99% ಜನರಿಗೆ ತಿಳಿಯದ ಮಾಹಿತಿ! SIM ಕಾರ್ಡ್‌ನ ಒಂದು ಮೂಲೆಯನ್ನು ಏಕೆ ಕತ್ತರಿಸಲಾಗಿರುತ್ತದೆ ನಿಮಗೊತ್ತಾ?

99% ಜನರಿಗೆ ತಿಳಿಯದ ಮಾಹಿತಿ! SIM ಕಾರ್ಡ್‌ನ ಒಂದು ಮೂಲೆಯನ್ನು ಏಕೆ ಕತ್ತರಿಸಲಾಗಿರುತ್ತದೆ ನಿಮಗೊತ್ತಾ?
HIGHLIGHTS

ನಿಮಗೊತ್ತಾ ಸಿಮ್‌ ಕಾರ್ಡ್ ನ ಒಂದು ಮೂಲೆಯನ್ನು ಏಕೆ ಕತ್ತರಿಸಲಾಗುತ್ತದೆ?

ಮೊಬೈಲ್ ಫೋನ್‌ಗಳಲ್ಲಿ ಕಾರ್ಡ್ ಅನ್ನು ಸರಿಯಾದ ಮಾರ್ಗವಾಗಿ ಇರಿಸಲು ಕತ್ತರಿಸಲಾಗಿರುತ್ತದೆ.

ಸಿಮ್ ತಲೆಕೆಳಗಾಗಿದೆಯೇ ಅಥವಾ ನೇರವಾಗಿದೆಯೇ ಎಂದು ಗುರುತಿಸಲು ಸಿಮ್‌ ವಿನ್ಯಾಸವನ್ನು ಅಂತಹ ರೀತಿಯಲ್ಲಿ ಮಾಡಲಾಗಿದೆ.

SIM Card Facts: ಇದರ ನಿಜವಾದ ಕರಣ ಅಂದ್ರೆ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಕಾರ್ಡ್ ಹೋಲ್ಡರ್ ಪಿನ್‌ಗಳ ಸಂಪರ್ಕಗಳ ತಪ್ಪು ಜೋಡಣೆಯನ್ನು ತಪ್ಪಿಸುವುದು ಮೂಲೆಯಲ್ಲಿ ಕಟ್ ಮಾರ್ಕ್‌ಗೆ ಮುಖ್ಯ ಕಾರಣ. ಮೊಬೈಲ್ ಫೋನ್‌ನ ಅನುಗುಣವಾದ ಪಿನ್‌ನೊಂದಿಗೆ ಸಂಪರ್ಕವನ್ನು ಮಾಡಲು ಸಿಮ್ ಕಾರ್ಡ್‌ನ ಪಿನ್ ಸಂಖ್ಯೆ 1 ಆಗಿದ್ದು ಕಟ್ ಮಾರ್ಕ್ ಮೊಬೈಲ್ ಫೋನ್‌ಗಳಲ್ಲಿ ಕಾರ್ಡ್ ಅನ್ನು ಸರಿಯಾದ ಮಾರ್ಗವಾಗಿ ಇರಿಸಲು ಕತ್ತರಿಸಲಾಗಿರುತ್ತದೆ. ಸುಮಾರು ಜನರಿಗೆ ಈ ಸಿಮ್ ಕಾರ್ಡ್ ಮಾಹಿತಿ ಗೊತ್ತೆ ಇದೆ. ಆದರೆ ಅದೇ ಸಿಮ್ ಕಾರ್ಡ್‌ನ ಒಂದು ಮೂಲೆಯನ್ನು ಏಕೆ ಕತ್ತರಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ನಿಜವಾದ ಕಾರಣ ನಿಮಗೆ ಖಂಡಿತಾ ಗೊತ್ತಿಲ್ಲವಾದರೆ ಕೆಳಗೆ ಓದಿ.

ಸಿಮ್ ಕಾರ್ಡ್‌ನ ಒಂದು ಮೂಲೆಯನ್ನು ಏಕೆ ಕತ್ತರಿಸಲಾಗುತ್ತದೆ

ಫೋನ್ ಬಂದಾಗ ಅದರ ಜೊತೆಗೆ ಸಿಮ್ ಕೂಡ 90% ಸಂದರ್ಭಗಳಲ್ಲಿ ಇರಲೇ ಬೇಕು ಇದು ಅನಿವಾರ್ಯ. ಸಿಮ್ ಇಲ್ಲದೆ ಫೋನ್ ಉಪಯೋಗವಿಲ್ಲ. ನಾವು ಫೋನ್ ಅನ್ನು ನೋಡಿದಾಗಿನಿಂದ ಸಿಮ್ ಅನ್ನು ಅದರ ಜೊತೆ ಗುರುತಿಸಿದ್ದೇವೆ. ಈ ಸಿಮ್ ಕಾರ್ಡ್ ಅನ್ನು ವರ್ಷಗಳಿಂದ ಬಳಸಲಾಗುತ್ತಿದೆ. ಆದರೆ ಅದಕ್ಕೆ ಸಂಬಂಧಿಸಿದ ಪ್ರಶ್ನೆಯು ಯಾರ ಮನಸ್ಸಿನಲ್ಲಿಯೂ ಇರುವುದಿಲ್ಲ? ನೀವು ಎಂದಾದರೂ ಸಿಮ್ ಅನ್ನು ಸೂಕ್ಷ್ಮವಾಗಿ ನೋಡಿದ್ದೀರಾ? ಹೌದಾದರೆ ಅದರ ಒಂದು ಮೂಲೆಯನ್ನು ಕತ್ತರಿಸಿರುವುದನ್ನು ನೀವು ನೋಡಿರಬೇಕು.

ಸಿಮ್‌ನ ಒಂದು ಮೂಲೆಯನ್ನು ಕತ್ತರಿಸಲಾಗುತ್ತದೆ ಇದರಿಂದ ಮೊಬೈಲ್ ಫೋನ್‌ನಲ್ಲಿ ಸಿಮ್ ಅನ್ನುಸರಿಯಾದ ಸ್ಥಳದಲ್ಲಿ ಇರಿಸಬಹುದು. ಸಿಮ್ ತಲೆಕೆಳಗಾಗಿದೆಯೇ ಅಥವಾ ನೇರವಾಗಿದೆಯೇ ಎಂದು ಗುರುತಿಸಲು ಸಿಮ್‌ ವಿನ್ಯಾಸವನ್ನು ಅಂತಹ ರೀತಿಯಲ್ಲಿ ಮಾಡಲಾಗಿದೆ. ಜನರು ಸಿಮ್ ಅನ್ನು ತಲೆಕೆಳಗಾಗಿ ಹಾಕಿದರೆ ಅದರ ಚಿಪ್ಗೆ ಹಾನಿಯಾಗಬಹುದು. ಸಿಮ್ ಕಾರ್ಡಿನಲ್ಲಿ ಯಾವುದೇ ಕಟ್ ಮಾರ್ಕ್ ಇಲ್ಲದಿದ್ದರೆ ಅದನ್ನು ಮೊಬೈಲ್ ಫೋನ್‌ನಲ್ಲಿ ಸರಿಯಾಗಿ ಸೇರಿಸಲು ನಮಗೆ ಕಷ್ಟವಾಗುತ್ತಿತ್ತು ಜೊತೆಗೆ ನಾವು ಮೊಬೈಲ್ ಫೋನ್‌ನಲ್ಲಿ ಸಿಮ್ ಕಾರ್ಡ್‌ನ ತಪ್ಪು ಭಾಗವನ್ನು ಹಾಕುತ್ತಿದ್ದೆವು. ಮೊಬೈಲ್ ಫೋನ್‌ಗಳಲ್ಲಿ ಬಳಸುವ ಸಿಮ್ ಕಾರ್ಡ್‌ನ ಅಗಲ 25 ಎಂಎಂ, ಉದ್ದ 15 ಎಂಎಂ ಮತ್ತು ದಪ್ಪ 0.76 ಎಂಎಂ ವನ್ನು ಹೊಂದಿದೆ.

SIM ಎಂದರೇನು?

ಸಿಮ್‌ನ ಫುಲ್ ಫಾರಂ ನಿಮಗೆ ತಿಳಿದಿದೆಯೇ? SIM ನ ಫುಲ್ ಫಾರಂ Subscriber(S) Identity(I) Module (M) ಎಂದು ಹೇಳಲಾಗುತ್ತದೆ. ಇದು ಇಂಟರ್ನ್ಯಾಷನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ (IMSI) ಸಂಖ್ಯೆ ಮತ್ತು ಅದರ ಸಂಯೋಜಿತ ಕೀಯನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕಾರ್ಡ್ ಆಪರೇಟಿಂಗ್ ಸಿಸ್ಟಮ್ (COS) ಚಾಲನೆಯಲ್ಲಿರುವ ಇಂಟಿಗ್ರೇಟೆಡ್ ಸರ್ಕ್ಯೂಟ್ ಆಗಿದೆ. ಮೊಬೈಲ್ ಟೆಲಿಫೋನಿ ಡಿವೈಸ್‌ಗಳಲ್ಲಿ (ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಂತಹ) ಚಂದಾದಾರರನ್ನು ಗುರುತಿಸಲು ಮತ್ತು ದೃಢೀಕರಿಸಲು ಈ ಸಂಖ್ಯೆ ಮತ್ತು ಕೀಯನ್ನು ಬಳಸಲಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo