ಕರೋನಾ ಎಫೆಕ್ಟ್: ನಿಮ್ಮೇಲ್ಲಾ ಪ್ರಶ್ನೆಗಳಿಗೆ WHO ವಿಡಿಯೋ ಮತ್ತು ಮೆಸೇಜ್ಗಳ ಮೂಲಕ WhatsApp ಅಲ್ಲಿ ಉತ್ತರಿಸಲಿದೆ

Updated on 22-Mar-2020
HIGHLIGHTS

ನೀವು +91 9013151515 ಸಂಖ್ಯೆಗೆ WhatsApp ಮೆಸೇಜ್ ಕಳುಹಿಸುವ ಮೂಲಕ ಚಾಟ್‌ಬಾಟ್ ಉಪಯೋಗವನ್ನು ಪಡೆಯಬವುದು

ಕರೋನಾ ವೈರಸ್ ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲು ಆರೋಗ್ಯ ಸಚಿವಾಲಯ ಮತ್ತು ಮೈಗೊವ್ ಜೊತೆ ಸಹಭಾಗಿತ್ವದಲ್ಲಿದೆ ಎಂದು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಶನಿವಾರ ಪ್ರಕಟಿಸಿದೆ. ಇದು ದೇಶದ 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಭಾರತವು ಜಾಗತಿಕವಾಗಿ ವಾಟ್ಸಾಪ್ ಅತಿದೊಡ್ಡ ಮಾರುಕಟ್ಟೆಯಾಗಿದೆ. ಈ ಅಪ್ಲಿಕೇಶನ್ ದೇಶದಲ್ಲಿ ಆಳವಾಗಿ ಭೇದಿಸಲ್ಪಟ್ಟಿದೆ. ಮತ್ತು ಇದನ್ನು ಬಹುಪಾಲು ಭಾರತೀಯರು ಬಳಸುತ್ತಾರೆ.

ಕರೋನಾ ವೈರಸ್ ಕೋವಿಡ್ -19 ಕುರಿತ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು  ಅವರ ಅಗತ್ಯ ಸಂದರ್ಭದಲ್ಲಿ ಸಹಾಯ ಮಾಡಲು ಭಾರತ ಸರ್ಕಾರವು 'ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್' ಎಂಬ ವಾಟ್ಸಾಪ್ ಚಾಟ್‌ಬಾಟ್ ಅನ್ನು ಆರಂಭಿಸಿದೆ. ಈ ಚಾಟ್ ಬಾಟ್ ಅನ್ನು ಇದನ್ನು ವಿಶ್ವದ ಅತಿದೊಡ್ಡ ಸಂವಾದಾತ್ಮಕ ಎಐ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಂಗಸಂಸ್ಥೆಯಾದ ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ ಮತ್ತು ಕಾರ್ಯಗತಗೊಳಿಸಿದೆ.

ಈ ನಂಬರ್ +91 90131-51515 ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುವ ಮೂಲಕ ಚಾಟ್‌ಬಾಟ್ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮೂಲಭೂತ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್ ಮೂಲಕ ಒಂದು ಬಟನ್ ಪ್ರೇಸ್ ಮಾಡಿ ಸರಿಯಾದ ಮಾಹಿತಿಯನ್ನು ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಚಾಟ್‌ಬಾಟ್ ಅನ್ನು ಜಿಯೋ ಹ್ಯಾಪ್ಟಿಕ್(Jio Haptik) ಉಚಿತವಾಗಿ ಅಭಿವೃದ್ಧಿಪಡಿಸಿದ್ದು ಮತ್ತು ನೆಜಿಡಿ (NeGD) ಮತ್ತು ಮೈಗೋವ್‌(MyGov)ನ ಸೂಚನೆಗಳ ಪ್ರಕಾರ ನೈಜ ಸಮಯದಲ್ಲಿ ನವೀಕರಿಸಲಾಗಿದೆ (ಎರಡೂ MEITY ಅಡಿಯಲ್ಲಿ).

ನೈಜ ಸಮಯದ ಆಪ್‌ಡೇಟ್‌ಗಳ ಮೂಲಕ ಪ್ರಸ್ತುತ ಸನ್ನಿವೇಶದ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದು ಇದರೊಂದಿಗೆ ಸಾಮೂಹಿಕ ಉನ್ಮಾದಕ್ಕೆ ಕಾರಣವಾಗುವ ಸುಳ್ಳು ಮಾಹಿತಿಯ ಪ್ರಸರಣವನ್ನು ತಡೆಯಲು ಸಹಾಯಕಾರಿಯಾಗಲಿದೆ ಈ ಚಾಟ್ ಬಾಟ್. ಆರೋಗ್ಯ ಸಚಿವಾಲಯದಿಂದ ಪರಿಶೀಲಿಸಿದ ಡೇಟಾದೊಂದಿಗೆ, ಚಾಟ್ ಬಾಟ್ ಕೊರೋನ ವೈರಸ್ ಕುರಿತ ಸಂಬಂಧಿಸಿದ FAQ ಗಳನ್ನು ಪರಿಹರಿಸಲಿದೆ. ಇದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು, ಲಕ್ಷಣಗಳು, ಸರಿಯಾದ ಮತ್ತು ತಪ್ಪಾದ ಸಂಗತಿಗಳು, ಸಹಾಯವಾಣಿ ಸಂಖ್ಯೆಗಳು, ಪ್ರದೇಶದ ಪೀಡಿತ ಪ್ರಕರಣಗಳು, ಸರ್ಕಾರದ ಸಲಹೆಗಳ (ಪ್ರಯಾಣ ಸೇರಿದಂತೆ) ಮಾಹಿತಿ ವೀಡಿಯೊಗಳು ಇತ್ಯಾದಿಗಳನ್ನು ಒಳಗೊಂಡಿರಲಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :