Paytm ಪೇಮೆಂಟ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಂದಿಷ್ಟು ನಿರ್ಬಂಧಗಳನ್ನು ವಿಧಿಸಿದೆ.
ಹಣ ಕಳುಹಿಸಲು ಅಥವಾ ಪಡೆಯಲು 29ನೇ ಫೆಬ್ರವರಿ 2024 ವರೆಗೆ ಬಳಸಬಹುದು ಇದರ ನಂತರ ಇವೆಲ್ಲ ಬಂದ್ ಆಗಲಿವೆ.
Paytm ಇಂಟರ್‌ನೆಟ್‌ನಲ್ಲಿ ಹಲವಾರು ಮಾಹಿತಿಗಳು ಹರಿದಾಡುತ್ತಿರುವ ಕಾರಣ ಜನಸಾಮಾನ್ಯರು ಗೊಂದಲಕ್ಕೊಳಗಾಗುತ್ತಿದ್ದರೆ
ಭಾರತದಲ್ಲಿ ಜನಪ್ರಿಯ ಇ-ವಾಲೆಟ್ ಪ್ಲಾಟ್ಫಾರ್ಮ್ ಪೆಟಿಎಂ (Paytm) ಸೇವೆಗಳಲ್ಲಿನ ಜನಪ್ರಿಯ ಫೀಚರ್ ಪೆಟಿಎಂ ಪೇಮೆಂಟ್ ಬ್ಯಾಂಕ್ (Paytm Payment Bank) ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಂದಿಷ್ಟು ನಿರ್ಬಂಧಗಳನ್ನು ವಿಧಿಸಿದೆ. ಆದರೆ ಇದರ ಬಗ್ಗೆ ಇಂಟರ್‌ನೆಟ್‌ನಲ್ಲಿ ಹಲವಾರು ಮಾಹಿತಿಗಳು ಹರಿದಾಡುತ್ತಿರುವ ಕಾರಣ ಜನಸಾಮಾನ್ಯರು ಗೊಂದಲಕ್ಕೊಳಗಾಗುತ್ತಿದ್ದರೆ. ಅಲ್ಲದೆ ಹೆಚ್ಚಾಗಿ ಹುಡುಕಾಡುತ್ತಿರುವ ಅಂಶವೆಂದರೆ ಪೇಮೆಂಟ್ ಬ್ಯಾಂಕ್ ವ್ಯಾಲೆಟ್ ಬ್ಯಾಲೆನ್ಸ್ ಮತ್ತು ಫಾಸ್ಟ್‌ಟ್ಯಾಗ್ (FASTag) ನಿಷ್ಕ್ರಿಯಗೊಳಿಸುವ ಮತ್ತು ಪೋರ್ಟ್ ಮಾಡುವ ಬಗ್ಗೆಯಾಗಿದೆ. ನೀವು ಈ ಅಂಶಗಳ ಬಗ್ಗೆ ಸರಿಯಾದ ಮಾಹಿತಿ ಹುಡುಕುತ್ತಿದ್ದರೆ ಮುಂದೆ ತಿಳಿಯಿರಿ.
Also Read: ಜಿಯೋ ಮತ್ತು ಏರ್ಟೆಲ್ ನಂತರ ಈಗ Vodafone idea ಭಾರತದಲ್ಲಿ ತನ್ನ 5G ನೆಟ್ವರ್ಕ್ ಈ ವರ್ಷ ಆರಂಭಿಸಲಿದೆ!
ಫಾಸ್ಟ್‌ಟ್ಯಾಗ್ (FASTag) ಎಂದರೇನು? ಇದು ಹೇಗೆ ಕೆಲಸ ಮಾಡುತ್ತೆ?
ಈ ಫಾಸ್ಟ್‌ಟ್ಯಾಗ್ ಎನ್ನುವುದು ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳ ಮೂಲಕ ಮುಕ್ತವಾಗಿ ಚಲಿಸಲು ಮತ್ತು ನಗದು ವಹಿವಾಟುಗಳನ್ನು ನಿಲ್ಲಿಸಲು ಸರ್ಕಾರಿ ಸೇವೆಯಾಗಿದೆ. ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (Radio Frequency Identification – RFI) ಆಧಾರಿತ ಫಾಸ್ಟ್ ಟ್ಯಾಗನ್ನು ಕಾರಿನ ಮುಂಭಾಗದ ಗಾಜಿಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಸ್ಕ್ಯಾನ್ ಮಾಡಿ ನಿಮ್ಮ ವಾಲೆಟ್ ಅಥವಾ ಸೇವಿಂಗ್ ಖಾತೆಯಿಂದ ಹಣ ಕಡಿತವಾಗಿಸುತ್ತದೆ. ಪ್ರಸ್ತುತ Paytm ಬಿಟ್ಟು ಬೇರೆ ಎಲ್ಲ ಪ್ರಮುಖ ಬ್ಯಾಂಕುಗಳು ಫಾಸ್ಟ್ ಟ್ಯಾಗ್ ಸೌಲಭ್ಯ ನೀಡುತ್ತಿದ್ದು ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗಿರುತ್ತದೆ. ಟ್ಯಾಗನ್ನು ರೀಡ್ ಮಾಡುವ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.
ಫಾಸ್ಟ್‌ಟ್ಯಾಗ್ (FASTag) ನಿಷ್ಕ್ರಿಯಗೊಳಿಸುವುದು ಹೇಗೆ?
ಮೊದಲಿಗೆ ನೀವು ಪೆಟಿಎಂ (Paytm) ಮೂಲಕ ಖರೀದಿಸಿರುವ ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲು ನೀವು ಸಾಮಾನ್ಯವಾಗಿ ಕೆಲವೊಂದು ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ. ಇದರೊಂದಿಗೆ ನೀವು ಒಮ್ಮೆ ನಿಷ್ಕ್ರಿಯಗೊಳಿಸಿದ ಫಾಸ್ಟ್‌ಟ್ಯಾಗ್ ಅನ್ನು ನೀವು ಮತ್ತೆ ಸಕ್ರಿಯಗೊಳಿಸಲು ಸಾಧ್ಯವಿರುವುದಿಲ್ಲ ಎಂಬುದನ್ನು ನೆನಪಿಡಬೇಕು. ಆದ್ದರಿಂದ ನಿಷ್ಕ್ರಿಯಗೊಳಿಸುವ ಮುಂಚೆ ಸರಿಯಾದ ಖಾತೆ ಮತ್ತು ಮಾಹಿತಿಯೊಂದಿಗೆ ಮುಂದೆ ಹೋಗಿ.
➥ ಮೊದಲಿಗೆ ನೀವು ನೇರವಾಗಿ https://fastag.ihmcl.com/ ಫಾಸ್ಟ್‌ಟ್ಯಾಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
➥ ನಂತರ Login ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಪಾಸ್‌ವರ್ಡ್ ಮತ್ತು ಕ್ಯಾಪ್ಚ್ಯಾ ಬಳಸಿ ಫಾಸ್ಟ್‌ಟ್ಯಾಗ್ (FASTag) ಪೋರ್ಟಲ್‍ಗೆ ಸೈನ್ ಇನ್ ಮಾಡಿಕೊಳ್ಳಿ.
➥ ಸೈನ್ ಇನ್ ನಂತರ ಇದರಲ್ಲಿ ಸೇವಾ ವಿನಂತಿ (Service Request) ವಿಭಾಗಕ್ಕೆ ನ್ಯಾವಿಗೇಟ್ ಮಾಡಿ.
➥ ಈಗ ಇದರಲ್ಲಿ FASTag ವರ್ಗವನ್ನು ಆರಿಸುವ ಮೂಲಕ ನಿಮ್ಮ ಪೆಟಿಎಂ ಅಪ್ಲಿಕೇಶನ್‌ನ 24×7 ಸಹಾಯ ವಿಭಾಗದಲ್ಲಿ ನಿಮ್ಮ ಫಾಸ್ಟ್‌ಟ್ಯಾಗ್ ಬಂದ್ ಮಾಡುವ ವಿನಂತಿಯನ್ನು ನೀಡಬಹುದು.
➥ ಇದರ ನಂತರ ನಿಮ್ಮ ಫಾಸ್ಟ್‌ಟ್ಯಾಗ್ ನಿಷ್ಕ್ರಿಯಗೊಳಿಸಲು ನಿಮಗೆ ನೀಡಿದ ಸೂಚನೆಗಳನ್ನು ಅನುಸರಿಸಿ. ಒಂದು ವೇಳೆ ಹೆಚ್ಚುವರಿ ಮಾಹಿತಿಯನ್ನು ಸಹ ಕರ್ಮಚಾರಿ ಕೇಳಬಹುದು ಅಥವಾ ಪ್ರಕ್ರಿಯೆಯ ಮೂಲಕ ನಿಮಗೆ ಮುಂದಿನ ಮಾರ್ಗದರ್ಶನ ನೀಡಬಹುದು.
➥ ಇದರ ನಂತರ ಕಸ್ಟಮರ್ ಸಪೋರ್ಟ್‌ನಿಂದ ಒದಗಿಸಲಾದ ಸೇವಾ ವಿನಂತಿ (Service Request) ಸಂಖ್ಯೆಯ ದಾಖಲೆ ಮತ್ತು ನಿಗದಿತ ಸಮಯದ ಮಾಹಿತಿಯನ್ನು ಜೋಪಾನವಾಗಿಡಿ.
➥ ನಂತರ ಸೇವಾ ವಿನಂತಿ (Service Request) ಆಯ್ಕೆಗಳಲ್ಲಿ RFID Tag ಅಥವಾ ನಿಮ್ಮ ಖಾತೆಗೆ ಸಂಬಂಧಿಸಿದ ವಾಲೆಟ್ ಅನ್ನು ಮುಚ್ಚಲು ವಿನಂತಿಯ ಪ್ರಕಾರವಾಗಿ Closure Request ಆಯ್ಕೆ ಮಾಡಬಹುದು ಅಷ್ಟೇ.
➥ ಇದರ ನಂತರ ನಿಮ್ಮ ನೋಂದಾಯಿತ ಸಂಖ್ಯೆಗೆ ಇದರ ಮಾಹಿತಿ ನೀಡಲಾಗುತ್ತದೆ.
FASTag ಪೋರ್ಟಿಂಗ್ ಮಾಡಬಹುದು?
ಹೌದು, ಈ ಮೂಲಕ ನಿಮ್ಮ ನೀವು ಪ್ರಸ್ತುತ ಹೊಂದಿರುವ FASTag ಅನ್ನು ಬೇರೆ ಬ್ಯಾಂಕಿನೊಂದಿಗೆ ಬಳಸಲು ಸಾಧ್ಯವಿದೆ. ನೀವು ನಿಮ್ಮ ಫಾಸ್ಟ್‌ಟ್ಯಾಗ್ ನಿಷ್ಕ್ರಿಯಗೊಳಿಸುವ ಬದಲು ಅದೇ FASTag ಪೋರ್ಟಿಂಗ್ ಮೂಲಕ ಪೆಟಿಎಂನಿಂದ ಬೇರೊಂದು ಬ್ಯಾಂಕ್ ವರ್ಗಾಯಿಸುತ್ತಿದ್ದರೆ ಇದು ಮೌಲ್ಯಯುತವಾಗಿರುತ್ತದೆ. ಪೋರ್ಟ್ ಮಾಡಲು ನೀವು ಬಯಸುವ ಹೊಸ ಬ್ಯಾಂಕಿನ ಗ್ರಾಹಕರ ಸಪೋರ್ಟ್ ಸಂಖ್ಯೆಗೆ ಕರೆ ಮಾಡಿ ಮತ್ತು ಅವರ ಸೂಚನೆಗಳನ್ನು ಅನುಸರಿಸಬಹುದು. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆ ಯಾವ ಬ್ಯಾಂಕಿನಲ್ಲಿದೆಯೋ ಅಲ್ಲಿಂದಲೇ ನಿಮ್ಮ ಹೊಸ FASTag ಅನ್ನು ಪಡೆಯಬಹುದು.
Paytm ಪೇಮೆಂಟ್ ಬ್ಯಾಂಕ್ ಬ್ಯಾಲೆನ್ಸ್ ಏನಾಗುತ್ತೆ?
ಪೆಟಿಎಂ ಬಳಕೆದಾರರು ತಮ್ಮ Paytm Payments Bank ವಾಲೆಟ್ ಮತ್ತು ಡೆಪಾಸಿಟ್ ಮಾಡಿರುವ ಹಣವನ್ನು ಪ್ರಸ್ತುತ ಸಾಮಾನ್ಯ ಬಳಕೆಯಂತೆ ಯಾವುದೇ ಅಡ್ಡಿಗಳಿಲ್ಲದೆ ಬಳಸಬಹುದು. ಇದರೊಂದಿಗೆ ಹಣ ಕಳುಹಿಸಲು ಅಥವಾ ಪಡೆಯಲು 29ನೇ ಫೆಬ್ರವರಿ 2024 ವರೆಗೆ ಬಳಸಬಹುದು ಇದರ ನಂತರ ಇವೆಲ್ಲ ಬಂದ್ ಆಗಲಿವೆ. ಆದ್ದರಿಂದ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ನಿಮ್ಮ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಜೋಡಿತವಾಗಿರುವ ಫಾಸ್ಟ್ಯಾಗ್ ಅಥವಾ ಪ್ರೀಪೇಡ್ ಇನ್ಸ್ಟ್ರುಮೆಂಟ್ಸ್ ಟಾಪಪ್ ಮಾಡುವುದು ಮತ್ತು ನಿಮ್ಮ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಹಣವನ್ನು ಡೆಪಾಸಿಟ್ ಮಾಡುವುದನ್ನು ಇಂದಿನಿಂದಲೇ ನಿಲ್ಲಿಸುವುದು ಉತ್ತಮ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile