PAN vs e-PAN: ಪ್ಯಾನ್ ಕಾರ್ಡ್ ಇಂದು ಬಹಳ ಅವಶ್ಯಕವಾದ ದಾಖಲೆಯಾಗಿದೆ. PAN ಕಾರ್ಡ್‌ಗಳು TDS/TCS ಕ್ರೆಡಿಟ್‌ಗಳು, ತೆರಿಗೆ ಪಾವತಿಗಳು, ಆದಾಯದ ರಿಟರ್ನ್ಸ್ ಇತ್ಯಾದಿಗಳಿಗಾಗಿ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ದಾಖಲೆಗಳಾಗಿವೆ. ಆದರೆ ಫೋನ್‌ನಲ್ಲಿ ಇ-ಪ್ಯಾನ್ ಇಟ್ಟುಕೊಳ್ಳುವುದು ಪ್ಯಾನ್ ಕಾರ್ಡ್ ಅನ್ನು ಒಯ್ಯುವುದಕ್ಕಿಂತ ಹೆಚ್ಚು ಅನುಕೂಲಕರವಾಗಿದೆ. PAN ಕಾರ್ಡ್ ಮತ್ತು e-PAN ಎಂದರೇನು ಎಂಬುದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ. ಮತ್ತು ನಿಮ್ಮ ಫೋನ್‌ನಲ್ಲಿ ಇ-ಪ್ಯಾನ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಪ್ಯಾನ್ (PAN) ಶಾಶ್ವತ ಖಾತೆ ಸಂಖ್ಯೆ ಭೌತಿಕ ಕಾರ್ಡ್ ಆಗಿದ್ದು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ತೆರಿಗೆ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಕಾರ್ಡ್ ಅನ್ನು ನೀಡಲಾಗಿದೆ. ಇದು ನಿರ್ದಿಷ್ಟ ವ್ಯಕ್ತಿ ಅಥವಾ ಘಟಕದಿಂದ ಮಾಡಿದ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಲಿಂಕ್ ಮಾಡುತ್ತದೆ. ಇ-ಪ್ಯಾನ್ ಎನ್ನುವುದು ಪ್ಯಾನ್ ಕಾರ್ಡ್‌ನ ಡಿಜಿಟಲ್ ದಾಖಲೆಯಾಗಿದೆ. ಅಂದರೆ ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ ಮತ್ತು ಫೋಟೋ ಮಾಹಿತಿಯನ್ನು ಹೊಂದಿರುವ QR ಕೋಡ್ ಅನ್ನು ಇ-ಪ್ಯಾನ್ ಒಳಗೊಂಡಿದೆ. ಇ-ಪ್ಯಾನ್ ಎನ್ನುವುದು ಪ್ಯಾನ್ ಕಾರ್ಡ್‌ನ ಡಿಜಿಟಲ್ ದಾಖಲೆಯಾಗಿದೆ. ಎಲೆಕ್ಟ್ರಾನಿಕ್ ಪ್ಯಾನ್ (ಇ-ಪ್ಯಾನ್) ನಿಮಗೆ ಉಚಿತವಾಗಿ ಲಭ್ಯವಿದೆ. ಆದರೆ ಇ-ಪ್ಯಾನ್ ತಾತ್ಕಾಲಿಕವಾಗಿರುತ್ತದೆ.
ಈಗ ತಾತ್ಕಾಲಿಕ ಉದ್ದೇಶಗಳಿಗಾಗಿ e-PAN ಅನ್ನು ಬಳಸುವವರು NSDL ಪೋರ್ಟಲ್ ಅಥವಾ UTIITSL ಪೋರ್ಟಲ್ ಮೂಲಕ ಇ-ಪ್ಯಾನ್ ಅನ್ನು ಡೌನ್‌ಲೋಡ್ ಮಾಡಬಹುದು. UTIITSL ಪೋರ್ಟಲ್‌ನಲ್ಲಿ PAN ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವ ಹಂತಗಳು ಇಲ್ಲಿವೆ.
ಹಂತ 1: ಮೊದಲಿಗೆ ನೀವು UTIITSL ನ e-PAN ಪೋರ್ಟಲ್‌ಗೆ ಹೋಗಿ.
ಹಂತ 2: ಅದ್ರಲ್ಲಿ ಪ್ಯಾನ್ ಸಂಖ್ಯೆ, ದಿನಾಂಕ, GSTIN ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ಮತ್ತು ಸಲ್ಲಿಸಿ.
ಹಂತ 3: ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ OTP ಕಳುಹಿಸಲಾಗುತ್ತದೆ.
ಹಂತ 4: ITD ಯಿಂದ ನಿಗದಿಪಡಿಸಿದ 30 ದಿನಗಳೊಳಗೆ e-PAN ಕಾರ್ಡ್ ಅನ್ನು ಮೂರು ಬಾರಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
ಹಂತ 5: ITD ಯಿಂದ ನಿಗದಿಪಡಿಸಿದ 30 ದಿನಗಳ ನಂತರ ಬದಲಾವಣೆಗಳನ್ನು ದೃಢೀಕರಿಸಿದರೆ ಇ-PAN ಕಾರ್ಡ್‌ನ ಡೌನ್‌ಲೋಡ್‌ಗೆ ರೂ.8.26/- ಶುಲ್ಕಗಳು ಅನ್ವಯವಾಗುತ್ತದೆ.
ಹಂತ 5: ನಂತರ ನೀವು ePAN ಅನ್ನು ಡೌನ್‌ಲೋಡ್ ಮಾಡಬಹುದು.
ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್‌ಗೆ 10-ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ನಿಗದಿಪಡಿಸುತ್ತದೆ. PAN ಎಂದರೆ ಶಾಶ್ವತ ಖಾತೆ ಸಂಖ್ಯೆ. ಪ್ಯಾನ್ ಗುರುತಿನ ವ್ಯವಸ್ಥೆಯು ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾಗಿದೆ. ತೆರಿಗೆ ಪಾವತಿಸುವ ಪ್ರತಿಯೊಬ್ಬ ಭಾರತೀಯ ವ್ಯಕ್ತಿ ಅಥವಾ ಘಟಕಕ್ಕೆ ಪ್ಯಾನ್ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಎಲ್ಲಾ ತೆರಿಗೆ ಸಂಬಂಧಿತ ಮಾಹಿತಿಯನ್ನು ಒಂದೇ ಪ್ಯಾನ್ ಸಂಖ್ಯೆಯಲ್ಲಿ ದಾಖಲಿಸಲಾಗುತ್ತದೆ. ಪ್ಯಾನ್ ಕಾರ್ಡ್ ದೇಶಾದ್ಯಂತ ಸೇವೆಗಳಿಗೆ ಉಪಯುಕ್ತವಾಗಿದೆ.