ಫಾಸ್ಟಾಗ್ ಎಂದರೇನು? ಈ ಫಾಸ್ಟಾಗ್ ಪಡೆಯುವುದೇಗೆ?

Updated on 06-Jan-2020
HIGHLIGHTS

ಪ್ರತಿಯೊಂದು ಫಾಸ್ಟಾಗ್ ಖಾತೆಯ ವ್ಯಾಲಿಡಿಟಿ 3 ಮತ್ತು 5 ವರ್ಷಗಳಾಗಿದ್ದು ಇದು ಬ್ಯಾಕ್ಗಳ ಮೇಲೆ ಅವಲಂಬಿತವಾಗಿರುತ್ತದೆ

ಈ ಫಾಸ್ಟಾಗ್ ಸದ್ಯಕ್ಕೆ ರಾಷ್ಟ್ರಿಯ ಹೆದ್ದಾರಿಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ರಾಜ್ಯದ ರಸ್ತೆಗಳಲ್ಲಿ ಬಳಸಬವುದು.

ಇದನ್ನು (RFID) ಅಂತ ಕರೆಯುತ್ತಾರೆ ಅಂತಂದ್ರೆ Radio Frequency Identification ಟೆಕ್ನಾಲಜಿ ಆಗಿದ್ದು ಇದು ರೇಡಿಯೋ ಫ್ರಿಕ್ವಾನ್ಸಿ ಬಸಿಕೊಂಡು ಟೂಲ್ ಹಣವನ್ನು ಕಟ್ಟಲು ಸಹಕರಿಸುವ ಪ್ಲಾಟ್ಫಾರ್ಮ್ ಆಗಿದೆ. ಮುಖ್ಯವಾಗಿ ರಾಷ್ಟ್ರಿಯ ಹೆದ್ದಾರಿಗಳಲ್ಲಿ ಭ್ರಷ್ಟಾಚಾರ ಅಥವಾ ದಟ್ಟಣೆಯನ್ನು ತಡೆಗಟ್ಟಲು ಮತ್ತು ಟೋಲ್ಗಳಲ್ಲಿ ನಗದನ್ನು ತಡೆಯುವ ಸಲುವಾಗಿ ಈ ವರ್ಷದ 1ನೇ ಡಿಸೆಂಬರ್ 2019 ರಿಂದ ಎಲ್ಲಾ ಟೋಲ್ ಫ್ರೀ ಲೈನ್ಗಳನ್ನು ಫಾಸ್ಟಾಗ್ ಲೈನ್ಗಳಾಗಿ ಘೋಷಿಸಲು ರಾಷ್ಟ್ರಿಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.

ಫಾಸ್ಟಾಗ್ ಪಡೆಯಲು ದಾಖಲೆಗಳು:

ಇದು ಪ್ರತಿ ಬ್ಯಾಂಕ್ಗಳು ನಿಗದಿ ಪಡಿಸಿರುವ ಪಾಯಿಂಟ್ ಆಫ್ ಸೇಲ್ (POS) ಲೊಕೇಷನ್ಗಳಲ್ಲಿ ಮಾತ್ರ ಲಭ್ಯವಿರುತ್ತದೆ. KYS ಫಾರಂನ್ನು ಭಾರ್ತಿ ಮಾಡಿ ಈ ಕೆಳಗಿನ ಡಾಕ್ಯುಮೆಂಟ್ಗಳೊಂದಿಗೆ ನೀಡಬೇಕಾಗುತ್ತದೆ.

KYS Form     
RC Book
Aadhar Card
Pan Card
Latest 3 Photos

ಗಮನದಲ್ಲಿಡಿ ಈ ಎಲ್ಲ ಡಾಕ್ಯುಮೆಂಟ್ಗಳ ಅಸಲಿ ಪ್ರತಿಗಳನ್ನು ಪರಿಶೀಲನೆಗಾಗಿ ತೋರಿಸಬೇಕಾಗುತ್ತದೆ ಅದರ ಇವುಗಳ ಪ್ರತಿಗಳನ್ನು KYS ಫಾರಂ ಜೊತೆಗೆ ನೀಡಬೇಕಾಗುತ್ತದೆ. ಫಾಸ್ಟಾಗ್ ಖರೀದಿಯನ್ನು ಬ್ಯಾಂಕ್ಗಳು ನಿಗದಿ ಪಡಿಸಿರುವ ಪಾಯಿಂಟ್ ಆಫ್ ಸೇಲ್ ಲೊಕೇಷನ್ ಅಥವಾ ರಿಜಿಸ್ಟರ್ ಟೋಲ್ ಪ್ಲಾಜಾ ಅಲ್ಲಿ ನಿಮ್ಮ ಡಾಕ್ಯುಮೆಂಟ್ಗಳೊಂದಿಗೆ ನಿಮ್ಮ ವಾಹನವನ್ನು ಸಹ ಅಲ್ಲಿರಿಸುವುದು ಅಷ್ಟೇ ಮುಖ್ಯವಾಗಿದೆ. 

ಹೇಗೆ ಪಡೆಯುವುದು:

ಈ ಟ್ಯಾಗನ್ನು ಪಡೆಯಲು ಪಾಯಿಂಟ್ ಆಫ್ ಸೇಲ್, ಟೂಲ್ ಪ್ಲಾಜಾ ಅಥವಾ ಬ್ಯಾಂಕುಗಗಳಿಗೆ ಭೇಟಿ ನೀಡಬೇಕಾಗುತ್ತದೆ.

ಈಗ ಇದು ಏರ್ಟೆಲ್, ಪೆಟಿಎಂ ಮತ್ತು ಅಮೆಜಾನ್ ಮೂಲಕ ಸಹ ಆನ್ಲೈನಲ್ಲಿ ಖರೀದಿಸಬವುದು

ಇದರ ಶುಲ್ಕ ಸುಮಾರು 200 ರೂಗಳಾಗಿದ್ದು ಇದು ಒನ್ ಟೈಮ್ ಟ್ಯಾಗ್ ಸೇರಿಕೊಳ್ಳುವ ಚಾರ್ಜ್ ಆಗಿರುತ್ತದೆ. ಅಂದ್ರೆ ನಿಮ್ಮ ಫಾಸ್ಟಾಗ್ ಅಕೌಂಟ್ ಬಂದ್ ಆದರೆ ಈ ಹಣ ನಿಮಗೆ ಹಿಂತಿರುಗಿಸಲಾಗುತ್ತದೆ. 

ಬ್ಯಾಂಕ್ಗಳಿಂದ ಸುಮಾರು ಗರಿಷ್ಠ 15 ದಿನಗಳಲ್ಲಿ ಫಾಸ್ಟಾಗ್ ನಿಮ್ಮ ಕೈ ಸೇರುತ್ತದೆ. 
     
ನಂತರ ರೀಚಾರ್ಜ್ ಮಾಡಿ ಕಾರುಗಳ ವಿಂಡ್ ಶೀಲ್ಡ್ ಮೇಲೆ ಅಂಟಿಸಬೇಕುತ್ತದೆ. 

ಗಮನಿಸಬೇಕಾದ ಅಂಶಗಳು:

ಪ್ರತಿಯೊಂದು ಫಾಸ್ಟಾಗ್ ಖಾತೆಯ ವ್ಯಾಲಿಡಿಟಿ 3 ಮತ್ತು 5 ವರ್ಷಗಳಾಗಿತ್ತದೆ. ಇದು ಬ್ಯಾಕ್ಗಳ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಫಾಸ್ಟಾಗ್  ಅಕೌಂಟ್ ಕೇವಲ ಒಂದೇ ಒಂದು ವಾಹನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಒಂದು ವೇಳೆ ನೀವು ಯಾವುದೇ ರಿಜಿಸ್ಟರ್ ಟೋಲ್ ಪ್ಲಾಜಾದಿಂದ 10KM ಒಳಗೆ ವಾಸಿಸುತ್ತಿದ್ದಾರೆ ವಿಶೇಷ ರಿಯಾಯಿತಿಯನ್ನು ಪಡೆಯಬವುದು. ಈಗ ಇದರ ಬ್ಯಾಲೆನ್ಸ್ ಬಗ್ಗೆ ನೋಡುವುದಾದರೆ ಕನಿಷ್ಠ ಬ್ಯಾಲೆನ್ಸ್ 100 ರೂಗಳು ಮತ್ತು ಗರಿಷ್ಠ 1 ಲಕ್ಷದವರೆಗೆ ರಿಚಾರ್ಜ್ ಮಾಡಬವುದು. ಈ ಫಾಸ್ಟಾಗ್ ಸದ್ಯಕ್ಕೆ ರಾಷ್ಟ್ರಿಯ ಹೆದ್ದಾರಿಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ರಾಜ್ಯದ ರಸ್ತೆಗಳಲ್ಲಿ ಬಳಸಬವುದು.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :