ಭಾರತದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಸೇವೆಗಳ ಮತ್ತೊಂದು ಹೊಸ ಅಪ್ಡೇಟ್ ಈಗ ಭಾರಿ ಸಡ್ಡು ಮಾಡುತ್ತಿದೆ. ಹಿಟಾಚಿ ಪಾವತಿ ಸೇವೆಗಳು (HPS) ಭಾರತದ ಮೊದಲ UPI ATM ಸೇವೆಯನ್ನು ಪ್ರಾರಂಭಿಸಿದೆ. ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಯೋಗದೊಂದಿಗೆ ಸಂಯೋಜಿಸಲಾಗಿದ್ದು ಇನ್ಮೇಲೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಅಪ್ಲಿಕೇಶನ್ ಬಳಸಿಕೊಂಡು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳಿಲ್ಲದೆ ಹಣವನ್ನು ಹಿಂಪಡೆಯಲು ಅನುಮತಿಸುತ್ತದೆ. NCP ಮತ್ತು NCR ಕಾರ್ಪೊರೇಷನ್‌ನಿಂದ ನಡೆಸಲ್ಪಡುವ UPI ATM ಅನ್ನು ಇನ್ನೂ ಸಾರ್ವಜನಿಕವಾಗಿ ಇನ್ನು ನಿಯೋಜಿಸಲಾಗಿಲ್ಲವಾದರೂ ಹಂತ ಹಂತವಾಗಿ ಹೊರ ಬರಲು ಸಜ್ಜಾಗಿದೆ.
ಈ ಲೇಟೆಸ್ಟ್ UPI ATM ಸೌಲಭ್ಯವನ್ನು ಜನರು ಕಾರ್ಡ್‌ಗಳ ಬಳಕೆಯಿಲ್ಲದೆ ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಅನುಕೂಲಕರ ಮತ್ತು ಸುರಕ್ಷಿತ ಮಾರ್ಗವಾಗಿದೆ. UPI ATM ಯುಪಿಐನ ಜನಪ್ರಿಯತೆ ಮತ್ತು ಭದ್ರತೆಯನ್ನು ಎಟಿಎಂಗಳ ವ್ಯಾಪಕ ವ್ಯಾಪ್ತಿ ಮತ್ತು ಲಭ್ಯತೆಯೊಂದಿಗೆ ಬರುತ್ತದೆ. NPCI ವೆಬ್‌ಸೈಟ್‌ನ ಪ್ರಕಾರ ಒಮ್ಮೆ ಗ್ರಾಹಕರು ATM ಅಲ್ಲಿ ತಮ್ಮ UPI ಬಳಸಿ ನಗದು ಹಿಂಪಡೆಯುವಿಕೆಯ ಆಯ್ಕೆಯನ್ನು ಆರಿಸಿ ನೀವು ಬಳಸುವ ಮೊತ್ತವನ್ನು ನಮೂದಿಸಿ ಪಿನ್ ನೀಡಿ ಮೊತ್ತವನ್ನು ನಮೂದಿಸಿದ ನಂತರ ಬಳಕೆಯ ಡೈನಾಮಿಕ್ QR ಕೋಡ್ ATM ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡಿ ಹಣವನ್ನು ಪಡೆಯಬಹುದು.
ಪ್ರಸ್ತುತ ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಇದನ್ನು ಪ್ರದರ್ಶಿಸಲಾಗಿದೆ. ಬ್ಯಾಂಕ್ ಯುಪಿಐ ಎಟಿಎಂಗಳಿಗಾಗಿ ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂತೆಗೆದುಕೊಳ್ಳುವ (ICCW) ತಂತ್ರಜ್ಞಾನವನ್ನು ಬಳಸಿದೆ. ಈ ತಂತ್ರದಲ್ಲಿ ಹಣವನ್ನು ಹಿಂಪಡೆಯಲು ಯಾವುದೇ ಕಾರ್ಡ್ ಅಗತ್ಯವಿಲ್ಲ. UPI-ಸಕ್ರಿಯಗೊಳಿಸಿದ ಮೊಬೈಲ್ ಅಪ್ಲಿಕೇಶನ್ ಮೂಲಕ ಬ್ಯಾಂಕ್ ಆಫ್ ಬರೋಡಾ UPI ಎಟಿಎಂಗಳಿಂದ ತನ್ನ ಮತ್ತು ಇತರ ಬ್ಯಾಂಕ್ ಗ್ರಾಹಕರು ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಹೇಳುತ್ತದೆ.
ಮೊದಲಿಗೆ UPI ATM ಸೇವೆ ಲಭ್ಯವಿರುವ ಸೆಂಟರ್ಗಳಿಗೆ ಭೇಟಿ ನೀಡಿ.
ನಂತರ UPI ಕಾರ್ಡ್‌ಲೆಸ್ ಕ್ಯಾಶ್" ಆಯ್ಕೆಯು ಅದರ ಪರದೆಯಲ್ಲಿ ಲಭ್ಯವಿರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಇದರ ನಂತರ ನಗದು ಹಿಂಪಡೆಯುವಿಕೆಗೆ ಒಂದು ಆಯ್ಕೆ ಇರುತ್ತದೆ, ಅದನ್ನು ಆಯ್ಕೆಮಾಡಿ.
ಈಗ QR ಕೋಡ್ ಪರದೆಯ ಮೇಲೆ ತೋರಿಸುತ್ತದೆ, ನಿಮ್ಮ ಫೋನ್‌ನಲ್ಲಿ UPI ಅಪ್ಲಿಕೇಶನ್ ತೆರೆಯಿರಿ ಮತ್ತು ಅದನ್ನು ಸ್ಕ್ಯಾನ್ ಮಾಡಿ.
ಇದರ ನಂತರ ನೀವು ಹಣವನ್ನು ಹಿಂಪಡೆಯಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
ಇದರ ನಂತರ ಪಿನ್ ನಮೂದಿಸಿ ಮತ್ತು ನಂತರ ವಹಿವಾಟು ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ವಹಿವಾಟು ಮುಗಿದ ನಂತರ ಎಟಿಎಂನಿಂದ ನಗದನ್ನು ಪಡೆಯಬಹುದು.
UPI ATM ಸೇವೆಯನ್ನು ನೀವು ಬಳಸಲು ಯೋಚಿಸುತ್ತಿದ್ದರೆ ಮೊದಲಿಗೆ ಇದರ ಲಿಮಿಟ್ ಅನ್ನು ಸಹ ತಿಳಿದಿರುವುದು ಉತ್ತಮ. ನೀವು ಈ ಸೇವೆಯನ್ನು ಬ್ಯಾಂಕ್ ಆಫ್ ಬರೋಡಾದ UPI ಎಟಿಎಂನಿಂದ ನೀವು ಒಮ್ಮೆಗೆ ಸುಮಾರು 10,000 ರೂಗಳನ್ನು ಮಾತ್ರ ಪಡೆಯಬಹುದು. ಇದಕ್ಕಾಗಿ ಈಗಾಗಲೇ ಅಸ್ತಿತ್ವದಲ್ಲಿರುವ UPI ದೈನಂದಿನ ಮಿತಿ ನಿಯಮವು ಅನ್ವಯಿಸುತ್ತದೆ. ಬ್ಯಾಂಕ್ ಆಫ್ ಬರೋಡಾ ಒಂದು ಉದಾಹರಣೆಯಾಗಿದ್ದು ನಿಮೆಲ್ಲಾ UPI ATM ಸೇವೆಯಲ್ಲಿ ಈ ,ಮೊತ್ತವನ್ನು ಮಾತ್ರ ಪಡೆಯಬಹುದು ಎಂಬುದನ್ನು ತಿಳಿದಿರಲಿ.