WiFi Calling: ನಿಮಗೊತ್ತಾ ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕರೆ ಮಾಡಲಾಗುವುದು! ಈ ಸಣ್ಣ ಕೆಲಸ ಮಾಡಿ

WiFi Calling: ನಿಮಗೊತ್ತಾ ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕರೆ ಮಾಡಲಾಗುವುದು! ಈ ಸಣ್ಣ ಕೆಲಸ ಮಾಡಿ
HIGHLIGHTS

ಕರೆಗಳಿಗಾಗಿ ನೀವು ಮೊಬೈಲ್ ಸಿಮ್ ಅನ್ನು ಪ್ರತ್ಯೇಕವಾಗಿ ರೀಚಾರ್ಜ್ ಮಾಡುವ ಅಗತ್ಯವಿಲ್ಲ

ಇದರಲ್ಲಿ ನೀವು HD ವಾಯ್ಸ್ ಕರೆಗಳನ್ನು ಮಾಡಲು ಸಾಧ್ಯ. ಉತ್ತಮ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.

ಸ್ಮಾರ್ಟ್‌ಫೋನ್ ವೈಫೈ ಕರೆ ಮಾಡುವ ವೈಶಿಷ್ಟ್ಯವನ್ನು ಹೊಂದಿದೆ. ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ

ವೈಫೈ ಕಾಲಿಂಗ್ ಬಗ್ಗೆ ನಿಮಗೆ ಎಷ್ಟು ತಿಳಿದಿದೆ? ನಿಮಗೆ ಅದರ ಬಗ್ಗೆ ತಿಳಿದಿಲ್ಲದಿದ್ದರೆ ಇಂದೇ ತಿಳಿಯಿರಿ. ಸರಳವಾಗಿ ಹೇಳುವುದಾದರೆ ವೈಫೈ ಕರೆ ಎನ್ನುವುದು ನಿಮ್ಮ ಸಿಮ್ ಕಾರ್ಡ್‌ನ ಸೆಲ್ಯುಲಾರ್ ನೆಟ್‌ವರ್ಕ್ ಬದಲಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ನೀವು ಯಾರೊಂದಿಗೂ ಮಾತನಾಡಲು ಸಾಧ್ಯವಾಗುವ ತಂತ್ರಜ್ಞಾನವಾಗಿದೆ. ವೈಫೈ ಕರೆ ಮಾಡಲು ಯಾವುದೇ ಕಂಪನಿಯ ಬ್ರಾಡ್‌ಬ್ಯಾಂಡ್ ಸಂಪರ್ಕವು ನಿಮಗಾಗಿ ಕೆಲಸ ಮಾಡುತ್ತದೆ. ನೀವು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದಿರಬೇಕು ಮತ್ತು ವೈಫೈ ಕರೆಯನ್ನು ಬೆಂಬಲಿಸುವ ಮೊಬೈಲ್ ಹೊಂದಿರಬೇಕು.

ಈ Wi-Fi ಕಾಲಿಂಗ್ ಬಳಸಲು ಫೋನ್‌ನಲ್ಲಿ ಯಾವ ಫೀಚರ್ ಅಗತ್ಯವಿರಬೇಕು?

ಇತ್ತೀಚಿನ ದಿನಗಳಲ್ಲಿ ನೀವು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ವೈಫೈ ಕರೆ ಮಾಡುವ ವೈಶಿಷ್ಟ್ಯವನ್ನು ಪಡೆಯುತ್ತೀರಿ ಆದ್ದರಿಂದ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಅಂತಹ ಫೋನ್ ಕರೆಗಳಿಗೆ ಸೆಲ್ಯುಲಾರ್ ನೆಟ್ವರ್ಕ್ ಅಗತ್ಯವಿಲ್ಲ. ಕಡಿಮೆ ಅಥವಾ ಶೂನ್ಯ ನೆಟ್‌ವರ್ಕ್ ಕವರೇಜ್‌ನಲ್ಲಿ ನೀವು HD ಧ್ವನಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಕೇವಲ ಉತ್ತಮ ವೇಗದ ವೈಫೈ ಸಂಪರ್ಕವಿರಬೇಕು. ಉದಾರಣೆಗಾಗಿ ವೊಡಾಫೋನ್ ಗ್ರಾಹಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ.

Vodafone Idea Wifi ಸೌಲಭ್ಯವನ್ನು ಆನ್ ಮಾಡಲು ಕ್ರಮಗಳು

– ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ

– ವೈಫೈ ಮತ್ತು ನೆಟ್‌ವರ್ಕ್ ಆಯ್ಕೆಯನ್ನು ಆರಿಸಿ.

– ಇಲ್ಲಿ ನೀವು ಸಿಮ್ ಮತ್ತು ನೆಟ್‌ವರ್ಕ್ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಿ.

– ಈಗ ನೀವು ಸಕ್ರಿಯ ಸಿಮ್ ಅನ್ನು ಆಯ್ಕೆ ಮಾಡಬೇಕು.

– ಇಲ್ಲಿ VoLTE ಮತ್ತು Wi-Fi ಕರೆ ಎರಡನ್ನೂ ಸಕ್ರಿಯಗೊಳಿಸಿ.

– ಈ ರೀತಿಯಾಗಿ ನೀವು ವೈಫೈ ಕರೆಗಳನ್ನು ಬಳಸಬವುದು.

ವೈಫೈ ಕಾಲಿಂಗ್‌ನ ಒಂದು ಪ್ರಯೋಜನವೆಂದರೆ ಇದರಲ್ಲಿ ನೀವು ಧ್ವನಿ ಕರೆಗಳಿಗಾಗಿ ಮೊಬೈಲ್ ಸಿಮ್ ಅನ್ನು ಪ್ರತ್ಯೇಕವಾಗಿ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಸಾಧನದ ಇಂಟರ್ನೆಟ್ ಉತ್ತಮ ವೇಗದಲ್ಲಿ ಆನ್ ಆಗಿರಬೇಕು. ಇದರಲ್ಲಿ ನಿಮ್ಮ ಸಿಮ್ ಕಾರ್ಡ್ ಕಂಪನಿಯ ನೆಟ್‌ವರ್ಕ್ ಉತ್ತಮವಾಗಿಲ್ಲದ ಸ್ಥಳಗಳಲ್ಲಿಯೂ ನೀವು ಸುಲಭವಾಗಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಆದರೆ ಬ್ರಾಡ್‌ಬ್ಯಾಂಡ್ ಮೂಲಕ ವೈಫೈ ಕರೆ ಮಾಡುವ ಸೌಲಭ್ಯದೊಂದಿಗೆ ನೀವು ಅದೇ ಸಿಮ್ ಕಾರ್ಡ್‌ನೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo