ಈಗಾಗಲೇ ಮೇಲೆ ತಿಳಿಸಿರುವಂತೆ ಫೋನ್ ಹ್ಯಾಕಿಂಗ್ (Phone Hack) ವಂಚನೆಗಳು ಎಷ್ಟು ಸಾಮಾನ್ಯವಾಗಿದೆ ಎಂದರೆ ಪ್ರತಿ ಐವರಲ್ಲಿ ಇಬ್ಬರು ಈ ಬಲೆಗೆ ಬೀಳುತ್ತಿದ್ದಾರೆ. ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ವಾಸಿಸುವ 73 ವರ್ಷದ ವೈದ್ಯರೊಬ್ಬರು ಈ ಬಲೆಗೆ ಬಿದ್ದಿದ್ದಾರೆ. ಈ ವಿಡಿಯೋ ಕರೆ ವಂಚನೆಯಲ್ಲಿ (Video Call Scam) ಇವರು 2.7 ಲಕ್ಷ ರೂಪಾಯಿ ಕಳೆದುಕೊಂಡಿರುವ ಹೊಸ ಘಟನೆ ಈಗ ಬೆಳಕಿಗೆ ಬಂದಿದೆ. ಘಟನೆ ಕೆಲ ವಾರಗಳ ಹಿಂದೆ ನಡೆದಿತ್ತು ಆದರೆ ಇಂದು ಬೆಂದು ನೊಂದ ವೈದ್ಯರು ಪೋಲೀಸರ ಮೊರೆ ಹೋಗಿ ತನ್ನ ಹಣವನ್ನು ವಸೂಲಿ ಮಾಡಲು ಸಹಾಯವನ್ನು ಕೋರಿದ್ದಾರೆ. ಅಪರಿಚಿತ ವಂಚಕಿಯ ಸಂಖ್ಯೆಗಳಿಂದ ವೈದ್ಯನ ಮೊಬೈಲ್ ನಂಬರ್‌ಗೆ 2-3 ಬಾರಿ ವಿಡಿಯೋ ಕಾಲ್‌ಗಳನ್ನು ಮಾಡಿದ ಬಳಿಕ ವೈದ್ಯನ ಖಾತೆಯಲ್ಲಿ ಭಾರಿ ನಷ್ಟದ ದೊಡ್ಡ ವಂಚನೆ ನಡೆದಿದೆ.
ವಿಡಿಯೋ ಕರೆ ವಂಚನೆಯ (Video Call Scam) ಪ್ರಕರಣವಾಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಶಂಕೆ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ ವೈದ್ಯರೊಬ್ಬರು ಅಪರಿಚಿತ ಫೋನ್ ಸಂಖ್ಯೆಯಿಂದ ಮೂರು ಬಾರಿಯ ವಿಡಿಯೋ ಕಾಲ್‌ಗಳನ್ನು ಸ್ವೀಕರಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿರಿಯ ವೈದ್ಯರಿಗೆ 27ನೇ ಜುಲೈ 2024 ರಂದು ಅಪರಿಚಿತ ಮಹಿಳೆಯಿಂದ ವೀಡಿಯೊ ಕರೆ ಬಂದಿದೆ. ವೈದ್ಯರು ಕರೆಯನ್ನು ತೆಗೆದುಕೊಂಡು ಅಪರಿಚಿತರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ವೈದ್ಯ ಮತ್ತು ಆ ಮಹಿಳೆಯ ನಡುವೆ ಪ್ರಲೋಭನೆಯ ಮಾತುಕತೆಗಳು ಮುಂದುವರೆದಾಗ ಮಹಿಳೆ ವೀಡಿಯೊ ಕರೆಯಲ್ಲಿ ವೈದ್ಯರನ್ನು ಸ್ಟ್ರಿಪ್ ಮಾಡಿದ್ದಾಳೆ.
ಇದರ ನಂತರ ಅವರು ಆ ನಂಬರ್‌ಗೆ ಕರೆ ಮಾಡಿ ಒಂದಿಷ್ಟು ಸಮಯವನ್ನು ಸಹ ಕಳೆದಿದ್ದಾರೆ. ಇದರ ನಂತರ ಮರು ದಿನ ವೈದ್ಯನಿಗೆ ಬೇರೊಂದು ನಂಬರ್‌ನಿಂದ ಕರೆ ಬಂದಿದ್ದು ಆತ ದೆಹಲಿ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದು ನಿಮ್ಮ ವಿಡಿಯೋ ಮತ್ತು ಸಂಭಾಷಣೆಯ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸ್ಪಷ್ಟವಾಗಿ ವಿಡಿಯೋಗಳು ಹರಿದಾಡುತ್ತಿದ್ದು ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಬೇಕೆಂದು ಹಿರಿಯ ವೈದ್ಯರಿಗೆ ತಿಳಿಸಲಾಯಿತು ಇದರ ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ತನ್ನ ವೀಡಿಯೊಗಳನ್ನು ಡಿಲೀಟ್ ಮಾಡಲು ವೈದ್ಯರಿಗೆ ಸಹಾಯ ಮಾಡುವುದಾಗಿ ಹೇಳಿ ಕರೆಯನ್ನು ಕೊನೆಗೊಳಿಸಿದನು.
ಈಗಿರುವಾಗ ವೈದ್ಯರಿಗೆ ಕೊಂಚ ಸಮಯದಲ್ಲೇ ಮತ್ತೊಂದು ಕರೆಯನ್ನು ಬೇರೆ ವ್ಯಕ್ತಿಯಿಂದ ಸ್ವೀಕರಿಸಿದರು ಆತ ನಾನೊಬ್ಬ YouTube ಉದ್ಯೋಗಿ ಎಂದು ಹೇಳಿಕೊಂಡ ವಿಡಿಯೋ ಅಪ್ಲೋಡ್ ಮಾಡದಿರಲು ವೈದ್ಯನಿಂದ ₹41,500 ರೂಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ ಕೂಡಲೇ ಹಣ ವರ್ಗಾವಣೆ ಮಾಡಿದರು. ಇದರ ನಂತರ ಮತ್ತೆ 70,00 ಈ ರೀತಿಯಾಗಿ ಬದಲಿ ಬದಲಿಯಾಗಿ ಹಣ ದೋಚುತ್ತಿರುವ ಈ ಕರೆಗಳ ಬಗ್ಗೆ ಗಮನ ಹರಿಸಿದ ವೈದ್ಯರಿಗೆ ಬರೋಬ್ಬರಿ ಒಟ್ಟು ₹2.7 ಲಕ್ಷ ಲೂಟಿ ಮಾಡಿದ ನಂತರ ಯಾವುದೇ ಹಣ ನೀಡದೆ ಕರೆಗಳನ್ನು ಸ್ವೀಕರಿಸದಿರಲು ನಿರ್ಧರಿಸಿದರು.