ನಿಮ್ಮ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತೇ ಗೋತ್ತಾ?

ನಿಮ್ಮ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತೇ ಗೋತ್ತಾ?
HIGHLIGHTS

ಒಂದು ವೇಳೆ ನೀವು ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ

20 ಕೋಟಿಗೂ ಹೆಚ್ಚಿನ ಜನರು ಇನ್ನು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಲ್ಲ.

ಭಾರತದಲ್ಲಿ ಪ್ಯಾನ್ ಕಾರ್ಡ್ಗೆ ಆಧಾರ್ ಕಾರ್ಡ್ ನಂಬರ್ ಜೋಡನೆ ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ ಇಲಾಖೆಯ ಪ್ರಕಾರ ಇನ್ನು ಸುಮಾರು 20 ಕೋಟಿಗೂ ಹೆಚ್ಚಿನ ಜನರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಲ್ಲದ ಮಾಹಿತಿ ನೀಡಿದೆ. ಆದ್ದರಿಂದ ಮುಂದಿನ 30ನೇ ಸೆಪ್ಟೆಂಬರ್ 2019 ಒಳಗೆ ಲಿಂಕ್ ಮಾಡಿಕೊಳ್ಳಬೇಕಿದೆ. ಒಂದು ವೇಳೆ ನೀವು ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್ ಮಾನ್ಯತೆಯನ್ನು ರದ್ದುಗೊಳಿಸಲಾಗುವುದೆಂದು ಐಟಿ ಹೇಳಿಕೆ ನೀಡಿದೆ. 

ಇದರ ಮುಖ್ಯ ಕಾರಣ ತೆರಿಗೆ ಅಂದರೆ ಭಾರತದ ತೆರಿಗೆ ನಿಯಂತ್ರಣಕ್ಕಾಗಿ ಮತ್ತು ದೇಶದಲ್ಲಿ ಕೋಟ್ಯಂತರ ಜನರ ಮಾಹಿತಿಗಾಗಿ ಈ ಕ್ಟ್ರಾಮವನ್ನು ಕೈಗೊಂಡಿದೆ. ದೇಶದಲ್ಲಿ ಸುಮಾರು 40 ಕೋಟಿ ಜನರು ತಮ್ಮ ಪ್ಯಾನ್ ಕಾರ್ಡ್ ಅನ್ನು ಈಗಾಗಲೇ ಆಶರ್ ಜೊತೆಗೆ ಲಿಂಕ್ ಮಾಡಿಕೊಂಡಿದ್ದಾರೆ. ಆದರೆ ಈಗ ಈ ಕಾರ್ಯವನ್ನು ಇದಕ್ಕೆ ಅರ್ಧ ಅಂದ್ರೆ ಸುಮಾರು 20 ಕೋಟಿಗೂ ಹೆಚ್ಚಿನ ಜನರು ಇನ್ನು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಲ್ಲ. ಆದ್ದರಿಂದ ಭಾರತದ ಆದಾಯ ತೆರಿಗೆ ವಿಭಾಗ ಇಲಾಖೆ (Income Tax Department) ಕೂಡಲೇ ಮಾಡಿಕೊಳ್ಳಲು ಸೂಚಿಸಿದೆ.

ದಿನದಿಂದ ದಿನಕ್ಕೆ ದೇಶದಲ್ಲಿ ನಕಲಿ ಪ್ಯಾನ್ ಕಾರ್ಡ್ ಬಳಕೆ ಮಾಡುವ ಮೂಲಕ ದೇಶದ ತೆರಿಗೆ ವಂಚನೆ ಮಾಡಲಾಗುತ್ತಿದೆ. ಇದನ್ನು ಪತ್ತೆ ಹಚ್ಚವ ಸಲುವಾಗಿ ಆಧಾರ್ ಕಾರ್ಡ್ ಪ್ಯಾನ್ಗೆ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ನಿಗದಿತ ವೇಳೆಯೊಳಗೆ ನೀವು ಆಧಾರ್ ಕಾರ್ಡ್ ಜೋಡಣೆ ಮಾಡದಿಲ್ಲದೆ ಆ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಇಲಾಖೆ ಸೂಚಿಸಿದೆ. ಮತ್ತೊಂದೆಡೆಯಲ್ಲಿ ಸರ್ಕಾರಿ ಯೋಜನೆಗಳನ್ನು ಪಡೆಯಲು ಆಧಾರ್ ಅತ್ಯಗತ್ಯವಾಗಿದೆ. ಇಲ್ಲವಾದರೆ ಹಲವಾರು ಸೌಲಭ್ಯಗಳು ಮತ್ತು ನಗದು ವ್ಯವಹಾರ ನಡೆಸಲು ಕಷ್ಟವಾಗಬವುದು.

ಪಾನ್ ಕಾರ್ಡನ್ನು ಯಾರಿಗೂ ವರ್ಗಾಯಿಸಲು ಸಾಧ್ಯವಿಲ್ಲ. ಇದು ಯುನಿವರ್ಸಲ್ ಗುರುತಿನ ಚೀಟಿಯ ಹಾಗೆ ಕಾರ್ಯನಿರ್ವಹಿಸುತ್ತದೆ. ಆದಾಯ ತೆರಿಗೆ ಪಾವತಿ ಹಾಗೂ ಹಣಕಾಸು ವ್ಯವಹಾರಗಳು ಈ ಖಾತೆ ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತದೆ. ಸದ್ಯಕ್ಕೆ ಪಾನ್ ಕಾರ್ಡ್ ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಕಡ್ಡಾಯವಾಗಿ ಬೇಕಾಗಿದೆ. ಹಾಗಾಗಿ ನಿಮ್ಮ ಪಾನ್​​ ಕಾರ್ಡ್​ ರದ್ದು ಮಾಡುವ ಮುನ್ನವೇ ಆಧಾರ್​​ ನಂಬರ್​​ ಜೋಡಣೆ ಮಾಡಿಕೊಳ್ಳಿ ಮತ್ತು ಈ ಮಾಹಿತಿಯನ್ನು ತಿಳಿಯದವರೊಂದಿಗೆ ಹಂಚಿಕೊಳ್ಳಿರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo