PAN Aadhaar Link: ನಿಮ್ಮ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ ಈ ಪ್ರಮುಖ ಸಮಸ್ಯೆ ಎದುರಾಗುತ್ತವೆ!

PAN Aadhaar Link: ನಿಮ್ಮ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ ಈ ಪ್ರಮುಖ ಸಮಸ್ಯೆ ಎದುರಾಗುತ್ತವೆ!
HIGHLIGHTS

ಆಧಾರ್‌-ಪ್ಯಾನ್ ಲಿಂಕ್ ಮಾಡಲು ಸಾಧ್ಯವಾಗದಿದ್ದರೆ ನಿಮಗೆ ಆಗುವ ಸಮಸ್ಯೆಗಳು ಇಲ್ಲಿದೆ.

ನೀವು ಪ್ಯಾನ್ ಕಾರ್ಡ್ ಹೊಂದಿದ್ದರೂ ಅದನ್ನು ನಿಮಗೆ ಬಳಸಲು ಸಾಧ್ಯವಾಗುವುದಿಲ್ಲ ಎಂಬುದು ಇದರ ಅರ್ಥ

ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ಕೆಲಸ ಮಾಡುವುದಿಲ್ಲ

PAN Aadhaar Link: ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬೇಕು. ಈಗ ಇದರ ಅವಧಿ ಮುಗಿದಿದ್ದು ಕೇಂದ್ರ ಸರ್ಕಾರ ಮಾರ್ಚ್ 31ರ ವರೆಗೆ 1000 ರೂ ದಂಡ ಪಾವತಿಯೊಂದಿಗೆ ಅವಕಾಶವನ್ನು ಕಲ್ಪಿಸಿದೆ. ನೀವು ಒಂದು ವೇಳೆ ಮಾರ್ಚ್ 31ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ದರೆ ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ಕೆಲಸ ಮಾಡುವುದಿಲ್ಲ ಎಂದು ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಅಂದರೆ ನೀವು ಪ್ಯಾನ್ ಕಾರ್ಡ್ ಹೊಂದಿದ್ದರೂ ಅದನ್ನು ನಿಮಗೆ ಬಳಸಲು ಸಾಧ್ಯವಾಗುವುದಿಲ್ಲ ಎಂಬುದು ಇದರ ಅರ್ಥ. 

ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ ಈ ಸಮಸ್ಯೆ ಎದುರಾಗುತ್ತವೆ

• ಆಧಾರ್ ಲಿಂಕ್ ಆಗುವ ತನಕ ನಿಮ್ಮ ಪ್ಯಾನ್ ಕೆಲಸ ಯಾವುದೇ ಸರ್ಕಾರಿ ಕಾರ್ಯಗಳಿಗೆ ಮಾನ್ಯವಾಗಿರುವುದಿಲ್ಲ.

• ಪ್ಯಾನ್ ಇಲ್ಲದೆ ನೀವು ಒಂದೇ ಬಾರಿಗೆ 5000 ರೂ ಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ಹಿಂಪಡೆಯಲು ಸಾಧ್ಯವಾಗುವುದಿಲ್ಲ.

• ನೀವು ಬ್ಯಾಂಕ್‌ನಿಂದ ಹೊಸ ಡೆಬಿಟ್/ ಕ್ರೆಡಿಟ್ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ.

• ಪ್ಯಾನ್ ಇಲ್ಲದೇ ಇದ್ದರೆ ಡಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಿಸದಿದ್ದಲ್ಲಿ ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

• ಷೇರು ಮಾರುಕಟ್ಟೆಯಲ್ಲಿ ವಹಿವಾಟು ಸಾಧ್ಯವಾಗುವುದಿಲ್ಲ.

• ಮ್ಯೂಚುವಲ್ ಪಂಡ್ ಹೂಡಿಕೆ ಬ್ಲಾಕ್ ಆಗುತ್ತದೆ.

ಆಧಾರ್-ಪ್ಯಾನ್ ಏಕೆ ಲಿಂಕ್ ಮಾಡಬೇಕು?

ಈಗ ಕೊಟ್ಟಿರುವ ಸಮಯದವರೆಗೂ ನೀವು ಆಧಾರ್-ಪ್ಯಾನ್ ಲಿಂಕ್ ಮಾಡಲು ಸಾಧ್ಯವಾಗದಿದ್ದರೆ ನಿಮಗೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ನಕಲಿ ಪ್ಯಾನ್ ಕಾರ್ಡ್ಗಳ ಪ್ರಕರಣಗಳು ಕಂಡು ಬಂದಿವೆ. ಇದರಿಂದಾಗಿ ಹಣಕಾಸಿನ ವಂಚನೆಯಂತಹ ಘಟನೆಗಳು ನಡೆದಿದ್ದು ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವ ಕಾರಣದಿಂದಾಗಿ ತೆರಿಗೆ ವಂಚನೆಯಂತಹ ಪ್ರಕರಣಗಳು ಹೆಚ್ಚಾಗಿವೆ.

ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

• ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in/ ಹೋಗಿ

• ಈಗಾಗಲೇ ನೋಂದಾಯಿಸದಿದ್ದರೆ ನೋಂದಾಯಿಸಿ.

• ನಿಮ್ಮ ಪ್ಯಾನ್ ಸಂಖ್ಯೆ (PAN) ನಿಮ್ಮ ಬಳಕೆದಾರ ID ಆಗಿರುತ್ತದೆ.

• ಈಗ ನಿಮ್ಮ ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಬೇಕು.

• ನಂತರ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಆಧಾರ್ನೊಂದಿಗೆ ಪ್ಯಾನ್ ಲಿಂಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಇದು ಬರದಿದ್ದರೆ 'ಪ್ರೊಫೈಲ್ ಸೆಟ್ಟಿಂಗ್ಸ್' ಗೆ ಹೋಗಿ 'ಲಿಂಕ್ ಆಧಾರ್' ಮೇಲೆ ಕ್ಲಿಕ್ ಮಾಡಿ.

• ಈಗ ಪ್ಯಾನ್ ನಲ್ಲಿ ಹುಟ್ಟಿದ ದಿನಾಂಕ ಮತ್ತು ಲಿಂಗದ ವಿವರಗಳು ಇಲ್ಲಿ ಕಾಣಿಸುತ್ತವೆ.

• ಈ ವಿವರಗಳನ್ನು ನಿಮ್ಮ ಆಧಾರ್ ವಿವರಗಳೊಂದಿಗೆ ಹೊಂದಿಸಿ. ಈ ವಿವರವು ಎರಡೂ ದಾಖಲೆಗಳಲ್ಲಿ ಹೊಂದಿಕೆಯಾಗದಿದ್ದರೆ ನೀವು ತಪ್ಪಾಗಿರುವುದನ್ನು ಸರಿಪಡಿಸಬೇಕಾಗುತ್ತದೆ.

• ವಿವರಗಳು ಹೊಂದಾಣಿಕೆಯಾಗಿದ್ದರೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು "ಈಗ ಲಿಂಕ್" ಬಟನ್ ಮೇಲೆ ಕ್ಲಿಕ್ ಮಾಡಿ.

• ನಿಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸುವ ಪಾಪ್-ಅಪ್ ಸಂದೇಶವು ಕಾಣಿಸಿಕೊಳ್ಳುತ್ತದೆ.

ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಪರಿಶೀಲಿಸುವುದು ಹೇಗೆ?

• UIDAI ವೆಬ್ಸೈಟ್ https://uidai.gov.in/ ಗೆ ಭೇಟಿ ನೀಡಿ.

• ಆಧಾರ್ ಸೇವೆಗಳ ಮೆನುವಿನಿಂದ ಆಧಾರ್ ಲಿಂಕ್ ಮಾಡುವ ಸ್ಟೇಟಸ್ ಅನ್ನು ಆಯ್ಕೆಮಾಡಿ.

• ನಂತರ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಗೆಟ್ ಸ್ಟೇಟಸ್ ಬಟನ್ ಮೇಲೆ ಕ್ಲಿಕ್ ಮಾಡಿ.

• ಇಲ್ಲಿ ನೀವು ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು.

• ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡುವ ಸ್ಟೇಟಸ್ ಅನ್ನು ಪರಿಶೀಲಿಸಲು ಗೆಟ್ ಲಿಂಕ್ ಮಾಡುವ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

• ನಂತರ ನಿಮ್ಮ ಆಧಾರ್ ಪ್ಯಾನ್ನೊಂದಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಸ್ಕ್ರಿನ್ ಮೇಲೆ ನೋಡಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo