂಬ ಭಾರತೀಯ ಕಂಪನಿಯೇ ಅಭಿವೃದ್ಧಿಪಡಿಸಿದೆ. ಇದು ದಕ್ಷಿಣ ಕೊರಿಯಾದ ಚೀನಾದ ಸಂಸ್ಥೆಯಾದ ಟೆನ್ಸೆಂಟ್‌ನಿಂದ ಬೆಂಬಲಿತವಾಗಿದೆ. BGMI ಗೌಪ್ಯತೆ ಪುಟದ ಪ್ರಕಾರ ಕಂಪನಿಯು ಭಾರತ ಮತ್ತು ಸಿಂಗಾಪುರದ ಸರ್ವರ್‌ಗಳಲ್ಲಿ ಬಳಕೆದಾರರ ಡೇಟಾವನ್ನು ಹೋಸ್ಟ್ ಮಾಡುತ್ತದೆ. "ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭಾರತ ಮತ್ತು ಸಿಂಗಾಪುರದಲ್ಲಿರುವ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ" ಎಂದು ಅಧಿಕೃತ ಬ್ಲಾಗ್ ಪೋಸ್ಟ್ ಟಿಪ್ಪಣಿಗಳು ಹರಿದಾಡಲು ಶುರುವಾಗಿರುವುದು ಮೂಲ ಕಾರಣವಾಗಿದೆ. ಇದು ಪ್ರಸ್ತುತ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಗೇಮ್ ಡೆವಲಪರ್ ಹೇಳಿದ್ದಾರೆ.

ಭಾರತೀಯ ಸೆಕ್ಷನ್ 69A ಐಟಿ ಕಾಯಿದೆ 

ಹಾಗಾದರೆ ಈ ಕಾಯಿದೆಯ ಅರ್ಥವೇನು? ಐಟಿ ಕಾಯಿದೆಯ ಸೆಕ್ಷನ್ 69A ಮೂಲಭೂತವಾಗಿ ದೇಶದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಸೌಹಾರ್ದ ಸಂಬಂಧಗಳು ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಯಾವುದೇ ವಿಷಯಕ್ಕೆ ಪ್ರವೇಶವನ್ನು ನಿರ್ಬಂಧಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಈಗಾಗಲೇ ಭಾರತದಲ್ಲಿ ಐಟಿ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ ನೂರಾರು ಚೀನೀ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಬಳಕೆದಾರರ ಡೇಟಾವನ್ನು ಚೀನಾ ಸರ್ಕಾರದೊಂದಿಗೆ ಹಂಚಿಕೊಂಡಿವೆ ಎಂದು ಸರ್ಕಾರವು ಮುಖ್ಯವಾಗಿ ಭಯಪಟ್ಟಿದೆ. ವರದಿಯ ಪ್ರಕಾರ ಚೀನಾದಲ್ಲಿ ಡೇಟಾ ಹಂಚಿಕೆ ಮತ್ತು ಗಣಿಗಾರಿಕೆಯ ಕುರಿತಾದ ಕಳವಳದಿಂದಾಗಿ ಚೀನಾದ ಟೆನ್ಸೆಂಟ್ ಬೆಂಬಲಿತ ಆಟವಾದ BGMI ಅನ್ನು ಭಾರತ ಸರ್ಕಾರ ನಿರ್ಬಂಧಿಸಿದೆ. ಸರ್ಕಾರದಿಂದ ಅಧಿಕೃತ ಹೇಳಿಕೆಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo