ವೆಸ್ಟರ್ನ್ ಡಿಜಿಟಲ್ ಭಾರತದಲ್ಲಿ ಹೊಸ 400GB ಸ್ಯಾನ್ಡಿಸ್ಕ್ ಅಲ್ಟ್ರಾ ಮೈಕ್ರೊ SDXC UHS-I ಕಾರ್ಡ್ ಅನ್ನು ಪ್ರಾರಂಭಿಸಿದೆ. ಇದು ಕಂಪೆನಿಯಿಂದ ಅತಿ ಹೆಚ್ಚು ಸಾಮರ್ಥ್ಯದ ಕಾರ್ಡುಗಳಲ್ಲಿ ಒಂದಾಗಿದೆ. ಮತ್ತು ವೇಗವಾಗಿ ಲೋಡ್ ಮಾಡುವ ವೇಗ ಮತ್ತು ಹೆಚ್ಚಿನ ಸ್ಟೋರೇಜ್ ಸಾಮರ್ಥ್ಯವನ್ನು ನೀಡುವ ಭರವಸೆ ಮಾಡುತ್ತದೆ. 400GB ಸ್ಯಾನ್ಡಿಸ್ಕ್ ಅಲ್ಟ್ರಾ ಮೈಕ್ರೊ SDXC UHS-I ಕಾರ್ಡ್ ಸದ್ಯಕ್ಕೆ 19,999 ರೂಗಳಲ್ಲಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಂತಹ ಆನ್ಲೈನ್ ಚಿಲ್ಲರೆ ವ್ಯಾಪಾರದ ಮೂಲಕ ಲಭ್ಯವಾಗುತ್ತದೆ.
ಅದರಲ್ಲು ಅಮೆಝೋನಿಗೆ ಹೋಲಿಸಿದರೆ ಫ್ಲಿಪ್ಕಾರ್ಟ್ ಬೆಸ್ಟ್ ಬೆಲೆಗೆ ನೀಡುತ್ತಿದೆ. ಈ ಕಂಪನಿಯು ಈ ಕಾರ್ಡ್ ಖರೀದಿಸುವ ಹತ್ತು ವರ್ಷದ ಲಿಮಿಟೆಡ್ ವಾರಂಟಿಯನ್ನು ಸಹ ನೀಡುತ್ತದೆ. ಈ ಹೊಸ 400GB ಸ್ಯಾನ್ಡಿಸ್ಕ್ ಅಲ್ಟ್ರಾ ಮೈಕ್ರೊ ಎಸ್ಡಿ UHS-I ಕಾರ್ಡ್ 100MBps ಟ್ರಾನ್ಸ್ಫರ್ ವೇಗವನ್ನು ನೀಡುವ ಸಮರ್ಥವನ್ನು ಹೊಂದಿದೆ. ಇದರಿಂದ ಗ್ರಾಹಕರು ನಿಮಿಷಕ್ಕೆ 1200 ಫೋಟೊಗಳನ್ನು ಸರಿಸಲು ನಿರೀಕ್ಷಿಸಬಹುದಾಗಿದೆ.
ಈ ಮೈಕ್ರೊ SD ಕಾರ್ಡ್ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೇಟ್ಗಳಿಗೆ ಸೂಕ್ತವಾಗಿದ್ದು ಕಂಪೆನಿಯ ಪ್ರಕಾರ ಸುಅಮರು ಸುಮಾರು 40 ಗಂಟೆಗಳ ಪೂರ್ಣ ಎಚ್ಡಿ ವೀಡಿಯೊಗಳನ್ನು ಹಿಡಿದಿಟ್ಟುಕೊಳ್ಳಬಹುದು. ಮತ್ತು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳಲ್ಲಿ ಭಾರಿ ಅಪ್ಲಿಕೇಶನ್ಗಳನ್ನು ವೇಗವಾಗಿ ಲೋಡ್ ಮಾಡುತ್ತದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.