Video Call Scam: ಒಂದೆರಡು ವಿಡಿಯೋ ಕಾಲ್‌ ಮಾಡಿ ಬೆಂಗಳೂರಿನ ವೈದ್ಯನ ಖಾತೆಯಿಂದ 2.7 ಲಕ್ಷ ಉಡಾಯಿಸಿದ ವಂಚಕರು!

Video Call Scam: ಒಂದೆರಡು ವಿಡಿಯೋ ಕಾಲ್‌ ಮಾಡಿ ಬೆಂಗಳೂರಿನ ವೈದ್ಯನ ಖಾತೆಯಿಂದ 2.7 ಲಕ್ಷ ಉಡಾಯಿಸಿದ ವಂಚಕರು!
HIGHLIGHTS

ಬೆಂಗಳೂರಿನ ವೈದ್ಯನ ಖಾತೆಯಿಂದ 2.7 ಲಕ್ಷ ಉಡೀಸ್ ಮಾಡಿದ ವಂಚಕರ ಕಹಾನಿ

ಫೋನ್ ಹ್ಯಾಕಿಂಗ್ ವಂಚನೆಗಳು ಎಷ್ಟು ಸಾಮಾನ್ಯವಾಗಿದೆ ಎಂದರೆ ಪ್ರತಿ ಐವರಲ್ಲಿ ಇಬ್ಬರು ಈ ಬಲೆಗೆ ಬೀಳುತ್ತಿದ್ದಾರೆ.

ಇದು ವಿಡಿಯೋ ಕರೆ ವಂಚನೆ (Video Call Scam) ಸೈಬರ್ ಕ್ರೈಂ ಪ್ರಕರಣವಾಗಿದ್ದು ಕರೆ ಮಾಡಿ ಬಲೆ ಬಿಸಲಾಗಿತ್ತು ಎನ್ನುತ್ತಿದ್ದಾರೆ ಪೊಲೀಸರು.

ಈಗಾಗಲೇ ಮೇಲೆ ತಿಳಿಸಿರುವಂತೆ ಫೋನ್ ಹ್ಯಾಕಿಂಗ್ (Phone Hack) ವಂಚನೆಗಳು ಎಷ್ಟು ಸಾಮಾನ್ಯವಾಗಿದೆ ಎಂದರೆ ಪ್ರತಿ ಐವರಲ್ಲಿ ಇಬ್ಬರು ಈ ಬಲೆಗೆ ಬೀಳುತ್ತಿದ್ದಾರೆ. ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ವಾಸಿಸುವ 73 ವರ್ಷದ ವೈದ್ಯರೊಬ್ಬರು ಈ ಬಲೆಗೆ ಬಿದ್ದಿದ್ದಾರೆ. ಈ ವಿಡಿಯೋ ಕರೆ ವಂಚನೆಯಲ್ಲಿ (Video Call Scam) ಇವರು 2.7 ಲಕ್ಷ ರೂಪಾಯಿ ಕಳೆದುಕೊಂಡಿರುವ ಹೊಸ ಘಟನೆ ಈಗ ಬೆಳಕಿಗೆ ಬಂದಿದೆ. ಘಟನೆ ಕೆಲ ವಾರಗಳ ಹಿಂದೆ ನಡೆದಿತ್ತು ಆದರೆ ಇಂದು ಬೆಂದು ನೊಂದ ವೈದ್ಯರು ಪೋಲೀಸರ ಮೊರೆ ಹೋಗಿ ತನ್ನ ಹಣವನ್ನು ವಸೂಲಿ ಮಾಡಲು ಸಹಾಯವನ್ನು ಕೋರಿದ್ದಾರೆ. ಅಪರಿಚಿತ ವಂಚಕಿಯ ಸಂಖ್ಯೆಗಳಿಂದ ವೈದ್ಯನ ಮೊಬೈಲ್‌ ನಂಬರ್‌ಗೆ 2-3 ಬಾರಿ ವಿಡಿಯೋ ಕಾಲ್‌ಗಳನ್ನು ಮಾಡಿದ ಬಳಿಕ ವೈದ್ಯನ ಖಾತೆಯಲ್ಲಿ ಭಾರಿ ನಷ್ಟದ ದೊಡ್ಡ ವಂಚನೆ ನಡೆದಿದೆ.

ವಿಡಿಯೋ ಕರೆ ವಂಚನೆಯ (Video Call Scam) ಪ್ರಕರಣ

ವಿಡಿಯೋ ಕರೆ ವಂಚನೆಯ (Video Call Scam) ಪ್ರಕರಣವಾಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಶಂಕೆ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ ವೈದ್ಯರೊಬ್ಬರು ಅಪರಿಚಿತ ಫೋನ್ ಸಂಖ್ಯೆಯಿಂದ ಮೂರು ಬಾರಿಯ ವಿಡಿಯೋ ಕಾಲ್‌ಗಳನ್ನು ಸ್ವೀಕರಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿರಿಯ ವೈದ್ಯರಿಗೆ 27ನೇ ಜುಲೈ 2024 ರಂದು ಅಪರಿಚಿತ ಮಹಿಳೆಯಿಂದ ವೀಡಿಯೊ ಕರೆ ಬಂದಿದೆ. ವೈದ್ಯರು ಕರೆಯನ್ನು ತೆಗೆದುಕೊಂಡು ಅಪರಿಚಿತರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ವೈದ್ಯ ಮತ್ತು ಆ ಮಹಿಳೆಯ ನಡುವೆ ಪ್ರಲೋಭನೆಯ ಮಾತುಕತೆಗಳು ಮುಂದುವರೆದಾಗ ಮಹಿಳೆ ವೀಡಿಯೊ ಕರೆಯಲ್ಲಿ ವೈದ್ಯರನ್ನು ಸ್ಟ್ರಿಪ್ ಮಾಡಿದ್ದಾಳೆ.

Video Call Scam: Fraudsters stole Rs 2.7 lakh from a Bangalore doctor
Video Call Scam: Fraudsters stole Rs 2.7 lakh from a Bangalore doctor

ಇದರ ನಂತರ ಅವರು ಆ ನಂಬರ್‌ಗೆ ಕರೆ ಮಾಡಿ ಒಂದಿಷ್ಟು ಸಮಯವನ್ನು ಸಹ ಕಳೆದಿದ್ದಾರೆ. ಇದರ ನಂತರ ಮರು ದಿನ ವೈದ್ಯನಿಗೆ ಬೇರೊಂದು ನಂಬರ್‌ನಿಂದ ಕರೆ ಬಂದಿದ್ದು ಆತ ದೆಹಲಿ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದು ನಿಮ್ಮ ವಿಡಿಯೋ ಮತ್ತು ಸಂಭಾಷಣೆಯ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸ್ಪಷ್ಟವಾಗಿ ವಿಡಿಯೋಗಳು ಹರಿದಾಡುತ್ತಿದ್ದು ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಬೇಕೆಂದು ಹಿರಿಯ ವೈದ್ಯರಿಗೆ ತಿಳಿಸಲಾಯಿತು ಇದರ ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ತನ್ನ ವೀಡಿಯೊಗಳನ್ನು ಡಿಲೀಟ್ ಮಾಡಲು ವೈದ್ಯರಿಗೆ ಸಹಾಯ ಮಾಡುವುದಾಗಿ ಹೇಳಿ ಕರೆಯನ್ನು ಕೊನೆಗೊಳಿಸಿದನು.

Also Read: Google Pixel 9 Pro: ಸಕತಾಗಿರೋ ಕ್ಯಾಮೆರಾ, ದೊಡ್ಡ ಡಿಸ್ಪ್ಲೇಯಂತಹ ಫೀಚರ್‌ನೊಂದಿಗೆ ಬೆಲೆ ಮತ್ತು ಮಾರಾಟ ಯಾವಾಗ ತಿಳಿಯಿರಿ!

ಈಗಿರುವಾಗ ವೈದ್ಯರಿಗೆ ಕೊಂಚ ಸಮಯದಲ್ಲೇ ಮತ್ತೊಂದು ಕರೆಯನ್ನು ಬೇರೆ ವ್ಯಕ್ತಿಯಿಂದ ಸ್ವೀಕರಿಸಿದರು ಆತ ನಾನೊಬ್ಬ YouTube ಉದ್ಯೋಗಿ ಎಂದು ಹೇಳಿಕೊಂಡ ವಿಡಿಯೋ ಅಪ್ಲೋಡ್ ಮಾಡದಿರಲು ವೈದ್ಯನಿಂದ ₹41,500 ರೂಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ ಕೂಡಲೇ ಹಣ ವರ್ಗಾವಣೆ ಮಾಡಿದರು. ಇದರ ನಂತರ ಮತ್ತೆ 70,00 ಈ ರೀತಿಯಾಗಿ ಬದಲಿ ಬದಲಿಯಾಗಿ ಹಣ ದೋಚುತ್ತಿರುವ ಈ ಕರೆಗಳ ಬಗ್ಗೆ ಗಮನ ಹರಿಸಿದ ವೈದ್ಯರಿಗೆ ಬರೋಬ್ಬರಿ ಒಟ್ಟು ₹2.7 ಲಕ್ಷ ಲೂಟಿ ಮಾಡಿದ ನಂತರ ಯಾವುದೇ ಹಣ ನೀಡದೆ ಕರೆಗಳನ್ನು ಸ್ವೀಕರಿಸದಿರಲು ನಿರ್ಧರಿಸಿದರು.

Video Call Scam: Fraudsters stole Rs 2.7 lakh from a Bangalore doctor
Video Call Scam: Fraudsters stole Rs 2.7 lakh from a Bangalore doctor

ಇಂತಹ ವಿಡಿಯೋ ಕರೆ ವಂಚನೆಗಳಿಂದ (Video Call Scam) ಸುರಕ್ಷಿತವಾಗಿರುವುದು ಹೇಗೆ?

ನಿಮ್ಮ ಯಾವುದೇ ವೈಯಕ್ತಿಕ ಲೈಫ್ ಅಥವಾ ಬ್ಯಾಂಕಿಂಗ್ ಮಾಹಿತಿಗಳನ್ನು ನೀವು ಇಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ.

ಯಾವುದೇ ಅನುಮಾನಾಸ್ಪದ ಮೆಸೇಜ್ ಅಥವಾ ಕರೆ ಬಂದ ತಕ್ಷಣವೇ ಕನೆಕ್ಷನ್ ಸಂಪರ್ಕ ಕಡಿತಗೊಳಿಸಿ ಮತ್ತು 100 ಸಂಖ್ಯೆಗೆ ಕರೆ ಮಾಡಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ.

ಅಪರಿಚಿತ ಕರೆ, ಲಿಂಕ್ ಅಥವಾ ಕೋಡ್ಗಳಿಗೆ ಸಾಧ್ಯವಾದಷ್ಟು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲೇಬೇಡಿ.

ಆಕಸ್ಮಿಕವಾಗಿ ಬರುವ ಅಪರಿಚಿತ ಕರೆಗಳಲ್ಲಿ ಹೆಣ್ಣಾಗಿರಲಿ ಅಥವಾ ಗಂಡಾಗಿರಲಿ ನಿಮ್ಮ ನಿಯಂತ್ರಣ ಹತೋಟಿಯಲ್ಲಿಟ್ಟು ಮಾತುಕಥೆ ನಡೆಸಿ.

ಅಪರಿಚಿತ ಕರೆಯಲ್ಲಿ ಅನುಮಾನಾಸ್ಪದ ವ್ಯಕ್ತಿ ಪೊಲೀಸ್, ವಕೀಲ ಅಥವಾ ಯಾವುದೇ ಅನ್ಯ ಬೆದರಿಕೆಯ ಮಾತುಗಳನ್ನು100 ಸಂಖ್ಯೆಗೆ ಕರೆ ಮಾಡಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo