ನಿಮ್ಮ Smartphone ಹಳೆದುಹೋದರೆ ಅಥವಾ ಯಾರಾದರೂ ಕದ್ದರೆ ಗಾಬರಿಯಾಗದೆ ಮೊದಲು ಈ ಕೆಲಸ ಮಾಡಿ!

ನಿಮ್ಮ Smartphone ಹಳೆದುಹೋದರೆ ಅಥವಾ ಯಾರಾದರೂ ಕದ್ದರೆ ಗಾಬರಿಯಾಗದೆ ಮೊದಲು ಈ ಕೆಲಸ ಮಾಡಿ!
HIGHLIGHTS

ಯಾರದೇ ಫೋನ್ (Smartphone) ಕಳೆದುಹೋದಾಗ ಅಥವಾ ಯಾರಾದ್ರು ಕದ್ದಾಗ ಗಾಬರಿಯಾಗೋದು ಸಹಜ.

ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ ಬೇರೆ ಯಾವುದಾರೊಂದು ಫೋನ್ ಅಥವಾ ಲ್ಯಾಪ್‌ಟಾಪ್‌‌ನಲ್ಲಿ www.google.com/android/find ಹೋಗಿ

ನಿಮ್ಮ ಸ್ಮಾರ್ಟ್ಫೋನ್ ಬ್ರಾಂಡ್, ಮಾಡೆಲ್ ನಂಬರ್, IMEI ನಂಬರ್ ಮತ್ತು IP ವಿಳಾಸವನ್ನು ಬೇರೆ ಎಲ್ಲಾದರೂ ಒಂದು ಕಡೆ ಜೋಪಾನವಾಗಿ ಬರೆದಿಟ್ಟುಕೊಳ್ಳುವುದು ಉತ್ತಮ

ಮೊದಲಿಗೆ ಯಾರದೇ ಫೋನ್ (Smartphone) ಕಳೆದುಹೋದಾಗ ಎಲ್ಲಾರಿಗೂ ಗಾಬರಿಯಾಗೋದು ಸಹಜ. ಆದರೆ ಒಂದು ವೇಳೆ ನಿಮಗೆ ಈ ಅಂಶಗಳು ತಿಳಿದಿದ್ದರೆ ಅಷ್ಟಾಗಿ ಗಾಬರಿಗೊಳ್ಳುವ ಅಗತ್ಯವಿಲ್ಲ. ಇದರ ನಡುವೆ ನಮ್ಮ ಡೇಟಾವನ್ನು ರಕ್ಷಿಸಲು ನಾವು ಮರೆಯುತ್ತೇವೆ. ಅದನ್ನು ಕಾಳಜಿ ವಹಿಸದಿದ್ದರೆ ಸುಲಭವಾಗಿ ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ನಿಮ್ಮ ವೈಯಕ್ತಿಕ ಫೋಟೋಗಳು, ವೀಡಿಯೊಗಳು ಮತ್ತು ಫೈಲ್‌ಗಳನ್ನು ವಂಚಕರಿಂದ ಸುರಕ್ಷಿತವಾಗಿಡಲು ನಿಮ್ಮ ಸಿಮ್ ಅನ್ನು ನಿರ್ಬಂಧಿಸುವ ಮೊದಲು ಡೇಟಾವನ್ನು ಡಿಲೀಟ್ ಮಾಡುವುದು ಮತ್ತು ನಿಮ್ಮ ಫೋನ್ ಅನ್ನು ನಿರ್ಬಂಧಿಸುವುದು ಪ್ರಥಮ ಕಾರ್ಯವಾಗಿರುತ್ತದೆ.

ಈಗ ನೀವು Smartphone ಅಲ್ಲಿ ಮಾಡಬೇಕಿರುವುದು ಏನು ?

ಫೋನ್ ನೀವೇ ಕಳೆದುಕೊಂಡಲ್ಲಿ ಅಥವಾ ಯಾರಾದರೂ ಕದ್ದಲ್ಲಿ ಗಾಬರಿಯಾಗಿ ಆಕಾಶವೇ ತಲೆ ಮೇಲೆ ಬಿದ್ದಂತಾ ಭಾಷಾವಾಗುವುದು ಸಹಜವಾದರೂ ಆ ಸಂದರ್ಭ ಬರುವ ಮುಂಚೆಯೇ ನಿಮ್ಮ ಫೋನ್‌ನಲ್ಲಿರುವ ಜಿಮೈಲ್ ಖಾತೆಯ ಇಮೇಲ್ ಐಡಿ ಮತ್ತು ಅದರ ಪಾಸ್ವರ್ಡ್ ಜೊತೆಗೆ ನಿಮ್ಮ ಸ್ಮಾರ್ಟ್ಫೋನ್ ಬ್ರಾಂಡ್, ಮಾಡೆಲ್ ನಂಬರ್, IMEI ನಂಬರ್ ಮತ್ತು IP ವಿಳಾಸವನ್ನು ಬೇರೆ ಎಲ್ಲಾದರೂ ಒಂದು ಕಡೆ ಜೋಪಾನವಾಗಿ ಬರೆದಿಟ್ಟುಕೊಳ್ಳುವುದು ಉತ್ತಮ. ಇದು ಕೇವಲ ನಿಮ್ಮ ಫೋನ್ ಮಾತ್ರವಲ್ಲ ನಿಮ್ಮ ಕುಟುಂಬದವರ ಮತ್ತು ಸ್ನೇಹಿತರ ಅಲ್ಲದೆ ನೀವು ಯಾರಿಗಾದರೂ ಗಿಫ್ಟ್ ನೀಡಿದ್ರು ಅದರ ಮಾಹಿತಿಯನ್ನು ಈ ರೀತಿಯಲ್ಲಿ ಸ್ಟೋರ್ ಮಾಡುವುದರಿಂದ ಕಳುವಾದ ಸಮಯದಲ್ಲಿ ಹೆಚ್ಚು ಸಹಕಾರಿಯಾಗಲಿದೆ.

Also Read: 32MP ಸೆಲ್ಫಿ ಕ್ಯಾಮೆರಾ ಮತ್ತು Powerful ಪ್ರೊಸೆಸರ್‌ನ OPPO Find X7 Series ಶಿಘ್ರದಲ್ಲೇ ಬಿಡುಗಡೆ

ಫೋನ್ ಕಳೆದುಹೋದಾಗ ಗಾಬರಿಯಾಗದೆ ಫೋನ್ ನಿರ್ಬಂಧಿಸಿ

ನಮ್ಮ ಫೋನ್ ಕಳೆದುಹೋದಾಗ ಅಥವಾ ಕಳವಾದಾಗ ನಾವು ಸಾಮಾನ್ಯವಾಗಿ ಎಫ್‌ಐಆರ್ ದೂರನ್ನು ದಾಖಲಿಸುತ್ತೇವೆ ಅಥವಾ ಅದನ್ನು ಪತ್ತೆಹಚ್ಚಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ನಂತರ ನೀವು CEIR ಅಧಿಕೃತ ವೆಬ್‌ಸೈಟ್ ಆಗಿದ್ದು ದೂರಸಂಪರ್ಕ ಇಲಾಖೆಯು ಮೊಬೈಲ್ ಫೋನ್ ಕಳ್ಳತನವನ್ನು ನಿರುತ್ಸಾಹಗೊಳಿಸಲು ಮತ್ತು ಮೊಬೈಲ್ ಫೋನ್ ಮಾಲೀಕರಿಗೆ ತಮ್ಮ ಕಳೆದುಹೋದ/ಕಳುವಾದ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ಅಥವಾ ಅನಿರ್ಬಂಧಿಸಲು ಸಹಾಯ ಮಾಡಲು ಪ್ರಾರಂಭಿಸಿದೆ. ನೀವು ವೆಬ್‌ಸೈಟ್‌ಗೆ www.ceir.gov.in ಭೇಟಿ ನೀಡಬಹುದು.

Smartphone - CEIR website

ನಿಮ್ಮ ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್ ಅನ್ನು ನಿರ್ಬಂಧಿಸಲು ಫಾರ್ಮ್ ಅನ್ನು ಭರ್ತಿ ಮಾಡಿ. ನೀವು ಎಫ್‌ಐಆರ್ ದಾಖಲಿಸಬೇಕು ಮತ್ತು ಮೊಬೈಲ್ ಖರೀದಿಯ ಸರಕುಪಟ್ಟಿ ಪೊಲೀಸ್ ದೂರು ಸಂಖ್ಯೆ ಮತ್ತು ನಿಮ್ಮ ಫೋನ್ ಕಳೆದುಕೊಂಡ ಸ್ಥಳದ ಮಾಹಿತಿಯಂತಹ ಕೆಲವು ದಾಖಲೆಗಳು ಮತ್ತು ವಿವರಗಳನ್ನು ಒದಗಿಸಬೇಕಾಗುತ್ತದೆ. ಒಮ್ಮೆ ನೀವು ಫಾರ್ಮ್ ಅನ್ನು ಸಲ್ಲಿಸಿದ ನಂತರ ನಿಮ್ಮ ಕಳೆದುಹೋದ ಫೋನ್ ಅನ್ನು ನಿರ್ಬಂಧಿಸಲು ನಿಮ್ಮ ಅರ್ಜಿಯನ್ನು ಅಂಗೀಕರಿಸಲಾಗುತ್ತದೆ.

Smartphone ಡೇಟಾವನ್ನು ಡಿಲೀಟ್ ಮಾಡುವುದು

➥ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ ಬೇರೆ ಯಾವುದಾರೊಂದು ಫೋನ್ ಅಥವಾ ಲ್ಯಾಪ್‌ಟಾಪ್‌‌ನಲ್ಲಿ www.google.com/android/find ಹೋಗಿ ನಿಮ್ಮ ಜಿಮೈಲ್ ಖಾತೆಯ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ. ನಂತರ ನಿಮ್ಮ ಫೋನ್ ವಿವರ ಮತ್ತು ಸ್ಥಳವನ್ನು ನಿಮಗೆ ತೋರಿಸಲಾಗುತ್ತದೆ. ಈಗ ‘ಸೆಟ್ ಅಪ್ ಸೆಕ್ಯೂರ್ ಅಂಡ್ ಎರೇಸ್’ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಎಲ್ಲಾ ಕಳೆದುಹೋದ/ಕಳುವಾದ ಫೋನ್ ಡೇಟಾವನ್ನು ದೂರದಿಂದಲೇ ಡಿಲೀಟ್ ಮಾಡಬಹುದು.

➥ಮತ್ತೊಂದೆಡೆ ಐಫೋನ್ ಬಳಕೆದಾರರು www.icloud.com/find/ ಭೇಟಿ ನೀಡಬಹುದು ಮತ್ತು ಅವರ Apple ID ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಬಹುದು. ನಿಮ್ಮ ಆಪಲ್ ಫೋನ್ಗಳ ಪಟ್ಟಿಯನ್ನು ನಿಮಗೆ ತೋರಿಸಲಾಗುತ್ತದೆ. ಆದ್ದರಿಂದ ನೀವು ಡಿಲೀಟ್ ಮಾಡಲು ಬಯಸುವ ಫೋನ್ ಅನ್ನು ಆಯ್ಕೆ ಮಾಡಿ ಮತ್ತು ‘Delete’ ಟ್ಯಾಪ್ ಮಾಡಿ.

➥ಆದರೆ ಫೋನ್ ಸಂಖ್ಯೆ ಅಥವಾ ಮೆಸೇಜ್ ಅನ್ನು ನಮೂದಿಸಲು ನಿಮ್ಮನ್ನು ಕೇಳಿದರೆ ಫೋನ್ ಕಳೆದುಹೋಗಿದೆ ಅಥವಾ ನಿಮ್ಮನ್ನು ಹೇಗೆ ಸಂಪರ್ಕಿಸುವುದು ಎಂದು ನೀವು ಸೂಚಿಸಬಹುದು. ಫೋನ್ಗಳ ಲಾಕ್ ಮಾಡಿದ ಸ್ಕ್ರಿನ್ ಮೇಲೆ ಫೋನ್ ಸಂಖ್ಯೆ ಮತ್ತು ಮೆಸೇಜ್ ಅನ್ನು ಗೋಚರಿಸುತ್ತದೆ.

➥ನಿಮ್ಮ ಕಳೆದುಹೋದ/ಕಳುವಾದ ಐಫೋನ್ ಆಫ್‌ಲೈನ್‌ನಲ್ಲಿದ್ದರೆ ಮುಂದಿನ ಬಾರಿ ಆನ್‌ಲೈನ್‌ನಲ್ಲಿರುವಾಗ ರಿಮೋಟ್ ಡಿಲೀಟ್ ಮಾಡುವಿಕೆ ಕಾಣಬಹುದು. ಆದರೆ ಡಿಲೀಟ್ ಮಾಡುವ ಮೊದಲು ಫೋನ್ ನೀವು ಕಂಡುಕೊಂಡರೆ ನೀವು ವಿನಂತಿಯನ್ನು ರದ್ದುಗೊಳಿಸಬಹುದು.

ಆದಷ್ಟು ಬೇಗ ಸಿಮ್ ಕಾರ್ಡ್ ಅನ್ನು ನಿರ್ಬಂಧಿಸಿ

ನಿಮ್ಮ ಫೋನ್ ಕಳೆದುಹೋದಾಗ/ಕಳುವಾದಾಗ ಮಾಡಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ಸಿಮ್ ಕಾರ್ಡ್ ಅನ್ನು ನಿರ್ಬಂಧಿಸುವುದು. ಮೊದಲು ನಿಮ್ಮ ಫೋನ್ ಹುಡುಕಲು ಪ್ರಯತ್ನಿಸದ ನಂತರ ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡಿ ಮುಗಿಸಿ. ಏಕೆಂದರೆ ಯಾರೂ ನಿಮ್ಮ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯುವುದು ಬಹು ಮುಖ್ಯವಾಗಿದೆ. ಅದಕ್ಕಾಗಿ ನಿಮ್ಮ ಎಫ್‌ಐಆರ್ ದೂರಿನ ಪ್ರತಿಯೊಂದಿಗೆ ನಿಮ್ಮ ಟೆಲಿಕಾಂ ಆಪರೇಟರ್‌ ಸ್ಟೋರ್ಗಳಿಗೆ ಭೇಟಿ ನೀಡಬೇಕಾಗುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo